ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಆಡಿದ ಬೀಚ್ ವಾಲಿಬಾಲ್ ತಂಡ

0

ಪುತ್ತೂರು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ತರಬೇತಿ ಪಡೆದಿದ್ದ ಆಟಗಾರರು

ಪುತ್ತೂರು: ಕರ್ನಾಟಕ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಉತ್ತರ ಕನ್ನಡ ಹಾಗೂ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಇದರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದ ಕಾಸರಗೋಡು ಈಕೋ ಬೀಚ್‌ನಲ್ಲಿ ಅ.28 , 29, 30ರಂದು ನಡೆದ ರಾಷ್ಟ್ರೀಯ ಬೀಚ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಮಹಿಳೆಯರ ತಂಡ ನಾಲ್ಕನೇ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿದೆ.

ವಿವಿಧ ರಾಜ್ಯಗಳ ಇಪ್ಪತ್ತು ತಂಡಗಳು ಭಾಗವಹಿಸಿದ್ದವು. ಪಂದ್ಯಕೂಟದಲ್ಲಿ ಕರ್ನಾಟಕದ ರಾಜ್ಯ ತಂಡವನ್ನು ಪ್ರತಿನಿಧಿಸಿದ ಆಟಗಾರ್ತಿ ಶಿಲ್ಪ ಹಾಗೂ ಶ್ರೀದೇವಿ ಅವರು ಈ ಮೊದಲು ಸೂರತ್‌ನಲ್ಲಿ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಆಯೋಜಿಸಿದ 36ನೇ ನ್ಯಾಷನಲ್ ಗೇಮ್ಸ್ ಬೀಚ್ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಬೀಚ್ ವಾಲಿಬಾಲ್ ಇತಿಹಾಸದಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ರಾಷ್ಟ್ರೀಯ ಪಂದ್ಯಾಟಕ್ಕೆ ಭಾಗವಹಿಸಿದ್ದು ವಿಶೇಷವಾಗಿದೆ. ಬೀಚ್ ವಾಲಿಬಾಲ್ ಮಹಿಳೆಯರ ತಂಡಕ್ಕೆ ಮಿತ್ರ ವೃಂದ ವಾಲಿಬಾಲ್ ಅಕಾಡೆಮಿಯ ನೇತೃತ್ವದಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಎನ್‌ಐಎಸ್ ರಾಷ್ಟ್ರೀಯ ಕೋಚ್ ಪಿ ವಿ ನಾರಾಯಣ್ ಮತ್ತು ಹಮೀದ್ ಸಾಜ ಅವರು ತರಬೇತಿಯನ್ನು ನೀಡಿದ್ದರು. ನಾರಾಯಣ್ ಅವರು ಸೂರತ್‌ನಲ್ಲಿ ನಡೆದ ನ್ಯಾಷನಲ್ ಗೇಮ್ಸ್‌ನ ತಾಂತ್ರಿಕ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು. ಹಮೀದ್ ಸಾಜ ಅವರು ಪುರುಷರ ಮತ್ತು ಮಹಿಳಾ ತಂಡದ ಕೋಚ್ ಆಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here