ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದ ಭಾಗವಹಿಸುವ ತಾಲೂಕಿನ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ, ಸಮವಸ್ತ್ರ ವಿತರಣೆ

0

ಪುತ್ತೂರು; ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಪುತ್ತೂರು ವಲಯದ ವತಿಯಿಂದ ಜಿಲ್ಲಾ ಮಟ್ಟಡ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಯು ಅ.28ರಂದು ಸುದಾನ ವಸತಿಯುತ ಶಾಲಾ ಎಡ್ವರ್ಡ್ ಹಾಲ್ ನಲ್ಲಿ ನಡೆಯಿತು.

ದ.ಕ‌ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಅ.29ರಂದು ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ಬಾಲಕ, ಬಾಲಕಿಯರ14, 16 ಹಾಗೂ 18 ವರ್ಷದೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟಡ ವಾಲಿಬಾಲ್ ಪಂದ್ಯಾಟ ಆಯೋಜಿಸಿದ್ದು, ಇದರಲ್ಲಿ ಭಾಗವಹಿಸಲಿರುವ ತಾಲೂಕಿನ ವಿದ್ಯಾರ್ಥಿಗಳಿಗೆ ಪುತ್ತೂರು ತಾಲೂಕು ಅಸೋಸಿಯೇಷನ್ ನ ಪುತ್ತೂರು ವಲಯದಿಂದ ವಿದ್ಯಾರ್ಥಿಗಳಿಗೆ ಎರಡು ದಿನಗಳ ತರಬೇತಿ ನೀಡಿ ಅವರಿಗೆ ಸಮವಸ್ತ್ರ ವಿತರಿಸಿದರು. ಪುತ್ತೂರು ತಾಲೂಕಿನಿಂದ ಬಾಲಕರ ಮೂರು 3 ತಂಡ ಹಾಗೂ ಬಾಲಕಿಯರ 3 ತಂಡ ಸೇರಿದಂತೆ ಒಟ್ಟು 6 ತಂಡಗಳ 75 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ಸಮವಸ್ತ್ರ ವಿತರಿಸಿದ ತಾಲೂಕು ಅಸೋಸಿಯೇಷನ್ ನ ಗೌರವಾಧ್ಯಕ್ಷ ರೆ.ಪಾ ವಿಜಯ ಹಾರ್ವಿನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿಯಿರಬೇಕು. ಕ್ರೀಡೆಯಲ್ಲಿ ತೊಡಗಿಸಿ, ಸಾಧಿಸುವ ಛಲವಿರಬೇಕು. ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಬೇಕು. ಇನ್ನಷ್ಟು ಶಿಬಿರಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಬಹಳ ನಿಷ್ಠೆಯಿಂದ ತರಬೇತಿ ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಪ್ರತಿಭೆಗಳಾಗಿ‌ ಹೊರಹೊಮ್ಮಬೇಕು ಎಂದು ಶುಭಹಾರೈಸಿದರು.
ವಾಲಿಬಾಲ್ ರೆಫ್ರೀಬೋರ್ಡ್ ನ ಚೀಫ್ ಮೋನಪ್ಪ ಪಟ್ಟೆ, ತರಬೇತುದಾರ ಗಣೇಶ್ ರೈ ಮುಂಡಾಸು, ಸುದಾನಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪುಷ್ಪರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೀತಿಕಾ ಹಾಗೂ ಶ್ರಾವ್ಯ ಪ್ರಾರ್ಥಿಸಿದರು. ತಾಲೂಕು ಅಸೋಸಿಯೇಷನ್ ನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ ಕಾರ್ಯಕ್ರಮ ನಿರೂಪಿಸಿದರು. ವಾಲಿಬಾಲ್ ಪಾಪೆಮಜಲು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣಾ ವಂದಿಸಿದರು.

LEAVE A REPLY

Please enter your comment!
Please enter your name here