ಕ್ಯಾಡ್ ಸೆಂಟರ್‌ನ 11ನೇ ವರ್ಷದ ವಿಜ್ರಂಭಣೆಯ ಆಚರಣೆ

0

ಪುತ್ತೂರು: ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆ ಬಳಿಯ ಡಾಯಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಕ್ಯಾಡ್ ಸೆಂಟರ್‌ಗೆ ಇದೀಗ 11 ವರ್ಷದ ಸಂಭ್ರಮ. ಈ ಸಂಭ್ರಮದ ಅಂಗವಾಗಿ ಸಂಸ್ಥೆಯು ಅ.15 ರಂದು ಕೇಕ್ ಕತ್ತರಿಸುವ ಮೂಲಕ ವಿಜ್ರಂಭಣೆಯಿಂದ ಆಚರಿಸಿತು.

ಈ ವಿಜ್ರಂಭಣೆಯ ಆಚರಣೆಯಲ್ಲಿ ಸಂಸ್ಥೆಯ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಕಟ್ಟಡ ಮಾಲಕ ದೀಪಕ್ ಡಾಯಸ್ ಹಾಗೂ ಕಟ್ಟಡದಲ್ಲಿನ ಇತರ ಅಂಗಡಿಗಳ ಮಾಲಕರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಂಭ್ರಮದ ಆಚರಣೆಯ ಪ್ರಯುಕ್ತ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ಅಶ್ವಿನ್ ಸಿಕ್ವೇರಾರವರು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಉದ್ಯೋಗಿ ರುತ್ವಿಕ್ ಸ್ವಾಗತಿಸಿ, ಪೂರ್ಣಿಮಾರವರು ಮನೋರಂಜನಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಕ್ಯಾಶ್‌ಬ್ಯಾಕ್ ಆಫರ್..
ಸಂಸ್ಥೆಯಲ್ಲಿ ಸಿವಿಲ್, ಮೆಕಾನಿಕಲ್, ಆಟೋ ಕ್ಯಾಡ್, ರೆವಿಟ್,ಕೆಟಿಯಾ , ತ್ರಿಡಿಎಸ್ ಮ್ಯಾಕ್ಸ್, ಸೋಲಿಡ್ ವರ್ಕ್ಸ್, ಸ್ಕೆಚ್‌ಅಪ್, ಪ್ರೈಮವೆರಾ, ANSYS  ಲ್ಯುಮಿಯೋನ್ ಕೋರ್ಸ್‌ಗಳು ಲಭ್ಯವಿದ್ದು, ಸಂಸ್ಥೆಯು ಇದೀಗ ೧೧ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಆಸಕ್ತ ಆಭ್ಯರ್ಥಿಗಳಿಗೆ ಈ ಕೋರ್ಸ್‌ಗಳನ್ನು ಚೀಟಿ ಎತ್ತುವ ಮೂಲಕ ರೂ.5999 ರಿಂದ ರಿಯಾಯಿತಿ ದರದಲ್ಲಿ ಕ್ಯಾಶ್‌ಬ್ಯಾಕ್ ಆಫರ್ ನೀಡಲು ಉದ್ಧೇಶಿಸಿದೆ. ಈ ಆಫರ್ 2022, ಅಕ್ಟೋಬರ್ 22ರ ತನಕ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು 8970844844ನಂಬರಿಗೆ ಸಂಪರ್ಕಿಸಿ.
-ಅಶ್ವಿನ್ ಸಿಕ್ವೇರಾ, ಮುಖ್ಯಸ್ಥರು, ಕ್ಯಾಡ್ ಸೆಂಟರ್

LEAVE A REPLY

Please enter your comment!
Please enter your name here