ಕಬಕದಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ 23 ಎಕ್ರೆ ಜಮೀನು ಕೆಎಸ್‍ಸಿಎಗೆ-ಸಚಿವ ಸಂಪುಟ ಅನುಮೋದನೆ

0

ಜಿಲ್ಲಾ ಕೇಂದ್ರಕ್ಕೆ ಬೇಕಾಗುವ ಪೂರ್ವ ಸಿದ್ದತೆ
ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಎಲ್ಲಾ ಅರ್ಹತೆಯನ್ನು ಪುತ್ತೂರು ಹೊಂದಿರುವ ನಿಟ್ಟಿನಲ್ಲಿ ಈಗಾಗಲೇ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ 6 ಎಕ್ರೆ ಜಾಗ, ಹೊಸ ತಾಲೂಕು ಕ್ರೀಡಾಂಗಣಕ್ಕೆ ತೆಂಕಿಲದಲ್ಲಿ ಜಾಗಕ್ಕೆ ಎಲ್ಲಾ ರೀತಿಯ ಕಾರ್ಯಗಳು ನಡೆಯುತ್ತಿದೆ.ಜೊತೆಗೆ ಇದೀಗ ಕ್ರಿಕೆಟ್ ಆಟಕ್ಕಾಗಿಯೇ ಕಬಕದಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೂ ನಮ್ಮ ಸರಕಾರ ಅನುಮೋದನೆ ನೀಡಿದೆ.ಇವೆಲ್ಲ ಪುತ್ತೂರಿನ ಸರ್ವ ಅಭಿವೃದ್ಧಿ ದೃಷ್ಟಿಯಿಂದ ನಡೆಯುತ್ತಿದೆ
– ಸಂಜೀವ ಮಠಂದೂರು, ಶಾಸಕರು ಪುತ್ತೂರು.

8 ವರ್ಷದ ಬೇಡಿಕೆಗೆ ಕೊನೆಗೂ -ಫಲ ಸಿಕ್ಕಿತು
ಹಿಂದೆಲ್ಲ ಕ್ರಿಕೆಟ್ ಆಡಲು ಪುತ್ತೂರಿನಲ್ಲಿ ಸರಿಯಾದ ಕ್ರಿಕೆಟ್ ಸ್ಟೇಡಿಯಮ್ ಇರಲಿಲ್ಲ.ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಹೋಗಬೇಕಾಗಿತ್ತು.ಅಲ್ಲೂ ಸರಿಯಾದ ಸ್ಟೇಡಿಯಂ ಇಲ್ಲ.ಆಗ ಕೆಎಸ್‍ಸಿಎ ಸದಸ್ಯತ್ವ ಹೊಂದಿರುವ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಮಾಜಿ ಅಧ್ಯಕ್ಷ ದಿ.ಗಣಪತಿ ನಾಯಕ್ ಅವರ ಮುತುವರ್ಜಿಯಲ್ಲಿ ಬ್ರಿಜೇಶ್ ಪಟೇಲ್ ಮತ್ತು ಬೆಂಗಳೂರಿನ ಸೆಂಚುರಿ ಸಂಸ್ಥೆಯ ದಯಾನಂದ ಪೈ ಅವರ ಪ್ರೋತ್ಸಾಹದಿಂದ ಕ್ರಿಕಿಟ್ ಕ್ರೀಡಾಂಗಣಕ್ಕೆ ಪುತ್ತೂರಿನಲ್ಲಿ ನಾನು ಜಾಗ ಹುಡುಕುವ ಪ್ರಯತ್ನ ಮಾಡಿದೆ.ಕಳೆದ 8 ವರ್ಷಗಳಿಂದ ಸತತವಾಗಿ ಪ್ರಯತ್ನಿಸಲಾಗುತ್ತಿತ್ತು. ಆರಂಭದಲ್ಲಿ ಜಿಲ್ಲಾ„ಕಾರಿ ಇಬ್ರಾಹಿಂ ಪ್ರಯತ್ನ ಮಾಡಿದ್ದರು.ದ.ಕ.ಜಿಲ್ಲಾ„ಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ರಾಜೇಂದ್ರ ಕೆ.ವಿ.ಅವರು ಪುತ್ತೂರಿನಲ್ಲಿ ಸಹಾಯಕ ಕಮಿಷನರ್ ಆಗಿರುವ ಸಂದರ್ಭದಲ್ಲಿ ಅವರ ಆಸಕ್ತಿಯಂತೆ ಕ್ರಿಕೆಟ್ ಕ್ರೀಡಾಂಗಣಕ್ಕೆ ಜಾಗ ಹುಡುಕುವ ಕೆಲಸ ಮಾಡಿ 23 ಎಕ್ರೆ ಜಾಗ ಕಾದಿರಿಸಲಾಗಿತ್ತು. ಆ ಸಂದರ್ಭ ಕ್ರೀಡಾಂಗಣ ಮಂಜೂರಿಗಾಗಿ ಆಗಿನ ಶಾಸಕಿ ಶಕುಂತಳಾ ಶೆಟ್ಟಿಯವರ ಮೂಲಕ ಪ್ರಸಾದ್ ಕೌಶಲ್ ಶೆಟ್ಟಿಯವರು ರಾಜಕೀಯ ಒತ್ತಡ ತಂದಿದ್ದರು.ಆದರೆ ಫೈಲ್ ಮೂವ್ ಅಗಿರಲಿಲ್ಲ.ಕೊನೆಗೆ ಈಗಿನ ಶಾಸಕ ಸಂಜೀವ ಮಠಂದೂರು ಅವರ ಮೂಲಕ ಸಚಿವ ಸುನಿಲ್ ಕುಮಾರ್ ಅವರಿಗೂ ಒತ್ತಡ ತರಲಾಯಿತು.ಶಾಸಕರು ಮುತುವರ್ಜಿ ವಹಿಸಿ ಸಂಪುಟದಲ್ಲಿ ಅನುಮೋದನೆ ಪಡೆಯಲು ಪ್ರಯತ್ನಿಸಿದ್ದಾರೆ.8 ವರ್ಷದ ಬೇಡಿಕೆಗೆ ಕೊನೆಗೂ -ಫಲ ಸಿಕ್ಕಿತು.
ವಿಶ್ವನಾಥ ನಾಯಕ್, ಕಾರ್ಯದರ್ಶಿ ಪುತ್ತೂರು ಯೂನಿಯನ್ ಕ್ರಿಕೆಟರ್ಸ್

