`ಸಿ’ ,`ಡಿ’ ದರ್ಜೆ ಸ್ಥಾನಮಾನಕ್ಕಾಗಿ ಬೃಹತ್ ಹೋರಾಟಕ್ಕೆ ಸಿದ್ಧತೆ

0

 

  • ಹೋರಾಟಕ್ಕೆ ಕರೆಕೊಟ್ಟಾಗ ಎಲ್ಲರೂ ಬೆಂಬಲ ನೀಡಿ-ಡಾ|ದೇವಿಪ್ರಸಾದ್ ಬೊಲ್ಮ
  • ಒಳ್ಳೆಯ ರೀತಿಯ ಹೋರಾಟ ಆಗಬೇಕು-ದಯಾನಂದ ಪೆರುವಾಜೆ
  • ಪುತ್ತೂರು ಸಂಘದಿಂದ ಪೂರ್ಣ ಬೆಂಬಲ-ಹೊನ್ನಪ್ಪ
  • ಪ್ರತಿ ತಾಲೂಕಿನಲ್ಲೂ ಹೋರಾಟ ಸಮಿತಿ-ಯಶೋಧರ ಬೆದ್ರ
  • ನನಗಲ್ಲವಾದರೂ ನಮ್ಮ ಮನೆಯವರಿಗಾಗಿ ಹೋರಾಟ-ಪುಟ್ಟರಾಜು

ಪುತ್ತೂರು:ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್.ಡಿ.ಪಿ.ಆರ್‌ನಿಂದ `ಸಿ’ ಮತ್ತು `ಡಿ’ ದರ್ಜೆಯ ಸ್ಥಾನಮಾನಕ್ಕಾಗಿ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟದ ಸಿದ್ಧತೆ ನಡೆಯುತ್ತಿದ್ದು, ಅ.೨೨ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನೌಕರರು ಸಮಾಲೋಚನಾ ಸಭೆ ನಡೆಸಿದರು.ಇಲ್ಲಿನ ತನಕ ತಾಳ್ಮೆಯ ಹೋರಾಟ ಮಾಡುತ್ತಾ ಬಂದಿದ್ದರೂ ಸಿಗುವ ಪ್ರತಿಫಲ ಶೂನ್ಯವಾಗಿದೆ.ಸರಕಾರದ ಹಂತದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂಬ ಭರವಸೆಯ ಮಾತು ಮಾತ್ರ ಕೇಳುತ್ತಿದೆ.ಈ ನಿಟ್ಟಿನಲ್ಲಿ ಶಾಂತಿಯುತ ಹೋರಾಟ ಕೈ ಬಿಟ್ಟು ಮುಂದೆ ರಾಜ್ಯ ಸಂಘ ಕರೆಕೊಟ್ಟಾಗ ಭಿನ್ನ ರೀತಿಯಲ್ಲಿ ಬೃಹತ್ ಹೋರಾಟಕ್ಕೆ ಬೆಂಬಲ ನೀಡಲಿzವೆ ಎಂದು ಸಭೆಯಲ್ಲಿದ್ದವರು ಒಕ್ಕೊರಳಿನಿಂದ ಬೆಂಬಲ ಸೂಚಿಸಿದರು. ಇದೇ ಸಂದರ್ಭದಲ್ಲಿ ಲಂಚ,ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಜನಾಂದೋಲನಕ್ಕೆ ಬೆಂಬಲ ನೀಡಿ,ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕಾರ ಮಾಡಲಾಯಿತು.

