ಪುತ್ತೂರಿಗೆ ಮಂಜೂರಾದ ಹುದ್ದೆಗಳು-4884 | ಭರ್ತಿ-3319 | ಖಾಲಿ-1565
ವರದಿ: ಯತೀಶ್ ಉಪ್ಪಳಿಗೆ
ಪುತ್ತೂರು: ಯಾವುದೇ ಸರಕಾರ ಅಧಿಕಾರಕ್ಕೆ ಬಂದಾಗ ಜನಸಾಮಾನ್ಯರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವುದು ಸಹಜ.ಆದರೆ ಸರಕಾರದ ಯೋಜನೆಗಳು ಪೂರ್ಣಪ್ರಮಾಣದಲ್ಲಿ ಅನುಷ್ಟಾನವಾಗಬೇಕಾದರೆ ಇಲಾಖೆಗಳ ಪಾತ್ರ ಪ್ರಮುಖವಾಗಿದ್ದು ಇಲಾಖೆಗಳಲ್ಲಿಯೂ ಅಗತ್ಯ ಪ್ರಮಾಣದ ಸಿಬ್ಬಂದಿಗಳಿದ್ದಾಗ ಮಾತ್ರ ಯಶಸ್ವಿ ಕಾರ್ಯನಿರ್ವಹಣೆ ಸಾಧ್ಯ.ಈ ನಿಟ್ಟಿನಲ್ಲಿ ಇಲಾಖೆಗಳಿಗೆ ಅಗತ್ಯ ಸಿಬ್ಬಂದಿಗಳ ನೇಮಕ ಸರಕಾರದ ಜವಾಬ್ದಾರಿಯಾಗಿದೆ.ಪುತ್ತೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅಧಿನದ ಇಲಾಖೆಗಳು, ಸಂಸ್ಥೆಗಳು, ನಿಗಮ, ಮಂಡಳಿಗಳು ಸೇರಿದಂತೆ ಒಟ್ಟು 42 ಸರಕಾರಿ ಇಲಾಖಾ ಕಚೇರಿಗಳಿಗೆ ಮಂಜೂರಾದ 4884 ಹುದ್ದೆಗಳಲ್ಲಿ ಕೇವಲ 3319 ಹುದ್ದೆಗಳು ಮಾತ್ರ ಭರ್ತಿಯಾಗಿ ಬರೋಬ್ಬರಿ 1565 ಹುದ್ದೆಗಳು ಖಾಲಿಯಿದೆ.
ಕರ್ನಾಟಕ ರಾಜ್ಯ ಸರಕಾರದಡಿ ಸಾರ್ವಜನಿಕ ಸೇವೆಗಳನ್ನು ನೀಡುವ ಪುತ್ತೂರಿನ ಇಲಾಖಾ ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಎಷ್ಟಿದೆ ಎಂಬುದರ ಅಂಕಿ-ಸAಖ್ಯೆಗಳು ಈಗ ಹೊರಬಿದ್ದಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಜನಸಾಮಾನ್ಯರಿಗೆ ದೈನಂದಿನ ಜೀವನದಲ್ಲಿ ಅತೀ ಅವಶ್ಯಕವಾದ ಕಂದಾಯ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಶಿಕ್ಷಣ ಇಲಾಖೆ, ಆರೋಗ್ಯ, ಮೆಸ್ಕಾಂ, ನಗರಸಭೆ, ಸರಕಾರಿ ಆಸ್ಪತ್ರೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿಯಿದೆ.ಅಲ್ಲದೆ ಬಹುತೇಕ ಇಲಾಖೆಗಳಲ್ಲಿ ದ್ವಿತೀಯ ದರ್ಜೆ ಸಹಾಯಕರು ಹಾಗೂ ಡಿ ಗ್ರೂಪ್ ನೌಕರರ ಹುದ್ದೆಗಳೆಲ್ಲವೂ ಖಾಲಿಯಿದೆ.ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಹೆಚ್ಚಾಗಿವೆ.ನಾಡಕಚೇರಿ, ತಾಲೂಕು ಕಚೇರಿ, ಗ್ರಾಮ ಪಂಚಾಯತ್‌ಗಳ ಮುಂದೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪದೇ ಪದೇ ಅಲೆಯುವಂತಾಗಿದೆ.ಯಾವ್ಯಾವ ಇಲಾಖೆಗೆ ಎಷ್ಟು ಹುದ್ದೆಗಳು ಮಂಜೂರಾಗಿವೆ,ಎಷ್ಟು ಹುದ್ದೆಗಳು ಭರ್ತಿಯಾಗಿದೆ ಹಾಗೂ ಎಷ್ಟು ಹುದ್ದೆಗಳು ಖಾಲಿಯಿದೆ ಎನ್ನುವ ಮಾಹಿತಿ ಇಲ್ಲಿದೆ.
ಕಂದಾಯ ಇಲಾಖೆಯಲ್ಲಿ 73ರಲ್ಲಿ 25 ಹುದ್ದೆ ಖಾಲಿ:
ಕಂದಾಯ ಇಲಾಖೆಗೆ ಮಂಜೂರಾದ 73 ಹುದ್ದೆಗಳ ಪೈಕಿ 48 ಭರ್ತಿಯಾಗಿದ್ದು 25 ಹುದ್ದೆಗಳು ಖಾಲಿಯಿದೆ.ಗ್ರೇಡ್-1 ತಹಶೀಲ್ದಾರ್-1, ಶಿರಸ್ತೇದಾರ್-3, ಪ್ರಥಮ ದರ್ಜೆ ಸಹಾಯಕರು-6, ಕಂದಾಯ ನಿರೀಕ್ಷಕರು-2, ದ್ವಿತೀಯ ದರ್ಜೆ ಸಹಾಯಕರು-5, ಗ್ರಾಮ ಆಡಳಿತಾಧಿಕಾರಿಗಳು-29, ಡಿ ಗ್ರೂಪ್ 2 ಹುದ್ದೆಗಳು ಭರ್ತಿಯಾಗಿದೆ. ಗ್ರೇಡ್-2 ತಹಶೀಲ್ದಾರ್-1, ಶಿರಸ್ತೇದಾರ್-1, ದ್ವಿತೀಯ ದರ್ಜೆ ಸಹಾಯಕರು-4, ಗ್ರಾಮ ಆಡಳಿತಾಧಿಕಾರಿ-6, ಬೆರಳಚ್ಚುಗಾರರು-2, ಡಿ.ಗ್ರೂಪ್-7, ವಾಹನ ಚಾಲಕ, ಎಟೆಂಡರ್, ದಫೆದಾರ್ ತಲಾ ಒಂದು ಹುದ್ದೆ ಖಾಲಿಯಿದೆ.
ಸಹಾಯಕ ಆಯುಕ್ತರ ಕಚೇರಿಯಲ್ಲಿ 17ರಲ್ಲಿ 10 ಹುದ್ದೆ ಖಾಲಿ:
ಪುತ್ತೂರು ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮಂಜೂರಾದ 17 ಹುದ್ದೆಗಳಲ್ಲಿ 7 ಹುದ್ದೆ ಮಾತ್ರ ಭರ್ತಿಯಾಗಿದೆ.10 ಹುದ್ದೆಗಳು ಖಾಲಿಯಿದೆ.ಸಹಾಯಕ ಆಯುಕ್ತರು-1, ಗ್ರೇಡ್ 2 ತಹಶೀಲ್ದಾರ್-1, ಪ್ರಥಮ ದರ್ಜೆ ಸಹಾಯಕರು-5, ದ್ವಿತೀಯ ದರ್ಜೆ ಸಹಾಯಕರು-1 ಹುದ್ದೆ ಭರ್ತಿಯಾಗಿದೆ.ಶೀಘ್ರ ಲಿಪಿಗಾರ-1, ದ್ವಿತೀಯ ದರ್ಜೆ ಸಹಾಯಕ-1, ಬೆರಳಚ್ಚುಗಾರರು-2, ಡಿ ಗ್ರೂಪ್-3, ವಾಹನ ಚಾಲಕ ಹಾಗೂ ಅಟೆಂಡರ್-1 ಹುದ್ದೆ ಖಾಲಿಯಿದೆ.ವಿವಿಧ ತಾಲೂಕುಗಳ ಒಟ್ಟು 4 ಮಂದಿ ಗ್ರಾಮ ಆಡಳಿತಾಽಕಾರಿಗಳು ನಿಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಾಲೂಕು ಪಂಚಾಯತ್‌ನಲ್ಲಿ 25ರಲ್ಲಿ 5 ಮಾತ್ರ ಭರ್ತಿ:
ತಾಲೂಕು ಪಂಚಾಯತ್‌ಗೆ ಮಂಜೂರುಗೊಂಡ 25 ಹುದ್ದೆಗಳಲ್ಲಿ ಕೇವಲ 5 ಹುದ್ದೆಗಳು ಮಾತ್ರ ಭರ್ತಿಯಾಗಿದೆ.20 ಹುದ್ದೆಗಳು ಖಾಲಿಯಿದೆ.ತಾಲೂಕು ಯೋಜನಾಧಿಕಾರಿ-1, ಸಹಾಯಕ ಲೆಕ್ಕಾಽಕಾರಿ-1, ಸಹಾಯಕ ನಿರ್ದೇಶಕರು(ಗ್ರಾ.ಉ)-1,ಸಹಾಯಕ ನಿರ್ದೇಶಕರು(ಪಂ.ರಾ)-1, ವ್ಯವಸ್ಥಾಪಕರು-1, ಕಿರಿಯ ಇಂಜಿನಿಯರ್-2, ಪ್ರಥಮ ದರ್ಜೆ ಸಹಾಯಕರು(ಲೆಕ್ಕ ಶಾಖೆ)-2, ಪ್ರಗತಿ ಸಹಾಯಕರು-1, ಶೀಘ್ರ ಲಿಪಿಕಾರರು-1, ದ್ವಿತೀಯ ದರ್ಜೆ ಸಹಾಯಕರು-2, ಬೆರಳಚ್ಚುಗಾರರು-2, ವಾಹನ ಚಾಲಕರು-2 ಹಾಗೂ ಡಿ ಗ್ರೂಪ್-3 ಹುದ್ದೆಗಳು ಖಾಲಿಯಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 9 ಹುದ್ದೆ ಖಾಲಿ:
ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 23 ಹುದ್ದೆಗಳು ಮಂಜೂರಾಗಿದ್ದು 14 ಹುದ್ದೆಗಳು ಭರ್ತಿಯಾಗಿದೆ.9 ಹುದ್ದೆಗಳು ಖಾಲಿಯಿವೆ.ಕ್ಷೇತ್ರ ಶಿಕ್ಷಣಾಧಿಕಾರಿ-1, ಪತ್ರಾಂಕಿತ ವ್ಯವಸ್ಥಾಪಕರು-1, ಅಧಿಕ್ಷಕರು-2, ಪ್ರಥಮ ದರ್ಜೆ ಸಹಾಯಕ-3, ಪ್ರೌಢಶಾಲಾ ಶಿಕ್ಷಣ ಸಂಯೋಜಕ-2, ದ್ವಿತೀಯ ದರ್ಜೆ ಸಹಾಯಕ-3, ಡಿ ಗ್ರೂಪ್-2 ಹುದ್ದೆಗಳು ಭರ್ತಿಯಾಗಿವೆ.ಲೆಕ್ಕಿಗ-1, ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕ-2, ದ್ವಿತೀಯ ದರ್ಜೆ ಸಹಾಯಕರು-1, ಡಿ ಗ್ರೂಪ್-2 ಹಾಗೂ ಬೆರಳಚ್ಚುಗಾರ, ವಾಹನ ಚಾಲಕ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ತಲಾ 1 ಹುದ್ದೆಗಳು ಖಾಲಿಯಿದೆ.ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಹುದ್ದೆಯೂ ಖಾಲಿಯಿದೆ.ಪ್ರಥಮ ದರ್ಜೆ ಸಹಾಯಕರ ಹುದ್ದೆ ಭರ್ತಿಯಾಗಿದೆ.
