









ಪುತ್ತೂರು : ಬೊಳುವಾರು ಓಂ ಶ್ರೀಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆದ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಸಾಂಸ್ಕೃತಿಕ ಕಲಾಕೇಂದ್ರದ ಕಲಾವಿದರಿಂದ ಕೀರ್ತಿ| ಶೇಷ ಚಿದಾನಂದ ಕಾಮತ್ ನಿರ್ದೇಶನದಲ್ಲಿ ನಡೆದು ಬಂದ ಬಾರಿಸು ಕನ್ನಡ ಡಿಂಡಿಮ ತಂಡದಿಂದ ಹಾಡು ಮತ್ತು ನೃತ್ಯಗಳ ಕಾರ್ಯಕ್ರಮ ನಡೆಯಿತು. ತಂಡದ ಕಲಾವಿದರಾದ ಅಶೋಕ್ ಆಚಾರ್, ನವೀನ್ ಐತಾಳ್, ನಿತೇಶ್, ಅಶ್ವಿಜ, ಶ್ರಾವಣಿ ರೈ, ಶರಣ್ಯ ರೈ, ನಿಶಿ, ತನುಷ ಅರಸಿನಮಕ್ಕಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಲಾಕೇಂದ್ರದ ಅಧ್ಯಕ್ಷೆ ವಸಂತಿ ಆರ್. ಐತಾಳ್, ಸರಸ್ವತಿ, ಸತ್ಯಾ ರೈ, ನೀಲಾಂತ್ ಕುಮಾರ್, ಸೌಮ್ಯ ಅರಸಿನಮಕ್ಕಿ ಸಹಕರಿಸಿದರು. ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಡಾ| ಕೃತಿಕ ಆರ್. ಐತಾಳ್ ಕಾರ್ಯಕ್ರಮ ನಿರೂಪಿಸಿದರು.