ಹೋರಾಟಕ್ಕೆ ಕರೆಕೊಟ್ಟಾಗ ಎಲ್ಲರೂ ಬೆಂಬಲ ನೀಡಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ(ಆರ್.ಡಿ.ಪಿ.ಆರ್)ದ ರಾಜ್ಯಾಧ್ಯಕ್ಷ ಡಾ|ದೇವಿಪ್ರಸಾದ್ ಬೊಲ್ಮ ಅವರು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಹೋರಾಟದ ಸಭೆಯಿಂದಲೇ, ಸಮಾಲೋಚನಾ ಸಭೆಯಲ್ಲಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧರ ಬೆದ್ರ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿ ಮಾತನಾಡಿದರು.ಅವರ ಮಾತನ್ನು ಮೈಕ್ ಮೂಲಕ ಸಭೆಯಲ್ಲಿದ್ದವರಿಗೆ ಕೇಳಿಸಲಾಯಿತು.`ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ರಾಜ್ಯಮಟ್ಟದ ಹೋರಾಟ ಯಶಸ್ವಿಯಾಗಬೇಕು.ಈಗಾಗಲೇ ಬೇರೆ ಬೇರೆ ಜಿಲ್ಲೆಯಲ್ಲಿ ಸಮಾಲೋಚನಾ ಸಭೆ ನಡೆಯುತ್ತಿದೆ.ಪ್ರತಿ ತಾಲೂಕಿನಲ್ಲೂ ವಲಯ ಮಟ್ಟದ ಸಮಿತಿ ರಚನೆ ಮಾಡಬೇಕು.ಪುತ್ತೂರು ತಾಲೂಕಿನಿಂದ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಭಾಗವಹಿಸಬೇಕು.ಹೋರಾಟದ ಕುರಿತು ರಾಜ್ಯಮಟ್ಟದ ಅಧಿಕಾರಿಗಳು. ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ.ಈ ಬಾರಿ ಚಳಿಗಾಲದ ಅಧಿವೇಶನ ಬೆಳಗಾಂನಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ನವೆಂಬರ್ ಕೊನೆಗೆ ಅಥವಾ ಡಿಸೆಂಬರ್ ಪ್ರಥಮ ವಾರದಲ್ಲಿ ಪ್ರತಿಭಟನೆಗೆ ದಿನಾಂಕ ನಿಗದಿ ಪಡಿಸಲಾಗುವುದು.ಗ್ರಾ.ಪಂ.ಸ್ವಚ್ಛತೆ, ಜವಾನ, ಬಿಲ್ ಕಲೆಕ್ಟರ್ ಸೇರಿದಂತೆ ಒಟ್ಟು ನೌಕರರಿಗೆ ತೊಂದರೆ ಆಗದ ರೀತಿಯಲ್ಲಿ ಅನುಮತಿ ಪಡೆಯಲಾಗುತ್ತಿದೆ ಎಂದು ಡಾ|ದೇವಿಪ್ರಸಾದ್ ಹೇಳಿದರು.

ಒಳ್ಳೆಯ ರೀತಿಯ ಹೋರಾಟ ಆಗಬೇಕು: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ದಯಾನಂದ ಪೆರುವಾಜೆ ಅವರು ಮಾತನಾಡಿ, ಗ್ರಾ.ಪಂ ನೌಕರರ ಸಮಸ್ಯೆ ಏನಿದ್ದರೂ ಅದಕ್ಕೆ ನಾವು ಸ್ಪಂದಿಸುತ್ತೇವೆ.ನಾವು ಪ್ರತಿ ಗ್ರಾ.ಪಂಗೂ ಬರುತ್ತೇವೆ.ಅದೇ ರೀತಿ ಹೋರಾಟದಲ್ಲಿ ನಿಮ್ಮೆಲ್ಲರ ಬೆಂಬಲ ಬೇಕು.ಒಳ್ಳೆಯ ರೀತಿಯ ಹೋರಾಟ ಆಗಬೇಕೆಂದರು.

