ಕೆಯ್ಯೂರು: 1 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ

0

ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯ : ಮಠಂದೂರು

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸುಮಾರು 1 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರುರವರು ದ. 7ರಂದು ಶಿಲಾನ್ಯಾಸ ನೆರವೇರಿಸಿ ಗುದ್ದಲಿಪೂಜೆ ಮಾಡಿದರು.

ಮುಖ್ಯವಾಗಿ ತೆಗ್ಗು-ಓಲೆಮುಂಡೋವು-ಕಲ್ಲಗುಡ್ಡೆ ರಸ್ತೆ ಕಾಂಕ್ರಿಟೀಕರಣ 10 ಲಕ್ಷ ರೂ, ಮೇರ್ಲ ನೂಜಿ ಕೋಡಂಬು ರಸ್ತೆ 10 ಲಕ್ಷ ರೂ, ಸಣಂಗಳ ಮತ್ತು ಕೂಡೇಲು ರಸ್ತೆ ತಲಾ 5 ಲಕ್ಷ ರೂ, ಮಾಡಾವು ಶಾಲಾ ಬಳಿಯಿಂದ ಸಣಂಗಳ ರಸ್ತೆ 10 ಲಕ್ಷ ರೂ, ಅಂಕತ್ತಡ್ಕ ಕೋಟಿ ಚೆನ್ನಯ ಗರಡಿ ರಸ್ತೆ ರೂ.20 ಲಕ್ಷ , ಕಾಪುತ್ತಡ್ಕ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ರೂ.10 ಲಕ್ಷ, ಕಣಿಯಾರು ಪರಿಶಿಷ್ಠ ಜಾತಿ ಕಾಲನಿ ರಸ್ತೆ ರೂ. 10 ಲಕ್ಷ, ದೇರ್ಲ ಏರಡ್ಕ ರಸ್ತೆ ರೂ.10 ಲಕ್ಷ ಮತ್ತು ಕೆಯ್ಯೂರು ನೆಟ್ಟಾಳ ರಸ್ತೆ ರೂ.10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಈ ರಸ್ತೆಗಳಿಗೆ ಶಾಸಕ ಸಂಜೀವ ಮಠಂದೂರುರವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. ಈಗಾಗಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪಂಚಾಯತ್‌ಗಳಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ಕಾಮಗಾರಿಗಳು ಒಳ್ಳೆಯ ರೀತಿಯಲ್ಲಿ ಆಗಬೇಕು ಮತ್ತು ಕಳಪೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತೀ ಮುಖ್ಯ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಉಪಾಧ್ಯಕ್ಷೆ ಸುಂದರಿ, ಅಭಿವೃದ್ಧಿ ಅಧಿಕಾರಿ ನಮಿತಾ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಆಳ್ವ ಇಳಂತಾಜೆ, ಶ್ರೀ ಕ್ಷೇತ್ರ ಕೆಯ್ಯೂರಿನ ಮಾಜಿ ಆಡಳಿತ ಮೊಕ್ತೇಸರ ಮೋಹನ್ ರೈ ಓಲೆಮುಂಡೂವು, ಕೆಯ್ಯೂರು ಗ್ರಾಪಂ ಸದಸ್ಯರುಗಳಾದ ಶರತ್ ಕುಮಾರ್ ಮಾಡಾವು, ಅಮಿತಾ ಎಚ್.ರೈ, ತಾರಾನಾಥ ಕಂಪ, ವಿಜಯ ಕುಮಾರ್ ಸಣಂಗಳ, ಮಮತಾ ಎಸ್.ರೈ, ಮೀನಾಕ್ಷಿ ವಿ.ರೈ, ಸುಭಾಷಿಣಿ ಹಾಗೂ ಎಲ್ಲಾ ಬೂತ್ ಅಧ್ಯಕ್ಷರುಗಳು, ಗಣ್ಯರು, ವಾರ್ಡ್ ಫಲಾನುಭವಿಗಳು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here