ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ದಶಮಾನೋತ್ಸವದ ಆಮಂತ್ರಣ ಪತ್ರ ವಿತರಣೆಗೆ ಚಾಲನೆ

0

ಪುತ್ತೂರು: ಡಿಸೆಂಬರ್ 3 ಮತ್ತು 4ರಂದು ಪಡ್ನೂರು ಉ.ಹಿ.ಪ್ರಾ ಶಾಲಾ ವಠಾರದಲ್ಲಿ ನಡೆಯಲಿರುವ ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ನ ದಶಮಾನೋತ್ಸವದ ಪ್ರಯುಕ್ತದ ‘ನಮ್ಮೂರ ಹಬ್ಬ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ನ. 20ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.


ಶಾಸಕ ಸಂಜೀವ ಮಠಂದೂರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬುಡಿಯಾರ್, ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ,ಮಾಜಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಬಿಜೆಪಿ ಪ್ರಧಾನ‌ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ಶ್ರೀ ರಾಮ್ ಫ್ರೆಂಡ್ಸ್ ಸಂಚಾಲಕ ವಿಶ್ವನಾಥ ಪಂಜಿಗುಡ್ಡೆ, ಗೌರವಾಧ್ಯಕ್ಷ ನವೀನ್ ಪಡ್ನೂರು, ಪದಾಧಿಕಾರಿಗಳಾದ ಮೋಹನ್ ದಾಸ್, ಲೋಕೇಶ್ ಮುಂಡಾಜೆ ,ಕೀರ್ತಿಕ್ ಕುಂಜಾರು ,ತೀರ್ಥ ಪ್ರಸಾದ್ ಮುಂಡಾಜೆ, ಹರೀಶ್ ಮತ್ತಿತರರು ಇದ್ದರು.

ಡಿಸೆಂಬರ್ 3ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಖ್ಯಾತ ವೈದ್ಯ ಡಾ.‌ಎಂ. ಕೆ. ಪ್ರಸಾದ್ ಉದ್ಘಾಟಿಸಲಿದ್ದಾರೆ. ಬಳಿಕ ರಕ್ತದಾನ ಶಿಬಿರ ಹಾಗೂ ಸಾಂಸ್ಕೃತಿಕ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮದ ಜೊತೆಗೆ 55 ಕೆ.ಜಿ. ವಿಭಾಗದ ಪುರುಷರ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ನಡೆಯಲಿದೆ. ಉದ್ಘಾಟನೆಯನ್ನು ಮದಗ ಶ್ರೀ ಜನಾರ್ದನ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟರಮಣ ಭಟ್ ಹಾರಕೆರೆ ನೆರವೇರಿಸಲಿದ್ದಾರೆ.

ಡಿ.4ರಂದು ಬೆಳಿಗ್ಗೆ ಪ್ರೊ. ಮಾದರಿಯ ಮುಕ್ತ ವಿಭಾಗದ ಕಬಡ್ಡಿ ಪಂದ್ಯಾಟ ಜರಗಲಿದೆ. ವಿಜೇತ ತಂಡಗಳಿಗೆ ಸಾರ್ವಕರ್ ಟ್ರೋಫಿ 2022 ಹಾಗೂ ನಗದು ಬಹುಮಾನ ನೀಡಲಾಗುವುದು.‌ ಹಿಂದೂ ಭಾಂಧವರಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದು ಸಚಿವರು ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬಳಿಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕ್ಕಾಡ್ ಅವರ ‘ನಾಯಿದ ಬೀಲ’ ತುಳು ಹಾಸ್ಯ ನಾಟಕ ನಡೆಯಲಿದೆ. ಕಾರ್ಯಕ್ರಮದ ಎರಡೂ ದಿನವೂ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಹಾಗೂ ಆಕರ್ಷಕ ಸುಡು ಮದ್ದು ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here