ಪುತ್ತೂರು ಸಂಘದಿಂದ ಪೂರ್ಣ ಬೆಂಬಲ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್.ಡಿ.ಪಿ.ಆರ್‌ನ ಪುತ್ತೂರು ತಾಲೂಕು ಸಂಘದ ಅಧ್ಯಕ್ಷ ಹೊನ್ನಪ್ಪ ಅವರು ಮಾತನಾಡಿ, ನಾನು ೨೦೧೨ರಿಂದ ಸಂಘದಲ್ಲಿ ಸಕ್ರಿಯನಾಗಿ ಕೆಲಸ ಮಾಡುತ್ತಿzನೆ.ಪುತ್ತೂರು ತಾಲೂಕಿನಲ್ಲಿ ನಾವು ಹೋರಾಟಕ್ಕೆ ಧುಮುಕಿ ಆಗಿದೆ.ಈಗಾಗಲೇ ಎಲ್ಲಾ ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆಗಳ ಕುರಿತು ಮನವಿ ನೀಡಲಾಗಿದೆ.ಯಾವುದು ಕೂಡಾ ಫಲಪ್ರದವಾಗಲಿಲ್ಲ.ಹಾಗಾಗಿ ನಾವು ಹೋರಾಟಕ್ಕೆ ಬೆಂಬಲ ನೀಡುತ್ತೇವೆ.ಈ ನಡುವೆ ಜಿಲ್ಲಾ ಸಂಘದ ಪದಾಧಿಕಾರಿಗಳು ಪುತ್ತೂರು ಸಂಘವನ್ನು ಸಂಪರ್ಕಿಸಿ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದರು.

ಪ್ರತಿ ತಾಲೂಕಿನಲ್ಲೂ ಹೋರಾಟ ಸಮಿತಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್.ಡಿ.ಪಿ.ಆರ್‌ನ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಯಶೋಧರ ಬೆದ್ರ ಅವರು ಮಾತನಾಡಿ ಹೋರಾಟದ ಯಶಸ್ವಿಗಾಗಿ ವಲಯ ಸಮಿತಿ ಮತ್ತು ಹೋರಾಟ ಸಮಿತಿ ಮಾಡಬೇಕಾಗಿದೆ.ಕೋಟಾದಲ್ಲಿ ನಡೆಯುವ ಬೆಳಕು ಹಬ್ಬಕ್ಕೆ ಈಗಾಗಲೇ ಪ್ರತಿ ಗ್ರಾ.ಪಂನಲ್ಲಿ ಟಿಶರ್ಟ್ ಪ್ರಿಂಟ್‌ಗೆ ಹೆಸರು ಪಡೆಯುತ್ತಿದ್ದಾರೆ.ನಮ್ಮಿಂದ ಯಾರೂ ಅದಕ್ಕೆ ಹೆಸರು ಕೊಡಬಾರದು ಮತ್ತು ಕಾರ್ಯಕ್ರಮಕ್ಕೆ ಭಾಗವಹಿಸಬಾರದು.ನಮ್ಮ ಸಂಘದ ಸದಸ್ಯರಿಗೆ ವೇತನ ಸರಿಯಾಗಿ ಪಾವತಿ ಆಗುತ್ತಿಲ್ಲವಾದರೆ ಅವರ ಸಮಸ್ಯೆಗೆ ಸ್ಪಂದಿಸಬೇಕು.ರಾಜ್ಯ ಸಂಘದಿಂದ ಹಿಡಿದು ಜಿಲ್ಲಾ ಸಂಘ, ತಾಲೂಕು ಸಂಘದ ಸದಸ್ಯರ ನಿರಂತರ ಸಂಪರ್ಕ ಮತ್ತು ರಾಜ್ಯ ಸಂಘದ ಕಾರ್ಯಚಟುವಟಿಕೆ ತಿಳಿಯುವ ಉzಶದಿಂದ ಎಲ್ಲರೂ ಒಂದೇ ಮೊಬೈಲ್ ಗ್ರೂಪ್ ಮಾಡಬೇಕು.ಈ ನಿಟ್ಟಿನಲ್ಲಿ ಆರ್‌ಡಿಪಿಆರ್ ಟ್ವಿಟ್ಟರ್ ಅಥವಾ ಟೆಲಿಗ್ರಾಮ್ ಪೇಜ್‌ನಲ್ಲಿ ಗ್ರೂಪ್ ಸೇರಿಕೊಳ್ಳುವಂತೆ ಮನವಿ ಮಾಡಿದರು.

