‘ದೀವಟಿಗೆ ಸಲಾಂ’ ಬದಲಿಗೆ ‘ದೀವಟಿಗೆ ನಮಸ್ಕಾರ’- ಪದ ಬಳಕೆಗೆ ಸುತ್ತೋಲೆ

0

ಪುತ್ತೂರು:ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ದೀವಟಿಗೆ ಸಲಾಂ, ಸಲಾಂ ಆರತಿ ಮತ್ತು ಸಲಾಂ ಮಂಗಳಾರತಿ ಎಂಬುದರ ಹೆಸರನ್ನು ಬದಲಾಯಿಸಿ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಪದ್ಧತಿಗಳನ್ನು ಅನುಸರಿಸುವ ಕುರಿತು ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಆದ ನಿರ್ಣಯದಂತೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಿತ ಎಲ್ಲಾ ದೇವಸ್ಥಾನಗಳಲ್ಲಿ ಸಂಸ್ಕೃತ ಭಾಷೆಯ ಪದವಾದ ‘ನಮಸ್ಕಾರ’ ಎಂಬ ಪದವನ್ನು ಮಾತ್ರ ಬಳಸಿಕೊಂಡು ದೀವಟಿಗೆ, ಆರತಿ, ಮಂಗಳಾರತಿ ಸೇವೆ ಮಾಡುವಂತೆ ಧಾರ್ಮಿಕ ಪರಿಷತ್ತು ಸುತ್ತೋಲೆ ಹೊರಡಿಸಿರುವುದಾಗಿ ತಿಳಿದು ಬಂದಿದೆ.

ರಾಜ್ಯದ ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಾಂತಃ ಕಾಲ/ಮಾಧ್ಯಾನಿಕ ಕಾಲ/ ಸಾಯಂಕಾಲಗಳಲ್ಲಿ ದೀವಟಿಗೆ/ಪಂಜು/ದೊಂದಿ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ/ಸಲಾಂ ಮಂಗಳಾರತಿ/ ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿತ್ತು. ‘ಸಲಾಂ’ ಎಂಬ ಪದವು ಸಂಸ್ಕೃತ ಭಾಷೆಯ ಪದವಾಗಿರುವುದಿಲ್ಲ. ಆದ್ದರಿಂದ ಹಿಂದೂ ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ಸಂಸ್ಕೃತ ಪದಗಳಿಂದ ಹೇಗೆ ಭಗವಂತನ ಸೇವೆಗಳನ್ನು, ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆಯೋ ಅದೇ ರೀತಿ ‘ಸಲಾಂ’ ಎಂಬ ಪದವು ಬೇರೊಂದು ಭಾಷೆಯ ಪದವಾಗಿರುವುದರಿಂದ ಇದನ್ನು ತೆಗೆದು ಸಂಸ್ಕೃತ ಭಾಷೆಯ ಪದದಿಂದ ಸೇವಾ ಕಾರ್ಯಗಳನ್ನು ನಡೆಸಲು ಸೂಚಕವಾಗುವಂತೆ ಹೆಸರುಗಳನ್ನು ಸರಿ ಪಡಿಸಲು ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆ ಕೋಡಿ ಸೂರ್ಯನಾರಾಯಣ ಭಟ್ ಅವರು ಪ್ರಸ್ತಾಪ ಮಾಡಿದ್ದರು. ಈ ಕುರಿತು ಸಭೆಯಲ್ಲಿ ವಿಮರ್ಶೆಗಳು ನಡೆಯಿತು.ಇದೇ ವಿಚಾರವಾಗಿ ಹಿರಿಯ ಆಗಮಪಂಡಿತರ ಸಲಹೆಯಂತೆ ಕೇವಲ ಸೇವಾಕಾರ್ಯಗಳಿಗೆ ಅನುಗುಣವಾಗಿ ಬಳಸುವ/ಉಪಯೋಗಿಸುವ ‘ಸಲಾಂ’ ಪದವನ್ನು ಬದಲಿಸಿಕೊಂಡು ಸಂಸ್ಕೃತ ಭಾಷೆಯ ಪದವಾದ ‘ನಮಸ್ಕಾರ’ ಎಂಬ ಪದವನ್ನು ಮಾತ್ರ ಬಳಸಿಕೊಂಡು ಸೇವೆಗಳನ್ನು ನಡೆಸುವುದು ಸೂಕ್ತವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗಾಗಿ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಮುಂದಿನ ದಿನ ‘ದೀವಟಿಗೆ ಸಲಾಂ’ ಎಂಬ ಪದದ ಬದಲಾಗಿ ‘ದೇವಟಿಗೆ ನಮಸ್ಕಾರ’ವೆಂದು, ‘ಸಲಾಂ ಆರತಿ’ ಎಂಬ ಪದದ ಬದಲಾಗಿ ‘ಆರತಿ ನಮಸ್ಕಾರ’ವೆಂದು, ‘ಸಲಾಂ ಮಂಗಳಾರತಿ’ ಎಂಬ ಪದದ ಬದಲಾಗಿ ‘ಮಂಗಳಾರತಿ ನಮಸ್ಕಾರ’ ಎಂಬುದಾಗಿ ಹೆಸರನ್ನು ಬದಲಾಯಿಸಿಕೊಂಡು ಸೇವೆಗಳನ್ನು ಯಾ ಸೇವಾ ಕಾರ್ಯಗಳನ್ನು ಮುಂದುವರಿಸುವುದು ಸೂಕ್ತವೆಂದು ಸಭೆಯಲ್ಲಿ ಆದ ನಿರ್ಣಯದಂತೆ ಎಲ್ಲಾ ದೇವಸ್ಥಾಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