ಪುತ್ತೂರು:ಸುಮಾರು 8 ವರ್ಷಗಳ ಬೇಡಿಕೆಯಾಗಿ, ಪುತ್ತೂರಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಇದೀಗ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ(ಕೆಎಸ್‍ಸಿಎ)ಜೊತೆ ಜಮೀನಿಗೆ ಸಂಬಂಧಪಟ್ಟ ಕರಾರು, ದಾಖಲೆಗಳ ವಿನಿಮಯಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
ಕಬಕ ಗ್ರಾಮದ ಸರ್ವೆ ನಂ.260/1ಪಿನಲ್ಲಿ 23.25 ಎಕ್ರೆ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆಂದು ಕಾದಿರಿಸಲಾಗಿದೆ.ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಶಾಸಕ ಸಂಜೀವ ಮಠಂದೂರು ಅವರ ಪ್ರಸ್ತಾವನೆಯಂತೆ ಕ್ರೀಡಾಂಗಣ ನಿರ್ಮಾಣಕ್ಕೆ ಅನುಮೋದನೆ ನೀಡುವ ಕುರಿತು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಪ್ರಸ್ತಾಪಿಸಿದರು.ಈ ಕುರಿತು ಚರ್ಚೆ ನಡೆದು, ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಮತ್ತು ಬಳ್ಳಾರಿಯಲ್ಲಿ ಹೊಸದಾಗಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಅನುಮೋದನೆ ನೀಡಲಾಗಿದೆ.
ಸ್ಥಳೀಯ ಕ್ರಿಕೆಟ್ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಮತ್ತು ಕ್ರಿಕೆಟ್ ಆಟವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಹಿಂದಿರುವ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.ಇದರ ಜೊತೆಗೆ, ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿರುವ ಪುತ್ತೂರಿಗೆ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣದ ಅವಶ್ಯಕತೆ ಇತ್ತು.ಈ ಕ್ರೀಡಾಂಗಣದಿಂದಾಗಿ ಪ್ರವಾಸೋದ್ಯಮ, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ನಗರದ ಬೆಳವಣಿಗೆಗೆ ಸಹಕಾರಿಯಾಗಲಿದೆ.ಕ್ರೀಡಾಂಗಣಕ್ಕೆ ಕಬಕ ಮತ್ತು ಬಲ್ನಾಡು ಮೂಲಕ ರಸ್ತೆಯ ವ್ಯವಸ್ಥೆಯಿದೆ.ಮುಂದೆ ಇದನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆಯಲಿದೆ.

LEAVE A REPLY

Please enter your comment!
Please enter your name here