ನನಗಲ್ಲವಾದರೂ ನಮ್ಮ ಮನೆಯವರಿಗಾಗಿ ಹೋರಾಟ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಪುಟ್ಟರಾಜು ಅವರು ಮಾತನಾಡಿ ಇಲ್ಲಿನ ತನಕ ನಮ್ಮ ಬೇಡಿಕೆ ಕುರಿತು ಮನವಿ ಕೊಟ್ಟು ಏನೂ ಪ್ರಯೋಜನ ಆಗಿಲ್ಲ.ಹಾಗಾಗಿ ಹೋರಾಟಕ್ಕೆ ಇಳಿದಿzವೆ.ಏನೇ ಆಗಲಿ ಹೋರಾಟದಲ್ಲಿ ರೋಡ್‌ನಲ್ಲೇ ಮಲಗಲೂ ಸಿದ್ಧರಿzವೆ.ಇದು ನಮ್ಮ ಕೊನೇಯ ಹೋರಾಟ ಆಗಬೇಕು. ಹೋರಾಟದ ದಿನ ನೀವು ಪಂಚಾಯತ್ ತೆರೆಯಬೇಡಿ.ಒಂದು ವೇಳೆ ಹೋರಾಟಕ್ಕೆ ಬರಲಾಗದಿದ್ದರೂ ಮನೆಯಲ್ಲೇ ಕೂತಿರಿ. ಪಂಚಾಯತ್‌ಗೆ ಹೋಗಬೇಡಿ.ಈ ಹೋರಾಟ ನನಗಲ್ಲವಾದರೂ ನಮ್ಮ ಮನೆಯವರಿಗಾಗಿ ಹೋರಾಟ ಮಾಡಲೇ ಬೇಕು. ಯಾವ ರೀತಿಯ ಹೋರಾಟ ಆದರೂ ಸರಿ ನಮಗೆ ಸೇವಾ ಭದ್ರತೆ ಬೇಕೇಬೇಕು ಎಂದರು.ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷ ಪ್ರದೀಪ್ ಸಾಂದರ್ಭಿಕ ಮಾತನಾಡಿದರು.

ವಲಯ ಮತ್ತು ತಾಲೂಕು ಹೋರಾಟ ಸಮಿತಿ ರಚನೆ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್.ಡಿ.ಪಿ.ಆರ್‌ಗೆ ಸಂಘದ ಆಜೀವ ಸದಸ್ಯತ್ವ ಮಾಡಲು ನಾಲ್ಕು ವಲಯಗಳನ್ನಾಗಿ ಮಾಡಲಾಯಿತು.ನಾಲ್ಕು ವಲಯಗಳಿಗೆ ಸಂಬಂಧಿಸಿದ ಪಂಚಾಯತ್‌ಗಳು ಆಯಾ ಪಂಚಾಯತ್‌ನ ನೌಕರರಿಂದ ಆಜೀವ ಸದಸ್ಯತ್ವ ಮಾಡಬೇಕೆಂದು ನಿರ್ಣಯಿಸಲಾಯಿತು.ಇದೇ ಸಂದರ್ಭ ತಾಲೂಕು ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು.ಸಮಿತಿ ಅಧ್ಯಕ್ಷರಾಗಿ ಗಣೇಶ್ ಕೆ ಕೆದಂಬಾಡಿ, ಕಾರ್ಯದರ್ಶಿಯಾಗಿ ಜ್ಯೋತಿ ಉಪ್ಪಿನಂಗಡಿ, ಉಪಾಧ್ಯಕ್ಷರಾಗಿ ಕವಿತಾ ಬೆಟ್ಟಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ನೆಟ್ಟಣಿಗೆಮುಡ್ನೂರು ಅವರನ್ನು ಆಯ್ಕೆ ಮಾಡಲಾಯಿತು.ಜಿಲ್ಲಾ ಮತ್ತು ತಾಲೂಕು ಸಮಿತಿ ಅಧ್ಯಕ್ಷರು ಹೋರಾಟ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳನ್ನು ಗೌರವಿಸಿದರು.ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ತಾಲೂಕು ಸಮಿತಿ ಜತೆಕಾರ್ಯದರ್ಶಿ ಮಮತಾ ವರದಿ ವಾಚಿಸಿದರು.ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ್ ಮುಂಡೂರು ಪ್ರಾಸ್ತಾವಿಕವಾಗಿ ಮಾತನಾಡಿ ಆಜೀವ ಸದಸ್ಯತ್ವ ಕುರಿತು ಮಾಹಿತಿ ನೀಡಿ ಸ್ವಾಗತಿಸಿ, ವಂದಿಸಿದರು.

