ಪುತ್ತೂರು: ಶ್ರೀ ಅಯ್ಯಪ್ಪ ಭಜನಾ ಮಂದಿರ ದರ್ಬೆತ್ತಡ್ಕ ಇದರ ಪ್ರತಿಷ್ಠಾ ದಿನದ ಪುನ ಪ್ರತಿಷ್ಠೆ ಹಾಗೂ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ನೂತನ ಭಜನಾ ಮಂಟಪದ ಉದ್ಘಾಟನಾ ಕಾರ್ಯಕ್ರಮವು ಡಿ.6 ರಂದು ನಡೆಯಲಿದೆ.
ಬೆಳಿಗ್ಗೆ 7.30 ರಿಂದ ಗಣಹೋಮ, ಶ್ರೀ ಅಯ್ಯಪ್ಪ ಪೂಜೆ, ರಕ್ತೇಶ್ಙರಿಗೆ ತಂಬಿಲ, 9 ರಿಂದ ನೂತನ ಸಭಾ ಮಂಟಪ ಉದ್ಘಾಟನೆ, 9.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 5ರಿಂದ ಭಜನಾ ಕಾರ್ಯಕ್ರಮ, ರಾತ್ರಿ 7.30 ರಿಂದ ಸಭೆ ಮತ್ತು ಸನ್ಮಾನ ಕಾರ್ಯಕ್ರಮ, ರಾತ್ರಿ 8 ರಿಂದ ಅನ್ನದಾನ, 9 ರಿಂದ ದರ್ಬೆತ್ತಡ್ಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ರಿಂದ ಯಕ್ಷಗಾನ ಬಯಲಾಟ ಪ್ರಸಂಗ : ಶ್ರೀ ಶಬರಿಮಲೆ ಅಯ್ಯಪ್ಪ ಚರಿತ್ರೆ, ಶ್ರೀ ಕೃಷ್ಣ ಯಕ್ಷಗಾನ ಕಲಾ ಸಂಘ ಕೌಡಿಚ್ಚಾರು ಅರಿಯಡ್ಕ ಮತ್ತು ಊರ ಕಲಾವಿದರಿಂದ ಪ್ರಸ್ತುತಿಗೊಳ್ಳಲಿದೆ.
ಸಭಾ ಕಾರ್ಯಕ್ರಮ
ಸಂಜೆ 7 ರಿಂದ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ನಡೆಯಲಿದೆ. ದರ್ಬೆತ್ತಡ್ಕ ಅಯ್ಯಪ್ಪ ಭಜನಾಮಂದಿರದ ಅಧ್ಯಕ್ಷ ಬಾಲಕೃಷ್ಣ ರೈ ಸೇರ್ತಾಜೆ ಅಧ್ಯಕ್ಷತೆ ವಹಿಸಲಿದ್ದು ಭಜನಾ ಮಂದಿರದ ಗೌರವಾಧ್ಯಕ್ಷ ವಸಂತಗೌಡ ಉರ್ವ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೋಡಿಂಬಾಡಿ ರೈ ಎಸ್ಟೇಟ್ ಉದ್ಯಮಿ ಅಶೋಕ್ ರೈ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉದ್ಯಮಿ ವೆಂಕಪ್ಪ ಗೌಡ ಬೊಳ್ಳಾಡಿ, ಕುಂಬ್ರ ಕೃಪತ್ತಿನ ಸಹಕಾರಿ ಸಂಘದ ಸಿಇಒ ಭವಾನಿ ಪ್ರಗತಿಪರ ಕೃಷಿಕರಾದ ವಾಸುಪೂಜರಿ ಗುಂಡ್ಯಡ್ಕ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ನಡೆಯಲಿದೆ. ಕೃಷಿ ಕ್ಷೇತ್ರದಲ್ಲಿ ಜಯರಾಮ ಪೂಜಾರಿ ಕುಕ್ಕುತ್ತಡಿ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿಇಒ ರಾಜೀವಿ ರೈ, ಹಾಗೂ ಸಮಾಜ ಸೇವಕರಾದ ಮೋಹನ್ದಾಸ್ ರೈ ಕುಂಬ್ರವರನ್ನು ಸನ್ಮಾನಿಸಲಾಗುವುದು ಎಂದು ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರದ ಅಧ್ಯಕ್ಷರಾದ ಬಾಲಕೃಷ್ಣ ರೈ ಸೇರ್ತಾಜೆ ಹಗೂ ಸಮಿತಿಯ ಮುಖಂಡರಾದ ನಾಗೇಶ್ ಮಣಿಯಾಣಿ ಕುರಿಂಜ ಕೊಪ್ಪಳ ತಿಳಿಸಿದ್ದಾರೆ.