ಪುತ್ತೂರು: ಇಲ್ಲಿನ ಮಿನಿವಿಧಾನಸೌಧದ ಬಳಿ ನಿಲ್ಲಿಸಿ ಹೋಗಿದ್ದ ರಿಕ್ಷಾವೊಂದರಲ್ಲಿದ್ದ ದಾಖಲೆಗಳನ್ನು ಹೊಂದಿದ್ದ ಬ್ಯಾಗ್ ಒಂದನ್ನು ಕಳವುಗೈಯಲಾಗಿದೆ. ಈ ಬಗ್ಗೆ ರಿಕ್ಷಾ ಮಾಲಕ ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಸುಭಾಸ್ ಕುಲಾಲ್ ರವರು ಪುತ್ತೂರು ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅ. 18 ರಂದು ಬೆಳಿಗ್ಗೆ ಮಿನಿವಿಧಾನಸೌಧದ ಬಳಿ ಅಟೋ ರಿಕ್ಷಾ ನಿಲ್ಲಿಸಿ ಅನ್ಯ ಕಾರ್ಯ ನಿಮಿತ್ತ ತೆರಳಿದ್ದೆ. ಈ ಸಮಯದಲ್ಲಿ ಅಟೋ ರಿಕ್ಷಾದಲ್ಲಿದ್ದ ಬ್ಯಾಗು ಕಾಣೆಯಾಗಿರುತ್ತದೆ. ನನ್ನ ಜಾಗದ ಮೂಲ ದಾಖಲೆಗಳು, ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಆಯುಷ್ಮಾನ್ ಕಾರ್ಡ್, ಇ-ಶ್ರಮ್ ಕಾರ್ಡ್, ಚಿನ್ನದ ಸ್ಕೀಂ ನ 3 ಕಾರ್ಡ್ ಗಳು ಕಾಣೆಯಾಗಿರುತ್ತವೆ’ ಎಂದು ಸುಭಾಸ್ ದೂರಿನಲ್ಲಿ ತಿಳಿಸಿದ್ದಾರೆ. ನಗರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.