ನಿವೃತ್ತ ಶಿಕ್ಷಕಿ ಆಲಿಸ್ ರೆಬೆಲ್ಲೋರವರಿಂದ ಮಾಯಿದೆ ದೇವುಸ್ ಶಾಲೆಗೆ 15 ಕಂಪ್ಯೂಟರ್‌ಗಳ ಕೊಡುಗೆ

0

ಪುತ್ತೂರು: ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿನಿ, ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಶ ಆಲಿಸ್ ರೆಬೆಲ್ಲೋರವರು ಮಾಯಿದೆ ದೇವುಸ್ ಶಾಲೆಗೆ ಸುಮಾರು ರೂ.2 ಲಕ್ಷ ಮೌಲ್ಯದ 15 ಕಂಪ್ಯೂಟರ್‌ಗಳ ಕೊಡುಗೆಯನ್ನು ಹಸ್ತಾಂತರಿಸಿದರು.


ನಿವೃತ್ತ ಶಿಕ್ಷಕಿ ಆಲಿಸ್ ರೆಬೆಲ್ಲೋರವರು ಮಾಯಿದೆ ದೇವುಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ತನ್ನ ಪ್ರೀತಿಯ ಶಿಕ್ಷಕಿಯಾಗಿರುವ ದಿ.ಫ್ಲೇವಿಯಾ ಮಿರಾಂದರವರ ನೆನಪಿಗಾಗಿ ಈ ಕಂಪ್ಯೂಟರ್‌ಗಳನ್ನು ನೀಡಲಾಗಿದ್ದು, ಇದರ ಸಂಪೂರ್ಣ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಲಿ ಎಂದು ಆಲಿಸ್ ರೆಬೆಲ್ಲೋರವರು ಆಶಿಸಿದರು. ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಪವಿತ್ರ ಜಲ ಸಿಂಪಡಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶಾಲೆಗೆ ಕಂಪ್ಯೂಟರ್ ಕೊಡುಗೆಯನ್ನು ನೀಡಿದ ನಿವೃತ್ತ ಶಿಕ್ಷಕಿ ಆಲಿಸ್ ರೆಬೆಲ್ಲೋರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಚರ್ಚ್‌ನ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ,ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ಫ್ಲಾವಿಯಾ ಆಲ್ಬುಕರ್ಕ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಜಾನೆಟ್ ಡಿ’ಸೋಜ ವಂದಿಸಿದರು. ಶಿಕ್ಷಕ ಸುಬ್ಬರಾಜು ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here