ಬಂಟ ಸಮಾಜವನ್ನು ಅವಮಾನಿಸಿ, ನಿಂದಿಸಿದ ವ್ಯಕ್ತಿ ವಿರುದ್ಧ ಬಂಟರ ಸಂಘದಿಂದ ಖಂಡನಾ ನಿರ್ಣಯ
ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಇದರ ಕಾರ್‍ಯಕಾರಿ ಸಮಿತಿ ಸಭೆ ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನ. 3ರಂದು ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಅಧ್ಯಕ್ಷತೆಯಲ್ಲಿ ಜರಗಿತು.
ಬಂಟ ಸಮಾಜವನ್ನು ಅವಮಾನಿಸಿ ನಿಂದಿಸುವ ವ್ಯಕ್ತಿಯೊಬ್ಬರ ಹೇಳಿಕೆ ಬಂಟ ಸಮಾಜವನ್ನು ಕೆರಳಿಸಿದೆ. ಬಂಟ ಸಮಾಜವು ಯಾವುದೇ ವ್ಯಕ್ತಿ ಅಥವಾ ಜಾತಿಗಳನ್ನು ಗೌರವದಿಂದ ಕಾಣುವ ಸಮಾಜವಾಗಿರುತ್ತದೆ. ಒಬ್ಬ ವ್ಯಕ್ತಿಯಿಂದ ಇಡೀ ಸಮಾಜವನ್ನು ದೂಷಿಸದೆ, ಎಲ್ಲಾ ಸಮಾಜಗಳು ಸಮಾಜದಲ್ಲಿ ಗೌರವದಿಂದ ಬಾಳಬೇಕೆಂದೇ ನಮ್ಮ ಅಪೇಕ್ಷೆ. ಬಂಟ ಸಮಾಜವನ್ನು ನಿಂದಿಸಿದ ವ್ಯಕ್ತಿಯ ವಿಚಾರಧಾರೆಯನ್ನು ಬಂಟ ಸಮಾಜ ಒಕ್ಕೂರಳಿನಿಂದ ಖಂಡಿಸಿದೆ. ನಿಂದಿಸಿದ ವ್ಯಕ್ತಿಯ ಸಮಾಜದ ಹಿರಿಯರು ಮತ್ತು ಮುಂಚೂಣಿಯ ನಾಯಕರು ಆ ವ್ಯಕ್ತಿಯ ನಡೆಯನ್ನು ಖಂಡಿಸಿ, ಸೂಕ್ತ ಬುದ್ಧಿಯನ್ನು ಮತ್ತು ಎರಡೂ ಸಮಾಜದಲ್ಲಿ ಒಡಕನ್ನು ಮೂಡಿಸದಿರಲು ತಿಳುವಳಿಕೆ ಮಾಡಿಸಬೇಕಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಆಟಿದ ಕೂಟದ ಲೆಕ್ಕಾಚಾರ ಮಂಡನೆ ಮಾಡಲಾಯಿತು. ಬಂಟರ ಸಂಘದಿಂದ ಜಾಗ ಖರೀದಿ ಬಗ್ಗೆ ಅಗ್ರಿಮೆಂಟ್ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಒಪ್ಪಿಗೆ ಪಡೆದುಕೊಳ್ಳಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರುಗಳಾದ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ರೋಶನ್ ರೈ ಬನ್ನೂರು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಎನ್.ಚಂದ್ರಹಾಸ್ ಶೆಟ್ಟಿ, ದಂಬೆಕಾನ ಸದಾಶಿವ ರೈ, ಕಡಮಜಲು ಸುಭಾಷ್ ರೈ, ಮೋಹನ್ ರೈ ಮಾಡಾವು, ರಮೇಶ್ ರೈ ಬೊಳಿಕಲ, ಸಾಜ ರಾಧಾಕೃಷ್ಣ ಆಳ್ವ, ವಿಕ್ರಂ ಶೆಟ್ಟಿ ಅಂತರ, ಶಶಿಕಿರಣ್ ರೈ ನೂಜಿಬೈಲು, ಸಂತೋಷ್ ಶೆಟ್ಟಿ ಸಾಜ, ಎಂ.ಆರ್, ಜಯಕುಮಾರ್ ರೈ, ಮಿತ್ತಳಿಕೆ ಸೂರ್‍ಯನಾಥ ಆಳ್ವ, ಎಚ್.ಶ್ರೀಧರ್ ರೈ ಹೊಸಮನೆ, ಸದಾಶಿವ ರೈ ಸೂರಂಬೈಲು, ಜಗಮೋಹನ್ ರೈ ಸೂರಂಬೈಲು, ತಿಲಕ್ ರೈ ಕುತ್ಯಾಡಿ, ಅಶೋಕ್ ಕುಮಾರ್ ರೈ ನೆಕ್ಕರೆ, ದಿವ್ಯಾನಾಥ ಶೆಟ್ಟಿ ಕಾವು, ಸದಾನಂದ ಶೆಟ್ಟಿ ಕೊರೇಲು, ಪ್ರಕಾಶ್ ರೈ ಸಾರಕರೆ, ಭರತ್ ರೈ ಪಾಲ್ತಾಡಿ, ಹರಿಣಾಕ್ಷಿ ಜೆ.ಶೆಟ್ಟಿ, ಶಾಕುಂತಳಾ ಶೆಟ್ಟಿ, ಶ್ಯಾಮಲ, ಜಯಂತಿ ರೈ, ಲಾವಣ್ಯ ನಾಕ್, ಸ್ವರ್ಣಲತಾ ಜೆ.ರೈ, ನಿತ್ಯಾನಂದ ಶೆಟ್ಟಿ ನೆಲ್ಯಾಡಿ, ಕಿರಣ್‌ಚಂದ್ರ ಬಿ, ಎಂ. ಭಾಸ್ಕರ್ ರೈ, ರವಿಚಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.
ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ವಂದಿಸಿದರು.