362 ಶಿಕ್ಷಕರ ಹುದ್ದೆ ಖಾಲಿ:
ಪುತ್ತೂರು ಹಾಗೂ ಕಡಬ ತಾಲೂಕಿನ ಪ್ರೌಢಶಾಲೆಗಳ ಪೈಕಿ ಮಂಜೂರಾದ ಒಟ್ಟು 221 ಪ್ರೌಢಶಾಲಾ ಶಿಕ್ಷಕರಲ್ಲಿ 174 ಭರ್ತಿಯಾಗಿದ್ದು 47 ಹುದ್ದೆ ಖಾಲಿಯಿದೆ.45 ಮಂದಿ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪ್ರಾಥಮಿಕ ಶಾಲೆಗಳ ಪೈಕಿ ಉಭಯ ತಾಲೂಕಿನಲ್ಲಿ 912 ಶಿಕ್ಷಕರ ಹುದ್ದೆ ಮಂಜೂರಾಗಿದ್ದು 597 ಭರ್ತಿಯಾಗಿದೆ.315 ಹುದ್ದೆ ಖಾಲಿಯಿದ್ದು 209 ಮಂದಿ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೆಸ್ಕಾಂನಲ್ಲಿ 293 ಹುದ್ದೆ ಖಾಲಿ:
ಪುತ್ತೂರು, ಸುಳ್ಯ, ಕಡಬ ಸೇರಿದಂತೆ ಮೆಸ್ಕಾಂ ಪುತ್ತೂರು ವಿಭಾಗಕ್ಕೆ ಮಂಜೂರಾದ ಒಟ್ಟು 617 ಹುದ್ದೆಗಳಲ್ಲಿ 324 ಹುದ್ದೆಗಳು ಮಾತ್ರ ಭರ್ತಿಯಾಗಿದೆ.293 ಹುದ್ದೆಗಳು ಖಾಲಿಯಿದೆ.ಈ ಪೈಕಿ ಪ್ರಮುಖವಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಯೇ ಖಾಲಿಯಿದೆ.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್-1, ಲೆಕ್ಕಾಧಿಕಾರಿ-1, ಸಹಾಯಕ ಇಂಜಿನಿಯರ್(ಇಲೆಕ್ಟ್ರಿಕಲ್)-5, ಸಹಾಯಕ ಲೆಕ್ಕಾಧಿಕಾರಿ-4, ಜೂನಿಯರ್ ಇಂಜಿನಿಯರ್-2, ಓವರ್‌ಸೀರ್-1, ಆಪರೇರ‍್ಸ್-22, ಮೀಟರ್ ರೀಡರ್-1, ಜೂನಿಯರ್ ಮೀಟರ್ ರೀಡರ್-11, ಗ್ರೇಡ್-2 ಲೈನ್ ಮೆಕ್ಯಾನಿಕ್-4, ಗ್ರೇಡ್-2 ಮೆಕ್ಯಾನಿಕ್-1, ಗ್ರೇಡ್-2 ಸ್ಟೇಷನ್ ಮೆಕ್ಯಾನಿಕ್-6, ಗ್ರೇಡ್-2 ಡ್ರೈವರ್-4, ಹಿರಿಯ ಸಹಾಯಕ-2, ಸಹಾಯಕ-7, ಕಿರಿಯ ಸಹಾಯಕ-1, ಗ್ರೇಡ್-1 ಸ್ಟೇಷನ್ ಅಟೆಂಡೆಂಟ್-6, ಲೈನ್‌ಮೆನ್-5, ಗ್ರೇಡ್-1 ಅಟೆಂಡೆಂಟ್-1, ಗ್ರೇಡ್-2 ಅಟೆಂಡೆಂಟ್-1, ಗ್ರೇಡ್-2 ಅಟೆಂಡೆಂಟ್-2, ಗ್ರೇಡ್-2 ಸ್ಟೇಷನ್ ಅಟೆಂಡೆಂಟ್-22, ಅಸಿಸ್ಟೆಂಟ್ ಲೈನ್‌ಮೆನ್-37, ಜೂನಿಯರ್ ಲೈನ್‌ಮೆನ್-7, ಜೂನಿಯರ್ ಲೈನ್ ಮೆನ್-136, ಸ್ಯಾನಿಟರಿ ವರ್ಕರ್-1, ಡಾಫರ್-1, ಹುದ್ದೆಗಳು ಖಾಲಿಯಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್-7, ಲೆಕ್ಕಾಧಿಕಾರಿ-1, ಸಹಾಯಕ ಇಂಜಿನಿಯರ್(ಇಲೆಕ್ಟ್ರಿಕಲ್)-8, ಸಹಾಯಕ ಇಂಜಿನಿಯರ್(ಸಿವಿಲ್)-1, ಸಹಾಯಕ ಲೆಕ್ಕಾಧಿಕಾರಿ-3, ಜೂನಿಯರ್ ಇಂಜಿನಿಯರ್-28, ಸೀನಿಯರ್ ಮೆಕ್ಯಾನಿಕ್-1, ಓವರ್‌ಸೀರ್-6, ಆಪರೇರ‍್ಸ್-10, ಮೀಟರ್ ರೀಡರ್-18, ಗ್ರೇಡ್-1 ಮೆಕ್ಯಾನಿಕ್-3, ಗ್ರೇಡ್-2 ಲೈನ್ ಮೆಕ್ಯಾನಿಕ್-29, ಗ್ರೇಡ್-1 ಸ್ಟೇಷನ್ ಮೆಕ್ಯಾನಿಕ್-1, ಗ್ರೇಡ್-1 ಸ್ಟೋರ್ ಕೀಪರ್-1, ಸಹಾಯಕ ಸ್ಟೋರ್ ಕೀಪರ್-1, ಗ್ರೇಡ್-1 ಚಾಲಕ-1, ಹಿರಿಯ ಸಹಾಯಕ-7, ಸಹಾಯಕ-10, ಕಿರಿಯ ಸಹಾಯಕ-7, ಲೈನ್‌ಮೆನ್-70, ಅಸಿಸ್ಟೆಂಟ್ ಲೈನ್‌ಮೆನ್-47, ಜೂನಿಯರ್ ಲೈನ್‌ಮೆನ್-54,ಸ್ಯಾನಿಟರಿ ವರ್ಕರ್-1, ಡಾ-ರ್-1,ಗ್ರೇಡ್-1 ಆಫೀಸ್ ಅಟೆಂಡೆಂಟ್-1, ಗ್ರೇಡ್-2 ಆಫೀಸ್ ಅಟೆಂಡೆಂಟ್-6 ಹಾಗೂ ಜೆಎಲ್‌ಎಂ-1 ಹುದ್ದೆ ಭರ್ತಿಯಾಗಿದೆ.
ನಗರ ಸಭೆಯಲ್ಲಿ 236ರಲ್ಲಿ 176 ಹುದ್ದೆ ಖಾಲಿ:
ಪುತ್ತೂರು ನಗರ ಸಭೆಯಲ್ಲಿ ಮಂಜೂರಾದ 236 ಹುದ್ದೆಗಳಲ್ಲಿ ಕೇವಲ 60 ಹುದ್ದೆಗಳು ಭರ್ತಿಯಾಗಿ 176 ಹುದ್ದೆಗಳು ಖಾಲಿಯಿದೆ.ಪೌರಾಯುಕ್ತರು-1, ಸಹಾಯಕ ಪರಿಸರ ಅಭಿಯಂತರ-1, ಸಹಾಯಕ ಇಂಜಿನಿಯರ್-1, ಲೆಕ್ಕಿಗ-1, ಜೂನಿಯರ್ ಇಂಜಿನಿಯರ್-1, ಹಿರಿಯ ಆರೋಗ್ಯ ಅಧಿಕಾರಿ-2, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ-1, ದ್ವಿತೀಯ ದರ್ಜೆ ಸಹಾಯಕ-3, ಬಿಲ್ ಕಲೆಕ್ಟರ್-2, ಪ್ಲಂಬರ್-1, ಸ್ಯಾನಿಟರಿ ಸುಪರ್‌ವೈಸರ್-1, ಸೀನಿಯರ್ ವಾಲ್ವ್ಮೆನ್-1, ಪೌರಕಾರ್ಮಿಕ-39, ಅಟೆಂಡರ್-2 ಹುದ್ದೆಗಳು ಭರ್ತಿಯಾಗಿದೆ.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸೀನಿಯರ್ ಪ್ರೋಗ್ರಾಮರ್, ಲೆಕ್ಕ ಅಧಿಕ್ಷಕ, ಸಮುದಾಯ ಅಽಕಾರಿ, ವ್ಯವಸ್ಥಾಪಕ, ಕಂದಾಯ ಅಧಿಕಾರಿ, ಪ್ರಥಮ ದರ್ಜೆ ಸಹಾಯಕ, ಪ್ರಥಮ ದರ್ಜೆ ಕಂದಾಯ ಅಽಕಾರಿ, ಇಲೆಕ್ಟ್ರಿಷಿಯನ್ ಗ್ರೇಡ್-1, ಇಲೆಕ್ಟ್ರಿಷಿಯನ್ ಗ್ರೇಡ್-2, ಲ್ಯಾಬ್ ಟೆಕ್ನಿಷಿಯನ್, ಮುಖ್ಯ ತೋಟಗಾರ, ಸೀನಿಯರ್ ವಾಲ್ವ್ಮೆನ್ ತಲಾ 1 ಹುದ್ದೆಗಳು ಖಾಲಿಯಿದೆ.ಜೂನಿಯರ್ ಇಂಜಿನಿಯರ್, ಸ್ಟೆನೋಗ್ರಾಫರ್,ಹಿರಿಯ ಆರೋಗ್ಯ ಅಧಿಕಾರಿ, ವಾಟರ್ ಸಪ್ಲಾಯ್ ಆಪರೇಟರ್, ಬಿಲ್ ಕಲೆಕ್ಟರ್, ಚಾಲಕ ತಲಾ ಎರಡು ಹುದ್ದೆ, ಪ್ರಥಮ ದರ್ಜೆ ಸಹಾಯಕ, ಕಂಪ್ಯೂಟರ್ ಆಪರೇಟರ್/ಡಾಟಾ ಎಂಟ್ರಿಆಪರೇಟರ್, ಕಿರಿಯ ಆರೋಗ್ಯ ನಿರೀಕ್ಷಕರು, ಪ್ಲಂಬರ್ ತಲಾ 3 ಹುದ್ದೆ, ವಾಟರ್ ಸಪ್ಲಾಯ್ ಆಪರೇಟರ್, ಸಹಾಯಕ ವಾಟರ್ ಸಪ್ಲಾಯ್ ಆಪರೇಟರ್ ತಲಾ 8 ಹುದ್ದೆ, ದ್ವಿತೀಯ ದರ್ಜೆ ಸಹಾಯಕ, ಕ್ಲೀನರ್, ಗಾರ್ಡನರ್ ತಲಾ 4 ಹುದ್ದೆ, ಪೌರ ಕಾರ್ಮಿಕ-61, ಅಟೆಂರ‍್ಸ್-6, ಲೋಡರ್-16, ಹೆಲ್ಪರ್/ ವಾಟರ್ ಸಪ್ಲಾಯ್ ವಾಲ್ವ್ಮೆನ್-30 ಹುದ್ದೆಗಳು ಖಾಲಿಯಿದೆ.
ಸರಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಽಕಾರಿ ಸೇರಿದಂತೆ 6 ವೈದ್ಯ ಹುದ್ದೆಯೇ ಖಾಲಿ:
ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಮಂಜೂರಾರ ಒಟ್ಟು 111 ಹುದ್ದೆಗಳಲ್ಲಿ 48 ಭರ್ತಿಯಾಗಿ 63 ಹುದ್ದೆ ಖಾಲಿಯಿದೆ.ಇದರಲ್ಲಿ ಆಡಳಿತ ಸರ್ಜನ್/ವೈದ್ಯಾಧಿಕಾರಿ ಹುದ್ದೆ ಸೇರಿದಂತೆ 6 ವೈದ್ಯರ ಹುದ್ದೆಯೇ ಖಾಲಿಯಿದೆ.ಫಿಜಿಷಿಯನ್, ಜನರಲ್ ಸರ್ಜನ್, ಪ್ರಸೂತಿ ಮತ್ತು ಸೀರೋಗ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಮೂಳೆ ಮತ್ತು ಕೀಲು ತಜ್ಞರು, ರೇಡಿಯಾಲಜಿಸ್ಟ್, ಕಿವಿ ಮೂಗು ಗಂಟಲು ತಜ್ಞರು, ಮುಖ್ಯ ದಂತ ಆರೋಗ್ಯಾಧಿಕಾರಿ ಹುದ್ದೆಗಳಿಗೆ ಮಂಜೂರಾದ ತಲಾ 1 ಹುದ್ದೆಗಳು ಭರ್ತಿಯಾಗಿದೆ. ದರ್ಜೆ-2 ಶುಶ್ರೂಷ ಅಧಿಕ್ಷಕರು-1, ಶುಶ್ರೂಷಕಿಯರು-23, ಹಿರಿಯ ಫಾರ್ಮಸಿಸ್ಟ್-1, ಕಿರಿಯ ಫಾರ್ಮಸಿಸ್ಟ್-1, ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಜ್ಞರು-2, ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಜ್ಞರು-1, ಕ್ಷ-ಕಿರಣ ತಂತ್ರಜ್ಞ-3, ಫಿಜಿಯೋಥೆರಪಿಷ್ಟ್-1, ಕಚೇರಿ ಅಧಿಕ್ಷಕ-1, ಪ್ರಥಮ ದರ್ಜೆ ಸಹಾಯಕ-2, ದ್ವಿತೀಯ ದರ್ಜೆ ಸಹಾಯಕ-1, ವಾಹನ ಚಾಲಕ-1 ಹಾಗೂ ಡಿ.ಗ್ರೂಪ್-2 ಹುದ್ದೆ ಭರ್ತಿಯಾಗಿದೆ. ಆಡಳಿತ ಸರ್ಜನ್, ನೇತ್ರ ತಜ್ಞರು, ದರ್ಜೆ-1 ಮತ್ತು ದರ್ಜೆ-2 ಶುಶ್ರೂಷಕ ಅಧಿಕ್ಷಕ, ಸಹಾಯಕ ಆಡಳಿತಾಧಿಕಾರಿ, ಹಿರಿಯ ಫಾರ್ಮಸಿಸ್ಟ್, ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಜ್ಞರು, ನೇತ್ರಾ ಸಹಾಯಕರು, ಇಸಿಜಿ ಟೆಕ್ನಿಷಿಯನ್, ಕಚೇರಿ ಅಧಿಕ್ಷಕ ತಲಾ ಒಂದು ಹುದ್ದೆ, ತುರ್ತು ಚಿಕಿತ್ಸಾ ವೈದ್ಯಾಧಿಕಾರಿ-4, ಡಿ.ಗ್ರೂಪ್-39, ಹಿರಿಯ ಶುಶ್ರೂಷಕಿಯರು, ಶುಶ್ರೂಷಕಿಯರು, ದ್ವಿತೀಯ ದರ್ಜೆ ಸಹಾಯಕ, ಟೈಪಿಸ್ಟ್ ಕಂ ಕ್ಲರ್ಕ್, ವಾಹನ ಚಾಲಕ ತಲಾ ಎರಡು ಹುದ್ದೆಗಳು ಖಾಲಿಯಿದೆ. ಡಿ ಗ್ರೂಪ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯಲ್ಲಿ 282ರಲ್ಲಿ 173 ಹುದ್ದೆ ಖಾಲಿ:
ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಮಂಜೂರಾದ 282 ಹುದ್ದೆಗಳಲ್ಲಿ 109 ಭರ್ತಿಯಾಗಿ 173 ಹುದ್ದೆಗಳು ಖಾಲಿಯಿದೆ. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ 175ರಲ್ಲಿ 66 ಹುದ್ದೆ ಭರ್ತಿಯಾಗಿ 109 ಹುದ್ದೆ ಖಾಲಿಯಿದೆ. ಪಾಣಾಜೆಯಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿಯಿದೆ. ಉಪ್ಪಿನಂಗಡಿ ಹಾಗೂ ಕಡಬ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ 98 ಹುದ್ದೆಗಳಲ್ಲಿ 41 ಭರ್ತಿಯಾಗಿ 57 ಹುದ್ದೆಗಳು ಖಾಲಿಯಿದೆ. ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಮಂಜೂರಾದ 9 ಹುದ್ದೆಗಳಲ್ಲಿ ತಾಲೂಕು ಆರೋಗ್ಯಾಽಕಾರಿ ಹಾಗೂ ಹಿರಿಯ ವಾಹನ ಚಾಲಕ ಎರಡು ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಉಳಿದಂತೆ ಪ್ರಥಮ ದರ್ಜೆ ಸಹಾಯಕ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಹಿರಿಯ ಪುರುಷ ಆರೋಗ್ಯ ಸಹಾಯಕ, ಬೆರಳಚ್ಚುಗಾರ ಕಿರಿಯ ವೈದ್ಯೇತರ ಮೇಲ್ವಿಚಾರಕ, ಡಿ.ಗ್ರೂಪ್ ತಲಾ 1 ಹುದ್ದೆಗಳ ಖಾಲಿಯಿದೆ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ, ತಾಲೂಕು ಲೆಕ್ಕ ಪತ್ರ ಸಹಾಯಕ, ತಾಲೂಕು ದತ್ತಾಂಶ ನಮೂದಕರು, ತಾಲೂಕು ಆಶಾ ಮೇಲ್ವಿಚಾರಕಿ ತಲಾ 1 ಹುದ್ದೆ, ಆರ್‌ಬಿಎಸ್‌ಕೆ ವೈದ್ಯಾಧಿಕಾರಿ 4, ಶುಶ್ರೂಷಕಿ-2, ನೇತ್ರಾಧಿಕಾರಿ-2, ಹಿರಿಯ ಕ್ಷಯಚಿಕಿತ್ಸಾ ಮೇಲ್ವಿಚಾರಕ, ಹಿರಿಯ ಕ್ಷಯ ಚಿಕಿತ್ಸಾ ಪ್ರಯೋಗಾಲಯ ಮೇಲ್ವಿಚಾರಕ ತಲಾ 1 ಹುದ್ದೆ ಎನ್‌ಎಚ್‌ಎಂ ಮತ್ತು ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಸದಾಗಿ ಮಂಜೂರಾದ ನೆಲ್ಲಿಕಟ್ಟೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸೇರಿದಂತೆ ಮಂಜೂರಾದ ಎಲ್ಲಾ 15 ಹುದ್ದೆಗಳು ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 19 ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ಮಂದಿ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಶು ಸಂಗೋಪನಾ ಇಲಾಖೆಯಲ್ಲಿ 43ರಲ್ಲಿ 33 ಹುದ್ದೆ ಖಾಲಿ:
ಪಶು ಸಂಗೋಪನಾ ಇಲಾಖೆಯ ಮುಖ್ಯ ಕಚೇರಿ ಹಾಗೂ 9 ಪಶು ಆಸ್ಪತ್ರೆ ಹಾಗೂ ಪ್ರಾಥಮಿಕ ಪಶುವೈದ್ಯಕೀಯ ಕೇಂದ್ರಗಳು ಸೇರಿದಂತೆ ಇಲಾಖೆಗೆ ಮಂಜೂರಾದ ಒಟ್ಟು 43 ಹುದ್ದೆಗಳಲ್ಲಿ 10 ಹುದ್ದೆಗಳು ಭರ್ತಿಯಾಗಿ 33 ಹುದ್ದೆಗಳು ಖಾಲಿಯಿದೆ. ಪುತ್ತೂರು ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ)-1, ಜಾನುವಾರು ಅಭಿವೃದ್ಧಿ ಅಧಿಕಾರಿ-1, ಕಿರಿಯ ಪಶುವೈದ್ಯಕೀಯ ಪರಿವೀಕ್ಷಕರು-1, ದ್ವಿತೀಯ ದರ್ಜೆ ಸಹಾಯಕರು-1 ಭರ್ತಿಯಾಗಿದೆ. ಮುಖ್ಯ ಪಶುವೈದ್ಯಾಧಿಕಾರಿ(ಸಂಚಾರಿವಿಸ್ತರಣೆ)-1, ಮುಖ್ಯಪಶುವೈದ್ಯಾಧಿಕಾರಿ(ಚಿಕಿತ್ಸೆ)-1, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರು-1, ಕಿರಿಯ ಪಶುವೈದ್ಯಕೀಯ ಪರಿವೀಕ್ಷಕರು-2, ವಾಹನ ಚಾಲಕ-1, ಡಿ.ಗ್ರೂಪ್-1 ಹುದ್ದೆ ಖಾಲಿಯಿದೆ. ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಾದ, ಬಲ್ನಾಡು, ಕೆದಂಬಾಡಿ, ಕೋಡಿಂಬಾಡಿ ಕೇಂದ್ರಗಳಿಗೆ ಮಂಜೂರಾದ ಹಿರಿಯ ಪಶುವೈದ್ಯಕೀಯ, ಕಿರಿಯ ಪಶುವೈದ್ಯಕೀಯ ಪರಿವೀಕ್ಷಕ, ಡಿ ಗ್ರೂಪ್ ಎಲ್ಲಾ ಮೂರು ಹುದ್ದೆಗಳು ಖಾಲಿಯಿದೆ. ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿ, ಜಾನುವಾರು ಅಧಿಕಾರಿ ಹುದ್ದೆ ಭರ್ತಿಯಾಗಿದೆ. ಪಾಣಾಜೆ ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿ-1 ಹುದ್ದೆ ಭರ್ತಿಯಾಗಿ, ಜಾನುವಾರು ಅಧಿಕಾರಿ ಹುದ್ದೆ ಖಾಲಿಯಿದೆ. ಕೌಡಿಚ್ಚಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ ಹುದ್ದೆ ಭರ್ತಿಯಾಗಿ, ಕಿರಿಯ ಪಶುವೈದ್ಯಕೀಯ ಪರಿವೀಕ್ಷಕ ಹುದ್ದೆ ಖಾಲಿಯಿದೆ. ಕೊಳ್ತಿಗೆ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದಲ್ಲಿ ಮಂಜೂರಾದ ಪಶುವೈದ್ಯಾಧಿಕಾರಿ/ಹಿರಿಯ ಪಶುವೈದ್ಯಾಧಿಕಾರಿ, ಪಶುವೈದ್ಯಕೀಯ ಪರಿವೀಕ್ಷಕರು ಹುದ್ದೆ ಖಾಲಿಯಿದೆ. ಈಶ್ವರಮಂಗಳ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದಲ್ಲಿ ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ-1 ಹುದ್ದೆ ಭರ್ತಿಯಾಗಿದೆ, ಕಿರಿಯ ಪಶುವೈದ್ಯಕೀಯ ಪರಿವೀಕ್ಷಕ-1 ಹುದ್ದೆ ಖಾಲಿಯಿದೆ. ನರಿಮೊಗರು ಪಶು ಚಿಕಿತ್ಸಾಲಯದಲ್ಲಿ ಪಶುವೈದ್ಯಾಧಿಕಾರಿ/ಹಿರಿಯ ಪಶುವೈದ್ಯಾಧಿಕಾರಿ-1 ಹುದ್ದೆ ಖಾಲಿಯಿದೆ. ಪಶುವೈದ್ಯಕೀಯ ಪರಿವೀಕ್ಷಕ-1 ಹುದ್ದೆ ಭರ್ತಿಯಾಗಿದೆ. ಪಶು ಆಸ್ಪತ್ರೆ, ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಹಾಗೂ ಪಶುಚಿಕಿತ್ಸಾಲಯ ಸೇರಿದಂತೆ ಎಲ್ಲಾ ಕಡೆಗಳಿಗೆ ಮಂಜೂರಾದ ಒಟ್ಟು 15 ಡಿ.ಗ್ರೂಪ್ ಹುದ್ದೆಗಳು ಖಾಲಿಯಿದೆ. ಡಿ ಗ್ರೂಪ್ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ.
ಭೂದಾಖಲೆಗಳ ಇಲಾಖೆಯಲ್ಲಿ 36ರಲ್ಲಿ 23 ಹುದ್ದೆ ಖಾಲಿ:
ಭೂ ದಾಖಲೆಗಳು ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಂಜೂರಾದ 36 ಹುದ್ದೆಗಳಲ್ಲಿ 13 ಹುದ್ದೆಗಳು ಭರ್ತಿಯಾಗಿದೆ. 23 ಹುದ್ದೆಗಳು ಖಾಲಿಯಿದೆ. ಭೂ ದಾಖಲೆಗಳ ಸಹಾಯಕ ನಿರ್ದೇಶಕ-1, ಭೂ ಮಾಪನಾ ಅಧಿಕ್ಷಕರು(ತಾಂತ್ರಿಕ)-1, ಪರ್ಯಾವೇಕ್ಷಕರು-2, ಭೂ ಮಾಪಕರು-8, ಬಾಂದ ಜವಾನರು-1 ಹುದ್ದೆಗಳು ಭರ್ತಿಯಾಗಿದೆ. ಪರ್ಯಾವೇಕ್ಷರು-2, ಪ್ರಥಮ ದರ್ಜೆ ಸಹಾಯಕರು-1, ಭೂ ಮಾಪಕರು-10 ಹಾಗೂ ಬಾಂದ ಜವಾನರು-10 ಹುದ್ದೆಗಳು ಖಾಲಿಯಿದೆ.
ಕೃಷಿ ಇಲಾಖೆಯಲ್ಲಿ 27ರಲ್ಲಿ 24 ಹುದ್ದೆಗಳೂ ಖಾಲಿ:
ಕೃಷಿ ಇಲಾಖೆಗೆ ಮಂಜೂರುಗೊಂಡ 27 ಹುದ್ದೆಗಳಲ್ಲಿ ಕೇವಲ 3 ಹುದ್ದೆಗಳು ಮಾತ್ರ ಭರ್ತಿಯಾಗಿ 24 ಹುದ್ದೆಗಳೂ ಖಾಲಿಯಾಗಿದೆ. ಸಹಾಯಕ ಕೃಷಿ ನಿರ್ದೇಶಕರು-1, ಕೃಷಿ ಅಧಿಕಾರಿ-1, ದ್ವಿತೀಯ ದರ್ಜೆ ಸಹಾಯಕ-1 ಹುದ್ದೆ ಭರ್ತಿಯಾಗಿದೆ. ಕೃಷಿ ಅಧಿಕಾರಿ 4, ಸಹಾಯಕ ಕೃಷಿ ಅಧಿಕಾರಿ-11, ಡಿ.ಗ್ರೂಪ್-4, ಅಧಿಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ವಾಹನ ಚಾಲಕ ತಲಾ ಒಂದು ಹುದ್ದೆ ಖಾಲಿಯಿದೆ. 5 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಂ.ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ 12ರಲ್ಲಿ 8 ಹುದ್ದೆ ಖಾಲಿ:
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ 12 ಹುದ್ದೆಗಳು ಮಂಜೂರಾಗಿದ್ದು 4 ಹುದ್ದೆಗಳ ಮಾತ್ರ ಭರ್ತಿಯಾಗದೆ. ಒಟ್ಟು 8 ಹುದ್ದೆಗಳು ಖಾಲಿಯಾಗಿದೆ. ಸಹಯಕ ಕಾರ್ಯನಿರ್ವಾಹಕ ಇಂಜಿನಿಯರ್-1, ಸಹಾಯಕ ಇಂಜಿನಿಯರ್-1, ದ್ವಿತೀಯ ದರ್ಜೆ ಸಹಾಯಕ-1, ಡಿ.ಗ್ರೂಪ್-1 ಹುದ್ದೆಗಳು ಭರ್ತಿಯಾಗಿದೆ. ಇಲಾಖೆಯಲ್ಲಿ ಆವಶ್ಯಕವಾಗಿರುವ ಕಿರಿಯ ಇಂಜಿನಿಯರ್-3 ಹುದ್ದೆ ಖಾಲಿಯಿದೆ. ಡಿ.ಗ್ರೂಪ್-2, ಪ್ರಥಮ ದರ್ಜೆ ಸಹಾಯಕ, ಬೆರಳಚ್ಚುಗಾರ ಹಾಗೂ ಚಾಲಕ ತಲಾ 1 ಹುದ್ದೆಗಳು ಖಾಲಿಯಿದೆ.
ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 11ರಲ್ಲಿ 7 ಹುದ್ದೆ ಖಾಲಿ:
ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ ಮಂಜೂರುಗೊಂಡಿರುವ 11 ಹುದ್ದೆಗಳಲ್ಲಿ 7 ಹುದ್ದೆಗಳು ಖಾಲಿಯಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರ-1, ಸಹಾಯಕ ಇಂಜಿನಿಯರ್-1 ಹಾಗೂ ಕಿರಿಯ ಇಂಜಿನಿಯರ್-2 ಹುದ್ದೆಗಳು ಭರ್ತಿಯಾಗಿದೆ. ಡಿ.ಗ್ರೂಪ್-2, ಸಹಾಯಕ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ, ವಾಹನ ಚಾಲಕ ತಲಾ 1 ಹುದ್ದೆಗಳು ಖಾಲಿಯಿದೆ.
ಆರ್‌ಟಿಓ 25ರಲ್ಲಿ 15 ಹುದ್ದೆ ಖಾಲಿ:
ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಂಜೂರಾದ 25 ಹುದ್ದೆಗಳ ಪೈಕಿ 10 ಹುದ್ದೆಗಳು ಭರ್ತಿಯಾಗಿ 15 ಹುದ್ದೆಗಳು ಖಾಲಿಯಿದೆ. ಪ್ರಾದೇಶಿಕ ಸಾರಿಗೆ ಅಽಕಾರಿ-1, ಹಿರಿಯ ಮೋಟಾರು ವಾಹನ ನಿರೀಕ್ಷಕರು-1, ಮೋಟಾರು ನಿರೀಕ್ಷಕರು-2, ಪ್ರಥಮ ದರ್ಜೆ ಸಹಾಯಕರು-2, ದ್ವಿತೀಯ ದರ್ಜೆ ಸಹಾಯಕರು-2 ಹುದ್ದೆ ಭರ್ತಿಯಾಗಿದೆ. ಹಿರಿಯ ಮೋಟಾರು ನಿರೀಕ್ಷಕ-1, ಮೋಟಾರು ನಿರೀಕ್ಷಕ-1 ಪ್ರಥಮ ದರ್ಜೆ ಸಹಾಯಕರು-5, ದ್ವಿತೀಯ ದರ್ಜೆ ಸಹಾಯಕರು-2, ಬೆರಳಚ್ಚುಗಾರ-1, ಚಾಲಕ-2 ಹಾಗೂ ಡಿ.ಗ್ರೂಪ್-3 ಹುದ್ದೆಗಳು ಖಾಲಿಯಿದೆ.
ಎಪಿಎಂಸಿ 13ರಲ್ಲಿ 9 ಖಾಲಿ:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಂಜೂರಾದ ಒಟ್ಟು 13 ಹುದ್ದೆಗಳಲ್ಲಿ 4 ಹುದ್ದೆಗಳು ಭರ್ತಿಯಾಗಿ 9 ಹುದ್ದೆಗಳು ಖಾಲಿಯಾಗಿದೆ. ಕಾರ್ಯದರ್ಶಿ, ದರ್ಜೆ-1 ಆಂತರಿಕ ಲೆಕ್ಕಪರಿಶೋಧಕರು, ದರ್ಜೆ-3 ಸಹಾಯಕ ಕಾರ್ಯದರ್ಶಿ, ಹಿರಿಯ ಮಾರುಕಟ್ಟೆ ಮೇಲ್ವಿಚಾರಕರು ತಲಾ ಒಂದು ಹುದ್ದೆಗಳು ಭರ್ತಿಯಾಗಿದೆ. ಮಾರುಕಟ್ಟೆ ಮೇಲ್ವಿಚಾರಕರು-2, ದರ್ಜೆ-4 ಮಾರುಕಟ್ಟೆ ಮೇಲ್ವಿಚಾರಕರು-2, ದರ್ಜೆ-2 ಲೆಕ್ಕಿಗರು, ಮಾರುಕಟ್ಟೆ ಸಹಾಯಕರು, ಬೆರಳಚ್ಚುಗಾರರು ಸಿಪಾಯಿ ತಲಾ 1 ಹುದ್ದೆಗಳು ಖಾಲಿಯಿದೆ.
ಎ.ಆರ್ ಕಚೇರಿಯಲ್ಲಿ 16ರಲ್ಲಿ 14 ಹುದ್ದೆ ಖಾಲಿ:
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಮಂಜೂರಾದ 16 ಹುದ್ದೆಗಳಲ್ಲಿ ಕೇವಲ 2 ಹುದ್ದೆಗಳು ಭರ್ತಿಯಾಗಿ 14 ಹುದ್ದೆಗಳು ಖಾಲಿಯಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು-1 ಹಾಗೂ ಸಹಾಯಕ ಅಭಿವೃದ್ಧಿ ಅಧಿಕಾರಿ-1 ಹುದ್ದೆ ಭರ್ತಿಯಾಗಿದೆ. ಉಳಿದಂತೆ ಸಹಕಾರ ಸಂಘಗಳ ನಿರೀಕ್ಷಕರು-5, ದ್ವಿತೀಯ ದರ್ಜೆ ಸಹಾಯಕರು-2, ಡಿ.ಗ್ರೂಪ್-2, ಅಽಕ್ಷಕರು, ಪ್ರಥಮ ದರ್ಜೆ ಸಹಾಯಕರು, ಬೆರಳಚ್ಚುಗಾರರು, ವಾಹನ ಚಾಲಕರು ಹಾಗೂ ಜಾರಿಕಾರರು ತಲಾ 1 ಹುದ್ದೆಗಳು ಖಾಲಿಯಿದೆ.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ 10ರಲ್ಲಿ 6 ಖಾಲಿ:
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಮಂಜೂರಾದ 10 ಹುದ್ದೆಗಳಲ್ಲಿ 4 ಹುದ್ದೆಗಳು ಭರ್ತಿಯಾಗಿ 6 ಹುದ್ದೆಗಳು ಖಾಲಿಯಿದೆ. ಸಹಾಯಕ ನಿದೇಶಕರು-1 ಹುದ್ದೆ, ಹಿರಿಯ ಲೆಕ್ಕಪರಿಶೋಧಕರು-2, ಪ್ರಥಮ ದರ್ಜೆ ಸಹಾಯಕ-1, ಹುದ್ದೆಗಳು ಭರ್ತಿಯಾಗಿದೆ.ಲೆಕ್ಕಪರಿಶೋಧಕರು-3, ದ್ವಿತೀಯ ದರ್ಜೆ ಸಹಾಯಕ-1, ಬೆರಳಚ್ಚುಗಾರ-1, ಡಿ.ಗ್ರೂಪ್-1 ಹುದ್ದೆಗಳು ಖಾಲಿಯಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 62 ಹುದ್ದೆಗಳಲ್ಲಿ 50 ಹುದ್ದೆ ಖಾಲಿ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಹಾಗೂ ಕಚೇರಿ ಸೇರಿದಂತೆ ಮಂಜೂರಾದ 62 ಹುದ್ದೆಗಳಲ್ಲಿ 12 ಹುದ್ದೆಗಳು ಭರ್ತಿಯಾಗಿದೆ. 50 ಹುದ್ದೆಗಳು ಖಾಲಿಯಿದೆ. ಇಲಾಖೆಯ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆ ಖಾಲಿಯಿದ್ದು ವಿಸ್ತರಣಾಧಿಕಾರಿ ಹುದ್ದೆ ಭರ್ತಿಯಾಗಿದ್ದು ಅವರು ಪ್ರಭಾರ ಹುದ್ದೆಯಲ್ಲಿದ್ದಾರೆ.ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ತಲಾ 1 ಹುದ್ದೆಗಳು ಖಾಲಿಯಿದೆ.ಡಿಇಓ ಹಾಗೂ ಡಿ.ಗ್ರೂಪ್ ತಲಾ 1 ಹುದ್ದೆ ಖಾಲಿಯಿದೆ. 9 ವಿದ್ಯಾರ್ಥಿ ನಿಲಯಗಳಲ್ಲಿ ನಿಲಯ ಮೇಲ್ವಿಚಾರಕ-2, ಅಡುಗೆಯವರು-2 ಹುದ್ದೆಗಳು ಮಾತ್ರ ಭರ್ತಿಯಾಗಿದೆ. ನಿಲಯ ಮೇಲ್ವಿಚಾರಕರು 7, ಅಡುಗೆಯವರು-16, ಸಹಾಯಕ ಅಡುಗೆಯವರು-18 ಹಾಗೂ ರಾತ್ರಿ ಕಾವಲುಗಾರ-6 ಹುದ್ದೆಗಳು ಖಾಲಿಯಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ 38ರಲ್ಲಿ 24 ಹುದ್ದೆ ಖಾಲಿ:
ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಹಾಗೂ 5 ವಿದ್ಯಾರ್ಥಿ ನಿಲಯಗಳು ಸೇರಿದಂತೆ ಮಂಜೂರಾದ 38 ಹುದ್ದೆಗಳಲ್ಲಿ 14 ಭರ್ತಿಯಾಗಿ 24 ಹುದ್ದೆಗಳು ಖಾಲಿಯಿದೆ.ಕಚೇರಿಯಲ್ಲಿ ಸಹಾಯಕ ನಿರ್ದೇಶಕರು, ಕಚೇರಿ ಅಧಿಕ್ಷಕರು, ಪ್ರಥಮ ದರ್ಜೆ ಸಹಾಯಕರು, ಜವಾನ ತಲಾ 1 ಹುದ್ದೆ ಭರ್ತಿಯಾಗಿದೆ. ದ್ವಿತೀಯ ದರ್ಜೆ ಸಹಾಯಕ-2 ಹುದ್ದೆಗಳು ಖಾಲಿಯಿದೆ.ವಿದ್ಯಾರ್ಥಿನಿಲಯಗಳಲ್ಲಿ ವಾರ್ಡನ್-3, ಜೂನಿಯರ್ ವಾರ್ಡನ್-1, ಅಡುಗೆಯವರು-5, ಕಾವಲುಗಾರ-1 ಹುದ್ದೆ ಭರ್ತಿಯಾಗಿದೆ. ವಾರ್ಡನ್-2, ಜೂನಿಯರ್ ವಾರ್ಡನ್-1, ಅಡುಗೆಯವರು-7, ಸಹಾಯಕ ಅಡುಗೆಯವರು-7, ಕಾವಲುಗಾರ-4 ಹುದ್ದೆಗಳು ಖಾಲಿಯಿದೆ.
ಪರಿಶಿಷ್ಟ ವರ್ಗಗಳ ಇಲಾಖೆಯಲ್ಲಿ 15ರಲ್ಲಿ 13 ಹುದ್ದೆ ಖಾಲಿ:
ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಹಾಗೂ 2 ವಿದ್ಯಾರ್ಥಿ ನಿಲಯ ಸೇರಿದಂತೆ ಮಂಜೂರಾದ 15 ಹುದ್ದೆಗಳಲ್ಲಿ 2 ಹುದ್ದೆಗಳು ಮಾತ್ರ ಭರ್ತಿಯಾಗಿದೆ. 13 ಹುದ್ದೆಗಳು ಖಾಲಿಯಿದೆ. 2 ಮೇಲ್ವಿಚಾರಕ ಹುದ್ದೆಗಳಲ್ಲಿ 1 ಹುದ್ದೆ ಭರ್ತಿಯಾಗಿ 1 ಹುದ್ದೆ ಖಾಲಿಯಿದೆ. ಸಹಶಿಕ್ಷಕರು 5ರಲ್ಲಿ 5 ಹುದ್ದೆಗಳೂ ಖಾಲಿಯಿದೆ. 4 ಅಡುಗೆಯವರಲ್ಲಿ 1 ಭರ್ತಿಯಾಗಿ 3 ಹುದ್ದೆ ಖಾಲಿಯಿದೆ. 3 ಅಡುಗೆ ಸಹಾಯಕರಲ್ಲಿ 3 ಹುದ್ದೆಗಳು ಖಾಲಿಯಿದೆ. 1 ಕಾವಲುಗಾರ ಹುದ್ದೆ ಖಾಲಿಯಿದೆ.
