ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ಡಿ.೪ರ ತನಕ ನಡೆಯಲಿರುವ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞಕ್ಕೆ ಪೂರ್ವಭಾವಿಯಾಗಿ ನ.೨೭ರಂದು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಹೊರೆಕಾಣಿಕೆ ಮೆರವಣಿಗೆಯು ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಿಂದ ಹೊರಟು ಗೋಳಿತ್ತೊಟ್ಟು ಪೇಟೆ, ರಾಷ್ಟ್ರೀಯ ಹೆದ್ದಾರಿ ಮೂಲಕ ಪೆರಣ ದೈವಗಳ ಸಾನಿಧ್ಯಕ್ಕೆ ಆಗಮಿಸಿತು. ಪಿಕಪ್, ಜೀಪು, ರಿಕ್ಷಾ, ದ್ವಿಚಕ್ರ ವಾಹನಗಳ ಮೂಲಕ ಮೆರವಣಿಗೆಯೂ ಆಗಮಿಸಿತು. ಹೊರೆಕಾಣಿಕೆ ಸಮಿತಿ ಸಂಚಾಲಕ ಡೊಂಬಯ್ಯ ಗೌಡ ಗೌಡತ್ತಿಗೆ ಅವರು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಾಗೂ ಶಿವಾರು ರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು. ಪೆರಣ ಭಂಡಾರ ಮನೆಯ ಮೊಕ್ತೇಸರರಾದ ವಿಶ್ವನಾಥ ಗೌಡ, ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಅಧ್ಯಕ್ಷ ಓಡ್ಯಪ್ಪ ಗೌಡ ಪೆರಣ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಉಪಾಧ್ಯಕ್ಷರಾದ ತಿಮ್ಮಪ್ಪ ಗೌಡ ಕೋಡಿಯಡ್ಕ, ಕುಶಾಲಪ್ಪ ಗೌಡ ಅನಿಲ, ಕೊರಗಪ್ಪ ಗೌಡ ಕಲ್ಲಡ್ಕ, ನಾಗಪ್ಪ ಗೌಡ ಅಲಂಗೂರು, ಹೊನ್ನಪ್ಪ ಗೌಡ ಕುದ್ಕೋಳಿ, ಚೆನ್ನಪ್ಪ ಗೌಡ ಹೊಕ್ಕಿಲ, ಆನಂದ ಗೌಡ ಬರಮೇಲು, ಜೊತೆ ಕಾರ್ಯದರ್ಶಿ ಶೇಖರ ಗೌಡ ಬನತ್ತಕೋಡಿ, ಕೋಶಾಧಿಕಾರಿ ಜನಾರ್ದನ ಗೌಡ ಪಟೇರಿ, ಸದಸ್ಯರಾದ ಕಮಲಾಕ್ಷ ಗೌಡ ಗೋಳಿತ್ತೊಟ್ಟು, ಮೋಹನ ಗೌಡ ಪಟೇರಿ, ಮಂಜಪ್ಪ ಗೌಡ ಪೆರ್ನೆ, ವೀರಪ್ಪ ಗೌಡ ಕಲ್ಲಡ್ಕ, ನೋಣಯ್ಯ ಗೌಡ ಅನಿಲ, ವಿವಿಧ ಸಮಿತಿ ಸಂಚಾಲಕರಾದ ಆನಂದ ಗೌಡ ದೇವಸ್ಯಕೋಡಿ, ಶೇಖರ ಗೌಡ ಅನಿಲಬಾಗ್, ಡೀಕಯ್ಯ ಗೌಡ ಕಲ್ಲಡ್ಕ, ರಮೇಶ ಗೌಡ ಕಲ್ಲಡ್ಕ, ವೆಂಕಪ್ಪ ಗೌಡ ಡೆಬ್ಬೇಲಿ, ನವೀನ ಗೌಡ ಕೋಡಿಯಡ್ಕ, ಬಾಲಕೃಷ್ಣ ಗೌಡ ಗೌಡತ್ತಿಗೆ. ಮಾಧವ ಗೌಡ ಪೆರಣ, ಪುರುಷೋತ್ತಮ ಕುದ್ಕೋಳಿ,ತಿರುಮಲ ಗೌಡತ್ತಿಗೆ, ನಾರಾಯಣ ಗೌಡ ತೆಂಕುಬೈಲು ಸೇರಿದಂತೆ ಸದಸ್ಯರು,ಗ್ರಾಮಸ್ಥರು ಪಾಲ್ಗೊಂಡಿದ್ದರು.
ದೇವತಾ ಕಾರ್ಯಕ್ರಮ:
ಪೆರಣ ಭಂಡಾರ ಮನೆಯಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಹರಿದ್ರಾ ಗಣಪತಿ ಹವನ ನಡೆಯಿತು. ತಿರ್ಲೆ ಕೊಣಾಲು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಹರಿದ್ರಾ ಗಣಪತಿ ಹವನದ ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಿತು. ಸಂಜೆ ಲಘು ಸುದರ್ಶನ ಹೋಮ, ರಾತ್ರಿ ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಿತು.
ಇಂದಿನಿಂದ ಪಾರಾಯಣ ಆರಂಭ:
ನ.೨೮ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಸಂಕಲ್ಪ, ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ವರಣೆ, ಕಲಶ ಪ್ರತಿಷ್ಠೆ, ಕಲಶಾರಾಧನೆ ನಡೆದು ಶ್ರೀ ಮದ್ಭಾಗವತ ಪಾರಾಯಣ ಆರಂs, ಮನುಕರ್ದಮ ಸಂವಾದ ಪರ್ಯಂತ, ಶ್ರೀ ದತ್ತಾತ್ರೇಯ ಹವನ ನಡೆಯಲಿದೆ. ಮಧ್ಯಾಹ್ನ ಶ್ರೀ ಜ್ಯೋತಿವೈದ್ಯ ಸಂಗೀತ ಸಂಗಮ ಇವರಿಂದ ಸಂಗೀತ ಸೇವೆ, ಸಂಜೆ ಶ್ರೀ ಮದ್ಭಾಗವತ ಪ್ರಚವನ ನಡೆಯಲಿದೆ.
ನೇರ ಪ್ರಸಾರ:
ಕಾರ್ಯಕ್ರಮದ ನೇರ ಪ್ರಸಾರ ಸುದ್ದಿ ನ್ಯೂಸ್ ಯು ಟ್ಯೂಬ್ ಚಾನೆಲ್ನಲ್ಲಿ ಪ್ರಸಾರಗೊಂಡಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದರು.