ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ದಕ್ಷಿಣ್ಪಿವಿ ಹಾಗೂ ಲಿಕೇಶ್ ಕೆ. ರವರು ರಚಿಸಿದ ಬಹುದ್ದೇಶ ಕೃಷಿ ಸಲಕರಣೆ ಎಂಬ ವಿಜ್ಞಾನ ಮಾದರಿಗೆ ನ. 5ರಂದು ವಿವೇಕಾನಂದ ಸಿಬಿಎಸ್ಇ ಸಂಸ್ಥೆಯಲ್ಲಿ ನಡೆದ ಇನ್ ಸೆಫ್ ರೀಜನಲ್ ಸೈನ್ಸ್ ಫೇರ್ 2022ರಲ್ಲಿ ಹಾನರೇಬಲ್ ಮೆನಶನ್ ಅವಾರ್ಡ್ ಲಭಿಸಿದೆ. ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತಾಧಿಕಾರಿ ರವೀಂದ್ರ ಡಿ.ಇವರ ನಿರ್ದೇಶನದೊಂದಿಗೆ ಶಿಕ್ಷಕಿಯಾದ ಸುಧಾ ಎನ್ ರಾವ್ ರವರು ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ ಶೆಟ್ಟಿ ತಿಳಿಸಿದ್ದಾರೆ.
ದಕ್ಷಿಣ ಪಿವಿ ರವರು ಬಂಟ್ವಾಳ ತಾಲೂಕು ಕೊಡಾಜೆ ಸಮೀಪದ ವಿಶ್ವನಾಥ ಕುಲಾಲ್ – ಪ್ರಮೀಳ ದಂಪತಿಗಳ ಪುತ್ರರಾಗಿದ್ದಾರೆ. ಲಿಕೇಶ್ ಕೆರವರು ಬಂಟ್ವಾಳ ತಾಲೂಲು ಮಾಣಿ ಗ್ರಾಮದ ಚಂದ್ರಶೇಖರ್ ಕೆ. – ಸವಿತಾ ದಂಪತಿಗಳ ಪುತ್ರರಾಗಿದ್ದಾರೆ.