ಅಗ್ನಿಶಾಮಕ ಇಲಾಖೆಯಲ್ಲಿ ಠಾಣಾಧಿಕಾರಿ ಹುದ್ದೆಯೇ ಖಾಲಿ:
ನೀರು,ಬೆಂಕಿ ಆಕಸ್ಮಿಕದಂತಹ ಅವಘಡಗಳಂತಹ ಸಮಯದಲ್ಲಿ ತುರ್ತು ಸ್ಪಂದಿಸಬೇಕಾಗಿರುವ ಅಗ್ನಿ ಶಾಮಕ ಇಲಾಖೆಯಲ್ಲಿ ಮಂಜೂರುಗೊಂಡಿರುವ 27 ಹುದ್ದೆಗಳ ಪೈಕಿ 15 ಹುದ್ದೆ ಮಾತ್ರ ಭರ್ತಿಯಾಗಿದೆ.ಪ್ರಮುಖವಾಗಿ ಠಾಣಾಧಿಕಾರಿ ಹುದ್ದೆಯೇ ಖಾಲಿಯಿದೆ.ಸಹಾಯಕ ಅಗ್ನಿ ಶಾಮಕ ಅಧಿಕಾರಿಯವರು ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಮಂಜೂರುಗೊಂಡ ಸಹಾಯಕ ಅಗ್ನಿಶಾಮಕ ಅಧಿಕಾರಿ-1, 4 ಚಾಲಕರಲ್ಲಿ 3 ಮಂದಿ, ಅಗ್ನಿಶಾಮಕ ಹುದ್ದೆಯ 16ರಲ್ಲಿ 7 ಹಾಗೂ ಪ್ರಮುಖ ಅಗ್ನಿ ಶಾಮಕ 4 ಹುದ್ದೆಗಳು ಭರ್ತಿಯಾಗಿದೆ.ಠಾಣಾಧಿಕಾರಿ-1, ಚಾಲಕ-1, ಅಗ್ನಿಶಾಮಕ-9, ಚಾಲಕ ತಂತ್ರಜ್ಞ-1 ಸೇರಿದಂತೆ ಒಟ್ಟು 12 ಹುದ್ದೆಗಳು ಖಾಲಿಯಿದೆ.
ಲೋಕೋಪಯೋಗಿ ಇಲಾಖೆ 13ರಲ್ಲಿ 7 ಹುದ್ದೆ ಖಾಲಿ:
ಲೋಕೋಪಯೋಗಿ ಇಲಾಖೆಯಲ್ಲಿ ಮಂಜೂರಾದ ತಾಂತ್ರಿಕ ಹಾಗೂ ಆಡಳಿತ ಶಾಖೆ ಸೇರಿದಂತೆ 13 ಹುದ್ದೆಗಳಲ್ಲಿ 6 ಹುದ್ದೆ ಭರ್ತಿಯಾಗಿ 7 ಹುದ್ದೆಗಳು ಖಾಲಿಯಿದೆ.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್-1, ಕಿರಿಯ ಇಂಜಿನಿಯರ್-2, ಪ್ರಥಮ ದರ್ಜೆ ಸಹಾಯಕ-1, ದ್ವಿತೀಯ ದರ್ಜೆ ಸಹಾಯಕ 1 ಹುದ್ದೆ ಭರ್ತಿಯಾಗಿದೆ.ಸಹಾಯಕ ಇಂಜಿನಿಯರ್-1, ದ್ವಿತೀಯ ದರ್ಜೆ ಸಹಾಯಕ-1, ಸಹವರ್ತಿ-1, ಜವಾನರು-2, ಹಾಗೂ ಕಾವಲುಗಾರ-2 ಹುದ್ದೆಗಳು ಖಾಲಿಯಿದೆ.
ಅಬಕಾರಿ ಇಲಾಖೆಯಲ್ಲಿ 13ರಲ್ಲಿ 4 ಹುದ್ದೆ ಖಾಲಿ:
ಪುತ್ತೂರು ಅಬಕಾರಿ ಇಲಾಖೆಗೆ ಮಂಜೂರಾದ 13 ಹುದ್ದೆಗಳಲ್ಲಿ 9 ಹುದ್ದೆಗಳು ಭರ್ತಿಯಾಗಿ 4 ಹುದ್ದೆಗಳು ಖಾಲಿಯಿದೆ.ಅಬಕಾರಿ ನಿರೀಕ್ಷಕರು-1, ಅಬಕಾರಿ ಉಪ ನಿರೀಕ್ಷಕರು-1, ಅಬಕಾರಿ ಪೇದೆ-2, ದ್ವಿತೀಯ ದರ್ಜೆ ಸಹಾಯಕ-1, ವಾಹನ ಚಾಲಕ-1 ಹುದ್ದೆ ಭರ್ತಿಯಾಗಿದೆ. ಅಬಕಾರಿ ಉಪನಿರೀಕ್ಷಕ-1, ಅಬಕಾರಿ ಪೇದೆ-3 ಹುದ್ದೆ ಖಾಲಿಯಿದೆ.
ಖಜಾನೆ ಇಲಾಖೆ 7ರಲ್ಲಿ 5 ಹುದ್ದೆ ಖಾಲಿ:
ತಾಲೂಕು ಆಡಳಿತ ಸೌಧದಲ್ಲಿರುವ ಖಜಾನೆ ಇಲಾಖೆಗೆ ಮಂಜೂರಾದ 7 ಹುದ್ದೆಗಳ ಪೈಕಿ 2 ಹುದ್ದೆಗಳು ಮಾತ್ರ ಭರ್ತಿಯಾಗಿದೆ. 5 ಹುದ್ದೆಗಳು ಖಾಲಿಯಾಗಿದ್ದು ಸಹಾಯಕ ನಿರ್ದೇಶಕ-1, ಪ್ರಥಮ ದರ್ಜೆ ಸಹಾಯಕ-2, ದ್ವಿತೀಯ ದರ್ಜೆ ಸಹಾಯಕ-1 ಡಿ.ಗ್ರೂಪ್-1 ಹುದ್ದೆ ಖಾಲಿಯಿದೆ.ದ್ವಿತೀಯ ದರ್ಜೆ ಸಹಾಯಕರು-1 ಹಾಗೂ ಮುಖ್ಯ ಲೆಕ್ಕಿಗ ಹುದ್ದೆ ಭರ್ತಿಯಾಗಿದೆ.ಮುಖ್ಯ ಲೆಕ್ಕಿಗರು ಪ್ರಭಾರ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉಪನೋಂದಾವಣಾ ಇಲಾಖೆ 5ರಲ್ಲಿ 2 ಹುದ್ದೆ ಖಾಲಿ:
ಉಪನೋಂದಾವಣಾ ಇಲಾಖೆಗೆ ಮಂಜೂರುಗೊಂಡ ಒಟ್ಟು 5 ಹುದ್ದೆಗಳಲ್ಲಿ 2 ಹುದ್ದೆಗಳು ಖಾಲಿಯಿದೆ.ಉಪನೋಂದಾವಣಾಽಕಾರಿ-1, ಪ್ರಥಮ ದರ್ಜೆ ಸಹಾಯಕ-1, ದ್ವಿತೀಯ ದರ್ಜೆ ಸಹಾಯಕ-2, ಡಿ ಗ್ರೂಪ್ -1 ಹುದ್ದೆ ಮಂಜೂರುಗೊಂಡಿದೆ.ದ್ವಿತೀಯ ದರ್ಜೆ ಸಹಾಯಕ-1, ಡಿ ಗ್ರೂಪ್-1 ಹುದ್ದೆ ಖಾಲಿಯಿದೆ.
ಗ್ರಾಮ ಪಂಚಾಯತ್‌ಗಳಲ್ಲಿ 55ರಲ್ಲಿ 13 ಹುದ್ದೆ ಖಾಲಿ:
ಪುತ್ತೂರಿನ 22 ಗ್ರಾ.ಪಂ.ಗಳಿಗೆ ಮಂಜೂರಾದ 55 ಹುದ್ದೆಗಳಲ್ಲಿ 42 ಭರ್ತಿಯಾಗಿ 13 ಹುದ್ದೆಗಳು ಖಾಲಿಯಿದೆ.17 ಗ್ರಾ.ಪಂ.ಗಳಲ್ಲಿ ಮಾತ್ರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಭರ್ತಿಯಾಗಿದೆ.ನೆಟ್ಟಣಿಗೆ ಮುಡ್ನೂರು,ಅರಿಯಡ್ಕ, ಹಿರೇಬಂಡಾಡಿ, ಬಡಗನ್ನೂರು ಮತ್ತು ಮುಂಡೂರು ಗ್ರಾ.ಪಂಗಳಲ್ಲಿ ಪಿಡಿಓ ಹುದ್ದೆ ಖಾಲಿಯಿದ್ದು ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೆದಂಬಾಡಿಯಲ್ಲಿ ಗ್ರೇಡ್-1 ಕಾರ್ಯದರ್ಶಿ, ಹಿರೇಬಂಡಾಡಿ ಮತ್ತು ಬಡಗನ್ನೂರು ಗ್ರಾ.ಪಂನಲ್ಲಿ ಗ್ರೇಡ್-2 ಕಾರ್ಯದರ್ಶಿ ಹುದ್ದೆ, ಆರ್ಯಾಪು, ಕೆದಂಬಾಡಿ, ಉಪ್ಪಿನಂಗಡಿ, ಪಾಣಾಜೆ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂಗಳಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ಖಾಲಿಯಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ 6ರಲ್ಲಿ 1 ಹುದ್ದೆ ಖಾಲಿ:
ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಮಂಜೂರಾದ 6 ಹುದ್ದೆಗಳಲ್ಲಿ 5 ಹುದ್ದೆಗಳು ಭರ್ತಿಯಾಗಿ 1 ಖಾಲಿಯಿದೆ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪ್ರಥಮ ದರ್ಜೆ ಸಹಾಯಕ, ಉಪ ವಲಯ ಅರಣ್ಯಾಽಕಾರಿ ಕೇಂದ್ರ ಸ್ಥಾನ, ಗಸ್ತು ಅರಣ್ಯ ಪಾಲಕ, ಜವಾನ ತಲಾ 1 ಹುದ್ದೆಗಳು ಭರ್ತಿಯಾಗಿದೆ. ವಾಹನ ಚಾಲಕ-1 ಹುದ್ದೆ ಖಾಲಿಯಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 37ರಲ್ಲಿ 21 ಹುದ್ದೆ ಖಾಲಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಂಜೂರಾದ 37 ಹುದ್ದೆಗಳಲ್ಲಿ 16 ಭರ್ತಿಯಾಗಿ 21 ಹುದ್ದೆಗಳು ಖಾಲಿಯಿದೆ.ಶಿಶು ಅಭಿವೃದ್ಧಿ ಯೋಜನಾಧಿಕಾರಿ-1, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ-1, ಹಿರಿಯ ಮೇಲ್ವಿಚಾರಕಿ-2, ಮೇಲ್ವಿಚಾರಕಿ-12 ಹುದ್ದೆಗಳು ಭರ್ತಿಯಾಗಿದೆ. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ-4, ಹಿರಿಯ ಮೇಲ್ವಿಚಾರಕಿ-1, ಪ್ರಥಮ ದರ್ಜೆ ಸಹಾಯಕ-6, ದ್ವಿತೀಯ ದರ್ಜೆ ಸಹಾಯಕ-1, ಅಂಕಿ ಅಂಶ ಸಹಾಯಕ-1, ವಾಹನ ಚಾಲಕ-2, ಡಿ.ಗ್ರೂಪ್-6 ಹುದ್ದೆಗಳು ಖಾಲಿಯಿದೆ.375 ಅಂಗನವಾಡಿ ಕೇಂದ್ರಗಳಲ್ಲಿ 1 ಅಂಗನವಾಡಿ ಕಾರ್ಯಕರ್ತೆ ಹಾಗೂ 27 ಸಹಾಯಕಿಯರ ಹುದ್ದೆಗಳು ಖಾಲಿಯಿದೆ.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಲ್ಲಿ 16ರಲ್ಲಿ 9 ಹುದ್ದೆ ಖಾಲಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಮಂಜೂರಾದ 16 ಹುದ್ದೆಗಳಲ್ಲಿ 7 ಭರ್ತಿಯಾಗಿ 9 ಹುದ್ದೆಗಳು ಖಾಲಿಯಿದೆ.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್-1, ಕಿರಿಯ ಇಂಜಿನಿಯರ್-2, ಡಾಟಾ ಎಂಟ್ರಿ ಆಪರೇಟರ್-1, ಡಿ.ಗ್ರೂಪ್-2, ಚಾಲಕ-1 ಹುದ್ದೆ ಭರ್ತಿಯಾಗಿದೆ. ಸಹಾಯಕ ಇಂಜಿನಿಯರ್-6, ಕಿರಿಯ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕ, ಡಾಟಾ ಎಂಟ್ರಿಆಪರೇಟ್ ತಲಾ 1 ಹುದ್ದೆ ಖಾಲಿಯಿದೆ.
