ಅಡ್ಯಾಲು ನಿವಾಸಿಗಳ ರಸ್ತೆ ನಿರ್ಮಾಣ ಕನಸನ್ನು ಸ್ಥಳೀಯರೊಂದಿಗೆ ಸೇರಿಕೊಂಡು ನನಸು ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ದ ಹಸಿರು ಸೇನೆಯ ಪದಾಧಿಕಾರಿಗಳು

0

ವಿಟ್ಲ: ಅಡ್ಯಾಲು ನಿವಾಸಿಗಳ ಕಳೆದ ಹಲವಾರು ವರುಷಗಳ ಬೇಡಿಕೆಯಾಗಿರುವ ರಸ್ತೆ‌ ನಿರ್ಮಾಣ ಕಾರ್ಯವನ್ನು ಸ್ಥಳೀಯರೊಂದಿಗೆ ಸೇರಿಕೊಂಡು ಕರ್ನಾಟಕ ರಾಜ್ಯ ರೈತ ಸಂಘ ದ ಹಸಿರು ಸೇನೆಯ ಪದಾಧಿಕಾರಿಗಳು ಕಾನೂನಾತ್ಮಕವಾಗಿ ಬಗೆಹರಿಸಿದ್ದಾರೆ .

ಸುಮಾರು ಏಳು ಮನೆಗಳನ್ನು ಹೊಂದಿರುವಅಡ್ಯಾಲು ನಿವಾಸಿಗಳು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಈ ಭಾಗದಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಇಡ್ಕಿದು ಗ್ರಾಮ ಪಂಚಾಯತ್, ಜಿಲ್ಲಾಧಿಕಾರಿ, ಶಾಸಕರ ಸಹಿತ ಹಲವಾರಿಗೆ ಮನವಿಯನ್ನು ನೀಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿಂದೆ ನಡೆದ ಚುನಾವಣೆಯನ್ನೂ ಭಹಿಷ್ಕರಿಸುವುದಾಗಿ ಫ್ಲೆಕ್ಸ್ ಅಳವಡಿಸಿದ್ದರು. ಬಳಿಕ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆ ಸಂಪರ್ಕ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮತದಾನ ಮಾಡಿದ್ದರು. ಆದರೆ ಅಧಿಕಾರಿಗಳು ನೀಡಿದ ಭರವಸೆ ಮಾತ್ರ ಭರವಸೆಯ ಅಗಿಯೇ ಉಳಿದಿತ್ತು.

ಇದರಿಂದ ಚಿಂತಿತರಾದ ಪ್ರದೇಶವಾಸಿಗಳು ಕರ್ನಾಟಕ ರಾಜ್ಯ ರೈತ ಸಂಘ ದ ಹಸಿರು ಸೇನೆಯ ಪದಾಧಿಕಾರಿಗಳಲ್ಲಿ ತಮ್ಮ ಅಳಳನ್ನು ತೋಡಿಕೊಂಡಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ರೈತ ಸಂಘದ ಉಪಾಧ್ಯಕ್ಷರಾದ ಸುರೇಶ್ ಭಟ್ಟ್ ಕೊಜಂಬೆ, ದ.ಕ.ಜಿಲ್ಲಾಧ್ಯಕ್ಷರಾದ ಅಮರನಾಥ ಆಳ್ವ ಕರ್ನೂರುಗುತ್ತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ ಸಹಿತ ತಮ್ಮರೈತ ಸಂಘದ ಸದಸ್ಯರು, ಕುಳ, ಅಡ್ಯಾಲು, ಕಬಕದ ಯುವಕರು ಸೇರಿ ಕಾನೂನು ಪ್ರಕಾರವೇ ರಸ್ತೆಯನ್ನು ನಿರ್ಮಿಸಿ ಕೊಡುವಲ್ಲಿ ಸಫಲರಾಗಿದ್ದಾರೆ ಎಂದು ಅಡ್ಯಾಲು ನಿವಾಸಿಗಳು ತಿಳಿಸಿದ್ದಾರೆ‌‌.

LEAVE A REPLY

Please enter your comment!
Please enter your name here