




ಪುತ್ತೂರು:ಉಪ್ಪಳಿಗೆಯಲ್ಲಿ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ದ್ವೇಷ, ಅವಮಾನಕಾರಿ ಭಾಷಣ ಮಾಡಿರುವ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಡಿ.2ರಂದು ನಡೆದಿದ್ದು,ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಜೊತೆಸೇರಿ ವಾದ ಮಂಡನೆಗೆ ದೂರುದಾರರಿಗೂ ನ್ಯಾಯಾಲಯ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿದೆ.



ಡಾ.ಪ್ರಭಾಕರ ಭಟ್ ಅವರಿಗೆ ಈಗಾಗಲೇ ನ್ಯಾಯಾಲಯ ನೀಡಿರುವ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಯಾಗಿದೆ.ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸರ್ಕಾರಿ ಅಭಿಯೋಜಕರಾಗಿರುವ ಜಯಂತಿ ಕೆ.ಭಟ್ ಅವರು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ.ಈ ಪ್ರಕರಣದ ದೂರುದಾರರಾಗಿರುವ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರಿಗೂ ಪ್ರಾಸಿಕ್ಯೂಶನ್ ಜೊತೆ ವಾದ ಮಂಡನೆಗೆ ಅವಕಾಶ ಕೋರಿ ಅವರ ಪರ ವಕೀಲ ಪಿ.ಕೆ.ಸತೀಶನ್ ಅವರು ಬಿಎನ್ಎಸ್ಎಸ್ ಸೆಕ್ಷನ್ 338,339ರಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ದೂರುದಾರರಿಗೆ ಅವಕಾಶ ಕಲ್ಪಿಸಿ,ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿದೆ.ನಿರೀಕ್ಷಣಾ ಜಾಮೀನು ಅರ್ಜಿದಾರ ಡಾ.ಪ್ರಭಾಕರ ಭಟ್ ಅವರ ಪರ ವಕೀಲ ಮಹೇಶ್ ಕಜೆ ಅವರು ವಾದಿಸುತ್ತಿದ್ದಾರೆ.