ತೋಟಗಾರಿಕಾ ಇಲಾಖೆಯಲ್ಲಿ 12ರಲ್ಲಿ 8 ಹುದ್ದೆ ಖಾಲಿ:
ತೋಟಗಾರಿಕಾ ಇಲಾಖೆಯಲ್ಲಿ ಮಂಜೂರಾದ 12 ಹುದ್ದೆಗಳಲ್ಲಿ 4 ಭರ್ತಿಯಾಗಿ 8 ಹುದ್ದೆಗಳು ಖಾಲಿಯಿದೆ.ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು-1, ಸಹಾಯಕ ತೋಟಗಾರಿಕಾ ನಿರ್ದೇಶಕರು-1, ಅಧಿಕ್ಷಕ-1, ದ್ವಿತೀಯ ದರ್ಜೆ ಸಹಾಯಕ-1 ಹುದ್ದೆ ಭರ್ತಿಯಾಗಿದೆ. ಸಹಾಯಕ ತೋಟಗಾರಿಕಾ ಅಧಿಕಾರಿ-3, ಪ್ರಥಮ ದರ್ಜೆ ಸಹಾಯಕ-1, ಕಚೇರಿ ಸಹಾಯಕ-1 ಹುದ್ದೆ ಖಾಲಿಯಿದೆ.
ವಲಯಾರಣ್ಯಾಽಕಾರಿ ಕಚೇರಿಯಲ್ಲಿ 51ರಲ್ಲಿ 13 ಹುದ್ದೆ ಖಾಲಿ:
ಅರಣ್ಯ ಇಲಾಖೆಯ ಪುತ್ತೂರು ವಲಯಾರಣ್ಯಾಧಿಕಾರಿಯವರ ಕಚೇರಿಯಲ್ಲಿ ಮಂಜೂರಾದ 51 ಹುದ್ದೆಗಳಲ್ಲಿ 38 ಹುದ್ದೆಗಳು ಭರ್ತಿಯಾಗಿದೆ.13 ಹುದ್ದೆಗಳು ಖಾಲಿಯಿದೆ.ವಲಯಾರಣ್ಯಾಧಿಕಾರಿ, ಪ್ರಥಮ ದರ್ಜೆ ಸಹಾಯಕ ತಲಾ 1 ಹುದ್ದೆ, ಉಪ ವಲಯಾರಣ್ಯಾಧಿಕಾರಿ-14, ಗಸ್ತು ಪಾಲಕ-20, ಅರಣ್ಯ ವೀಕ್ಷಕರು-2 ಹುದ್ದೆಗಳು ಭರ್ತಿಯಾಗಿದೆ.ದ್ವಿತೀಯ ದರ್ಜೆ ಸಹಾಯಕ, ಜವಾನ, ಬಂಗ್ಲೆಮೇಟಿ ತಲಾ 1 ಹುದ್ದೆ, ಗಸ್ತು ಅರಣ್ಯ ಪಾಲಕ-7 ಹಾಗೂ ಅರಣ್ಯ ವೀಕ್ಷಕ-3 ಹುದ್ದೆಗಳು ಖಾಲಿಯಿದೆ.
ನಗರ ಯೋಜನಾ ಪ್ರಾಧಿಕಾರ(ಪೂಡ)ದಲ್ಲಿ ಮಂಜೂರಾದ 3 ಹುದ್ದೆಯೂ ಖಾಲಿ:
ನಗರ ಯೋಜನಾ ಪ್ರಾಧಿಕಾರ(ಪೂಡ)ಕಚೇರಿಯಲ್ಲಿ ಮಂಜೂರಾದ 3 ಹುದ್ದೆಗಳಲ್ಲಿ ಸದಸ್ಯ ಕಾರ್ಯದರ್ಶಿ, ಪ್ರಥಮ ದರ್ಜೆ ಸಹಾಯಕ, ಟೈಪಿಸ್ಟ್ ಎಲ್ಲಾ ಹುದ್ದೆಗಳು ಖಾಲಿಯಿದೆ.ಸದ್ಯ ಸದಸ್ಯ ಕಾರ್ಯದರ್ಶಿ ನಿಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅಲ್ಲದೆ ಇಬ್ಬರು ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೆಎಸ್‌ಆರ್‌ಟಿಸಿಯಲ್ಲಿ ಹುದ್ದೆ ಖಾಲಿ ಇಲ್ಲ:
ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದ ಪುತ್ತೂರು, ಸುಳ್ಯ, ಮಡಿಕೇರಿ, ಧರ್ಮಸ್ಥಳ ಹಾಗೂ ಬಿ.ಸಿ ರೋಡ್ ಘಟಕಗಳಿಗೆ ಸೇರಿದಂತೆ ಮಂಜೂರಾದ ಚಾಲಕ ಮತ್ತು ನಿರ್ವಾಹಕರು 1,485 ಹುದ್ದೆಗಳು ಅವಶ್ಯಕತೆಯಿದ್ದು ಎಲ್ಲಾ ಹುದ್ದೆಗಳು ಭರ್ತಿಯಾಗಿದೆ. ಕಚೇರಿ ಅಧಿಕಾರಿ, ಸಿಬ್ಬಂದಿ ಹುದ್ದೆಯೂ ಭರ್ತಿಯಾಗಿದೆ.
ಸಾಮಾಜಿಕ ಅರಣ್ಯ ಇಲಾಖೆ ಮಂಜೂರಾದ ಹುದ್ದೆ ಭರ್ತಿ:
ಸಾಮಾಜಿಕ ಅರಣ್ಯ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ಉಪ ವಲಯ ಅರಣ್ಯಾಽಕಾರಿ 2 ಹುದ್ದೆ ಮಂಜೂರುಗೊಂಡಿದ್ದು ಎರಡು ಹುದ್ದೆಗಳೂ ಭರ್ತಿಯಾಗಿದೆ.ಡಾಟಾ ಎಂಟ್ರ ಆಪರೇಟರ್, ಚಾಲಕ ತಲಾ 1 ಹುದ್ದೆ ಹೊರಗುತ್ತಿಗೆ ಹಾಗೂ ಒಬ್ಬ ದಿನಕೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೀನುಗಾರಿಕೆ ಇಲಾಖೆಯಲ್ಲಿ 4ರಲ್ಲಿ 3 ಹುದ್ದೆ ಖಾಲಿ:
ಮೀನುಗಾರಿಕೆ ಇಲಾಖೆಯಲ್ಲಿ ಮಂಜೂರಾದ 4 ಹುದ್ದೆಗಳಲ್ಲಿ ಸಹಾಯಕ ನಿರ್ದೇಶಕ-1 ಹುದ್ದೆ ಭರ್ತಿಯಾಗಿದೆ.ಗ್ರೂಪ್ ಸಿ-2 ಹಾಗೂ ಗ್ರೂಪ್ ಡಿ-1 ಹುದ್ದೆ ಖಾಲಿಯಿದೆ.
ಅಲ್ಪಸಂಖ್ಯಾತ ಮಾಹಿತಿ ಕೇಂದ್ರದಲ್ಲಿ 2 ಹುದ್ದೆಯೂ ಭರ್ತಿ:
ಅಲ್ಪಸಂಖ್ಯಾತ ಮಾಹಿತಿ ಕೇಂದ್ರದಲ್ಲಿ ಮಂಜೂರಾದ ಎರಡು ಹುದ್ದೆಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಹಾಗೂ ಡಿ ಗ್ರೂಪ್ ಎರಡೂ ಹುದ್ದೆಗಳು ಖಾಲಿಯಿದೆ.
ವಿಕಲಚೇತನ ಇಲಾಖೆ ಹುದ್ದೆ ಖಾಲಿ ಇಲ್ಲ:
ವಿಕಲಚೇತನ ಇಲಾಖೆಯಲ್ಲಿ ಮಂಜೂರಾದ ಪುನರ್ವಸತಿ ಕಾರ್ಯಕರ್ತ-1 ಹುದ್ದೆ ಹಾಗೂ 22 ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹಾಗೂ 3 ನಗರ ಕಾರ್ಯಕರ್ತ ಹುದ್ದೆಗಳೂ ಭರ್ತಿಯಾಗಿದೆ.
