ಪುತ್ತೂರು: ಗದ್ದೆಗೆ ಇಳಿಯೋಣ ಬೇಸಾಯ ಮಾಡೋಣ ಕಾರ್ಯಕ್ರಮದಲ್ಲಿ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ನಡೆಸಲಾದ ಗದ್ದೆ ಬೇಸಾಯದಲ್ಲಿ ಬೆಳೆದ ಪೈರಿನ ಕಟಾವು ನ.13ರಂದು ನಡೆಸಿದರು.
ಪ್ರಾರಂಭದಲ್ಲಿ ಶ್ರೀಮಹಾವಿಷ್ಣುಮೂರ್ತಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪೈರಿನ ಕಟಾವು ನಡೆಸಲಾಯಿತು. ಸಾಂಪ್ರದಾಯಿಕವಾಗಿಯೇ ಕಟಾವು ನಡೆಸಿದರು. ಕಟಾವು ಮಾಡಿದ ಬಳಿಕ ತೆನೆಯಿಂದ ಭತ್ತವನ್ನು ಬೇರ್ಪಡಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಉದ್ಯಮಿ ಶಿವರಾಮ ಆಳ್ವ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್., ಯುವಕ ಮಂಡಲದ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಭತ್ತ ಕಟಾವು ಕಾರ್ಯದಲ್ಲಿ ಭಾಗ ವಹಿಸಿದ್ದರು.