೦ ಸಾರ್ಥಕ ಸೇವೆಯನ್ನು ಗುರುತಿಸುವ ಮೂಲಕ ಇತರರಿಗೆ ಪ್ರೇರಣೆ ಸಿಗಲಿದೆ-ಮಠಂದೂರು
೦ ನಿಶ್ವಾರ್ಥ ಸೇವೆಗೆ ನಾವುಗಳು ಕೃತಜ್ಞರಾಗಬೇಕು-ಪ್ರತಾಪಸಿಂಹ ನಾಯಕ್
ಉಪ್ಪಿನಂಗಡಿ: ಭಾರತೀಯ ಭೂಸೇನೆಯಲ್ಲಿ ಸುಧೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಹವಾಲ್ದಾರ್ ನಂದಾವರ ವಿಶ್ವನಾಥ ಶೆಣೈಯವರನ್ನು ಡಿ. 4ರಂದು ಉಪ್ಪಿನಂಗಡಿಯಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡು ಸ್ವಾಗತಿಸಿ, ಅಭಿನಂದಿಸಲಾಯಿತು.
ಉಪ್ಪಿನಂಗಡಿ ರಾಮನಗರ ಶ್ರೀ ಶಾರದಾ ಕಲಾ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಸಂಜೀವ ಮಠಂದೂರು ಮಾತನಾಡಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡ ನಂದಾವರ ವಿಶ್ವನಾಥ ಶೆಣೈಯವರು ಯುವ ಸಮೂಹಕ್ಕೆ ಮಾದರಿ ಆಗಿದ್ದಾರೆ. ಅವರ ಸೇವೆಯನ್ನು ಗುರುತಿಸುವ ಮೂಲಕ ದೇಶ ಕಾಯುವ ಸೈನಿಕ ಸೇವೆಗೆ ಇನ್ನಷ್ಟು ಪ್ರೇರಣೆ ದೊರಕಲಿದ್ದು, ಶೆಣೈಯವರ ಮುಂದಿನ ಜೀವನದಲ್ಲಿ ಇನ್ನಷ್ಟು ಸೇವೆಗಳು ನಡೆಯಲಿ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ ಸೈನಿಕರಲ್ಲಿ ವಿಶ್ವಾಸ ತುಂಬುವ ಕೆಲಸ ಈಗ ಸರ್ಕಾರದ ವತಿಯಿಂದ ನಡೆಯುತ್ತಿದ್ದು, ಸಮಾಜವೂ ಅವರ ಸೇವೆಯನ್ನು ಗುರುತಿಸುವ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸೈನಿಕರೊಂದಿಗೆ ಸಮಾಜವೂ ಇರುತ್ತದೆ ಎನ್ನುವುದನ್ನು ತೋರಿಸಿಕೊಡಬೇಕಾಗಿದ್ದು, ಇಂತಹ ಕಾರ್ಯಕ್ರಮಗಳು ಅವರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದರು.
ಬಿ.ಎಸ್.ಎಫ್. ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಉಷಾ ಚಂದ್ರ ಮುಳಿಯ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ನಂದಾವರ ವಿಶ್ವನಾಥ ಶೆಣೈಯವರನ್ನು ಮಾತನಾಡಿ ನನ್ನ ಸೇವೆಯನ್ನು ಗುರುತಿಸಿ, ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಅಭಾರಿ ಆಗಿರುವುದಾಗಿ ತಿಳಿಸಿದರು.
ಯೋಧರಿಗೆ ಸನ್ಮಾನ:
ಸಮಾರಂಭದಲ್ಲಿ ಬಿ.ಎಸ್.ಎಫ್. ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಎಂ.ಟಿ. ತಂಗಚ್ಚನ್, ಸುರೇಶ್ ನಾಯ್ಕ್, ರಮೇಶ್ ಶೆಟ್ಟಿ, ಭವಾನಿ ಶಂಕರ್ ಬಾರ್ಯ, ನಾರಾಯಣ ಪಿ.ಹೆಚ್., ರಮೇಶ್ ಹೆಗ್ಡೆ ನಟ್ಟಿಬೈಲ್, ಸತೀಶ್ ಶೆಟ್ಟಿ ಹಾಗೂ ಸೇವಾ ನಿರತರಾಗಿರುವ ಮಹೇಶ್ ಬೆತ್ತೋಡಿ,
ಸುಧೀರ್ ಶೆಟ್ಟಿ ನೂಜಿ ಇವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ತೆರೆದ ಜೀಪಿನಲ್ಲಿ ಮೆರವಣಿಗೆ, ಗೌರವ ಅರ್ಪಣೆ:
ಹವಾಲ್ದಾರ್ ನಂದಾವರ ವಿಶ್ವನಾಥ ಶೆಣೈಯವರು ಕರ್ವೇಳ್ ತಲುಪುತ್ತಿದ್ದಂತೆ ಅವರನ್ನು ಬರಮಾಡಿಕೊಂಡು ತೆರ%