ಮಹಿಳಾ ಸಾಂತ್ವನ ಕೇಂದ್ರದಲ್ಲೂ ಹುದ್ದೆಗಳು ಭರ್ತಿ:
ಪುತ್ತೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಂಜೂರಾರ ಕೌನ್ಸಿಲರ್-1, ಸೋಶಿಯಲ್ ವರ್ಕರ್-2 ಹುದ್ದೆಗಳು ಮಂಜೂರುಗೊಂಡಿದ್ದು ಎಲ್ಲಾ ಹುದ್ದೆಗಳು ಭರ್ತಿಯಾಗಿದೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ 103ರಲ್ಲಿ 78 ಹುದ್ದೆ ಖಾಲಿ:
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಮಂಜೂರಾರ 103 ಹುದ್ದೆಗಳಲ್ಲಿ 25 ಭರ್ತಿಯಾಗಿ 78 ಹುದ್ದೆಗಳು ಖಾಲಿಯಿದೆ.ಪ್ರಮುಖವಾಗಿ ವಿಭಾಗೀಯ ವ್ಯವಸ್ಥಾಪಕ-1, ಸಹಾಯಕ ವಿಭಾಗೀಯ ವ್ಯವಸ್ಥಾಪಕ-1, ಪ್ಲಾಂಟೇಷನ್ ಅಧಿಕ್ಷಕ-4, ಲೆಕ್ಕಿಗ-1, ಜೂನಿಯರ್ ಇಂಜಿನಿಯರ್-1, ಪ್ರಥಮ ದರ್ಜೆ ಸಹಾಯಕ-4, ಸಹಾಯಕ ಪ್ಲಾಂಟೇಷನ್ ಅಧಿಕ್ಷಕ-31, ಹಿರಿಯ ಚಾಲಕ-1, ದ್ವಿತೀಯ ದರ್ಜೆ ಸಹಾಯಕ-3, ಟೈಪಿಸ್ಟ್-1, ಅರಣ್ಯ ರಕ್ಷಕ-4, ಚಾಲಕ-2, ಜವಾನ ಕಂ ಹೆಲ್ಪರ್-4, ಪ್ಲಾಂಟೇಷನ್ ವಾರ‍್ಸ್-20 ಹುದ್ದೆಗಳು ಖಾಲಿಯಿದೆ.ಅಧಿಕ್ಷಕ-1, ಹಿರಿಯ ಟೈಪಿಸ್ಟ್-1, ಸಹಾಯಕ ಪ್ಲಾಂಟೇಷನ್ ಅಽಕ್ಷಕ-2, ದ್ವಿತೀಯ ದರ್ಜೆ ಸಹಾಯಕ-1, ಅರಣ್ಯ ರಕ್ಷಕ-6, ಜವಾನ-2, ವಾಚ್‌ಮೆನ್-1, ಪ್ಲಾಂಟೇಷನ್ ವಾರ‍್ಸ್-6, ಸಾಕ್ಷರತಾ ಸಹಾಯಕ-2, ಹೆಲ್ಪರ್ ಕಂ ಕ್ಲೀನರ್-2, ಪ್ಲಾಂಟೇಷನ್ ವಾಚರ್-1 ಹುದ್ದೆಗಳು ಭರ್ತಿಯಾಗಿದೆ.
ಪೊಲೀಸ್ ಇಲಾಖೆಯಲ್ಲಿ 30 ಹುದ್ದೆ ಖಾಲಿ:
ಪೊಲೀಸ್ ಇಲಾಖೆಗೆ ಸಂಬಂಧಿಸಿ ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಕಚೇರಿ,ಪುತ್ತೂರು ನಗರ, ಸಂಚಾರಿ, ಮಹಿಳಾ ಹಾಗೂ ಪುತ್ತೂರು ಗ್ರಾಮಾಂತರ(ಸಂಪ್ಯ)ಠಾಣೆ ಸೇರಿದಂತೆ ಮಂಜೂರಾದ ಒಟ್ಟು 185 ಹುದ್ದೆಗಳಲ್ಲಿ 155 ಭರ್ತಿಯಾಗಿ 30 ಹುದ್ದೆಗಳು ಖಾಲಿಯಿದೆ.ಡಿವೈಎಸ್‌ಪಿ ಕಚೇರಿಯಲ್ಲಿ ಡಿವೈಎಸ್‌ಪಿ-ಹುದ್ದೆ ಹಾಗೂ ಹೆಡ್‌ಕಾನ್‌ಸ್ಟೇಬಲ್-2 ಹುದ್ದೆ ಮಂಜೂರಾಗಿದ್ದು ಎಲ್ಲಾ 3 ಹುದ್ದೆಗಳು ಭರ್ತಿಯಾಗಿದೆ.ಪೊಲೀಸ್ ಇಲಾಖೆಯ ನಗರ ಠಾಣೆಗೆ ಮಂಜೂರಾದ 61 ಹುದ್ದೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್-1, ಸಬ್ ಇನ್ಸ್ಪೆಕ್ಟರ್-4, ಎಎಸ್‌ಐ-7, ಹೆಡ್‌ಕಾನ್‌ಸ್ಟೇಬಲ್-14, ಕಾನಸ್ಟೇಬಲ್-35 ಹುದ್ದೆಗಳು ಭರ್ತಿಯಾಗಿದ್ದು ಸಬ್ ಇನ್ಸ್ಪೆಕ್ಟರ್-1 ಹಾಗೂ ಕಾನ್‌ಸ್ಟೇಬಲ್ 3 ಹುದ್ದೆಗಳು ಖಾಲಿಯಿದೆ.ಸಂಚಾರಿ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್-2, ಎಎಸ್‌ಐ-3, ಹೆಡ್‌ಕಾನ್‌ಸ್ಟೇಬಲ್-10, ಕಾನ್‌ಸ್ಟೇಬಲ್-27 ಹುದ್ದೆಗಳು ಮಂಜೂರಾಗಿದ್ದು 6 ಕಾನ್‌ಸ್ಟೇಬಲ್ ಹುದ್ದೆ ಖಾಲಿಯಿದೆ.ಮಹಿಳಾ ಠಾಣೆಯಲ್ಲಿ ಇನ್ಸ್ಪೆಕ್ಟರ್-1, ಸಬ್ ಇನ್ಸ್ ಪೆಕ್ಟರ್-2, ಎಎಸ್‌ಐ-2, ಹೆಡ್‌ಕಾನ್‌ಸ್ಟೇಬಲ್-8, ಕಾನ್‌ಸ್ಟೇಬಲ್-20 ಹುದ್ದೆಗಳು ಮಂಜೂರಾಗಿದ್ದು 1 ಸಬ್ ಇನ್ಸ್ಪೆಕ್ಟರ್ ಹಾಗೂ 13 ಕಾನ್‌ಸ್ಟೇಬಲ್ ಹುದ್ದೆ ಖಾಲಿಯಿದೆ. ಸಂಪ್ಯ ಪೊಲೀಸ್ ಠಾಣೆಗೆ ಮಂಜೂರಾರ 46 ಹುದ್ದೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್-1, ಹೆಡ್‌ಕಾನ್‌ಸ್ಟೇಬಲ್-1, ಕಾನ್‌ಸ್ಟೇಬಲ್-4 ಹುದ್ದೆಗಳು ಖಾಲಿಯಿದೆ.ಸಬ್‌ಇನ್ಸ್ಪೆಕ್ಟರ್-2, ಎಎಸ್‌ಐ 5, ಹೆಡ್‌ಕಾನ್‌ಸ್ಟೇಬಲ್-12 ಹಾಗೂ ಕಾನ್‌ಸ್ಟೇಬಲ್-36 ಹುದ್ದೆಗಳು ಭರ್ತಿಯಾಗಿದೆ.
ಕಾರ್ಮಿಕ ಇಲಾಖೆಯಲ್ಲಿ 1 ಹುದ್ದೆ ಖಾಲಿ:
ಕಾರ್ಮಿಕ ಇಲಾಖೆಯಲ್ಲಿ ಮಂಜೂರಾದ 2 ಹುದ್ದೆಗಳಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ-1 ಹುದ್ದೆ ಭರ್ತಿಯಾಗಿದ್ದು ಅಟೆಂಡರ್-1 ಹುದ್ದೆ ಖಾಲಿಯಿದೆ.
ಸಿಬ್ಬಂದಿ ಕೊರತೆಯಿಂದ ಕೆಲಸಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ -ಅಶೋಕ್ ಕುಮಾರ್ ರೈಪ್ರತಿ ಇಲಾಖೆಯಲ್ಲಿಯೂ ಅಗತ್ಯ ಅಽಕಾರಿ,ಸಿಬ್ಬಂದಿಗಳಿದ್ದಾರೆ.ಕೊರತೆ ಇರುವಲ್ಲಿಗೆ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳುವ ಮೂಲಕ, ಸಿಬ್ಬಂದಿ ಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ,ಸಿಬ್ಬಂದಿ ಕೊರತೆಯಿಂದ ಕೆಲಸಕ್ಕೆ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅಗತ್ಯಕ್ಕೆ ಬೇಕಾದಷ್ಟು ಅಧಿಕಾರಿಗಳಿದ್ದಾರೆ. ಶಿಕ್ಷಕರು ಸೇರಿದಂತೆ ಹೆಚ್ಚುವರಿಯಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿದೆ. ಪ್ರತಿ ಪಂಚಾಯತ್‌ನಲ್ಲಿ ಮೂರು ನಾಲ್ಕು ಮಂದಿ ಸ್ಥಳೀಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿರುವ ನೌಕರರ ಮೇಲೆ ಹತೋಟಿ ಇರುತ್ತದೆ. ಆಯಾ ಇಲಾಖೆಗಳಲ್ಲಿ ಬೇಕಾದಷ್ಟು ಅಧಿಕಾರಿ ಸಿಬ್ಬಂದಿಗಳಿದ್ದಾರೆ. ಕೊರತೆ ಇರುವಲ್ಲಿಗೆ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗಿದೆ.ಸರಕಾರಕ್ಕೆ ಆರ್ಥಿಕ ಹೊರೆ ಆಗದಂತೆ ನೋಡಿಕೊಳ್ಳಲಾಗಿದೆ. ಯಾವುದೇ ಇಲಾಖೆಗಳಲ್ಲಿ ಅಧಿಕಾರಿ, ಸಿಬ್ಬಂದಿಗಳ ಕೊರತೆಯಿಂದ ಕೆಲಸಕ್ಕೆ ತೊಂದರೆ ಅಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ.ಅಂತಹ ಅವಶ್ಯಕತೆ ಇರುವ ಇಲಾಖೆಗಳಿಗೆ ಹೊರಗುತ್ತಿಗೆ ಮೂಲಕ ಸ್ಥಳೀಯವಾಗಿ ನೇಮಕ ಮಾಡಿಕೊಂಡು ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು.ಸರಕಾರ ನೇಮಕ ಮಾಡಿದರೂ ಹೊರಭಾಗದವರು ಬಂದಾಗ ಸ್ಥಳೀಯರ ಉದ್ಯೋಗಕ್ಕೆ ತೊಂದರೆ ಉಂಟಾಗುತ್ತದೆ. ಸಿಬಂದಿ ಕೊರತೆ ಬಗ್ಗೆ ಈ ಹಿಂದೆ ನಡೆದ ಅಧಿವೇಶನದಲ್ಲಿ ಪ್ರಶ್ನಿಸಿದ್ದು ಅದಕ್ಕೆ ಉತ್ತರ ನೀಡಿದ್ದಾರೆ. ಎಲ್ಲಾ ಕಡೆ ಸರಕಾರ ನೇಮಕ ಮಾಡಿದರೆ ಹೊರಗುತ್ತಿಗೆಯಲ್ಲಿರುವ ಸ್ಥಳೀಯ ಸಿಬಂದಿಗಳಿಗೆ ಕೆಲಸವಿಲ್ಲದಾಗುವ ಸಾಧ್ಯತೆಯಿದೆ ಎಂದು ಶಾಸಕರು ಹೇಳಿದ್ದಾರೆ.