





ಪುತ್ತೂರು:ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಆಕ್ ವಾಟಿಕ್ ಸೆಂಟರಲ್ಲಿ ಅಕ್ಟೋಬರ್ 12 ಮತ್ತು 13ರಂದು ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ನಂದನ್ ನಾಯ್ಕ್ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಹಾಗೂ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಇವರು ನೆಹರು ನಗರ ಸುದಾನ ರೆಸಿಡೆನ್ಷಿಯಲ್ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿಯಾಗಿದ್ದು ಮಂಜಲ್ ಪಡ್ಪು ರಕ್ತೇಶ್ವರಿ ವಠಾರದ ನಿವಾಸಿ ರವಿ ಸಂಪತ್ ನಾಯ್ಕ್ ಮತ್ತು ಕ್ಷಮಿತ ದಂಪತಿಯ ಪುತ್ರ. ಇವರು ಪುತ್ತೂರು ಶಿವರಾಮ ಕಾರಂತ ಬಾಲವನದ ಈಜುಕೊಳದಲ್ಲಿ ಪುತ್ತೂರು ಆಕ್ವಾಟಿಕ್ ಕ್ಲಬ್ ನಲ್ಲಿ ಪಾರ್ಥ ವಾರಣಾಸಿ, ದೀಕ್ಷಿತ್, ರೋಹಿತ್ ಮತ್ತು ನಿರೂಪ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.