ನಮ್ಮ ಪ್ರಥಮ ಹೋರಾಟವಾಗಿ ಈಗಾಗಲೇ ಕೋಟಾದಲ್ಲಿ ನಡೆಯುವ `ಹೊಳಪು’ ಕಾರ್ಯಕ್ರಮಕ್ಕೆ ನಮ್ಮ ಸಂಘದ ಸದಸ್ಯರು ಯಾರು ಕೂಡಾ ಭಾಗವಹಿಸುವುದಿಲ್ಲ.ಆರಂಭದಲ್ಲಿ ಟೀಶರ್ಟ್ ನಲ್ಲಿ ಹೆಸರು ನೋಂದಾಯಿಸಲು ಪ್ರತಿ ಗ್ರಾ.ಪಂನಿಂದ ಹೆಸರು ನೀಡಲಾಗಿದೆಯಾದರೂ ಯಾರು ಕೂಡಾ ಕಾರ್ಯಕ್ರಮಕ್ಕೆ ಭಾಗವಹಿಸುವುದಿಲ್ಲಹೊನ್ನಪ್ಪ ತಾಲೂಕು ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ

 

ಸುದ್ದಿ ಜನಾಂದೋಲನಕ್ಕೆ ಬೆಂಬಲ -ಲಂಚ ಭ್ರಷ್ಟಾಚಾರ ವಿರುದ್ಧ ಪ್ರತಿಜ್ಞೆ ಸ್ವೀಕಾರ
ಕರ್ನಾಟಕ ರಾಜ್ಯ ಗ್ರಾ.ಪಂ.ನೌಕರರ ಶ್ರೇಯೋಭಿವೃದ್ಧಿ ಸಂಘದ ಸಮಾಲೋಚನಾ ಸಭೆಯ ಆರಂಭದಲ್ಲಿ ಲಂಚ,ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಜನಾಂದೋಲನಕ್ಕೆ ಬೆಂಬಲ ನೀಡಿ, ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕಾರ ನಡೆಯಿತು.ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಲೋಕೇಶ್ ಬನ್ನೂರು ಅವರು ಫಲಕವನ್ನು ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಹೊನ್ನಪ್ಪ ಅವರಿಗೆ ನೀಡಿದರು.ಬಳಿಕ, ಲಂಚ-ಭ್ರಷ್ಟಾಚಾರದ ವಿರುದ್ದ ಘೋಷಣೆ ಕೂಗಿ ಪ್ರತಿಜ್ಞೆ ಸ್ವೀಕರಿಸಲಾಯಿತು.ಕೋಶಾಧಿಕಾರಿ ಮಮತಾ ಪ್ರತಿಜ್ಞಾ ವಿಧಿ ಬೋಧಿಸಿದರು.

 

LEAVE A REPLY

Please enter your comment!
Please enter your name here