‘ಸಲಾಂ’ ಶಬ್ದ ನಮ್ಮದಲ್ಲ

ಪಾಶ್ಚಿಮಾತ್ಯ ಮತ್ತು ಅರ್ಥಗೊತ್ತಿಲ್ಲದ ಪದಗಳನ್ನು ಬಳಸಲಿಕ್ಕಿಲ್ಲ ಎಂಬುದನ್ನು ಕಳೆದ ಮೀಟಿಂಗ್‌ನಲ್ಲಿ ನಿರ್ಣಯಿಸಿದಂತೆ ಮುಜರಾಯಿ ಇಲಾಖೆ ಎಂಬ ಪದವನ್ನು ಎಲ್ಲಿಯೂ ಬಳಕೆ ಮಾಡಲಿಕ್ಕಿಲ್ಲ. ಅದರ ಬದಲು ‘ಹಿಂದು ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿ’ ಎಂಬುದನ್ನು ಬಳಕೆ ಮಾಡು. ವಂತೆ ಈ ಹಿಂದೆ ಸುತ್ತೋಲೆ ಹೊರಡಿಸಲಾಗಿತ್ತು. ಇದೀಗ ದೇವಳದಲ್ಲಿ ಬಳಕೆಯಲ್ಲಿರುವ ‘ಸಲಾಂ’ ಎಂಬ ಶಬ್ದವೂ ನಮ್ಮದಲ್ಲಈ ನಿಟ್ಟಿನಲ್ಲಿ ಅದನ್ನು ದೀಪ ನಮಸ್ಕಾರ, ಸಂಧ್ಯಾ ನಮಸ್ಕಾರ, ಆಯಾ ಕಡೆಗೆ ಹೊಂದುವ ರೀತಿಯಲ್ಲಿ ಮಾಡಬಹುದು.ಅನೇಕ ಕಡೆಗಳಲ್ಲಿ ಟಿಪ್ಪು ಬಂದ ನಂತರ ಟಿಪ್ಪುವಿನ ಬಲತ್ಕಾರದಿಂದ ಗೌರವ ಕೊಡುವ ಸಲುವಾಗಿ ದೀವಟಿಗೆ ಸಲಾಂ ನಡೆಯುತ್ತಿತ್ತು.ಅದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮಧೂರು ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ, ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಇತ್ತು. ಟಿಪ್ಪುವಿನ ರಾಜಾಜ್ಞೆಗೆ ಹೆದರಿ ಅದನ್ನು ದೇವಸ್ಥಾನದಲ್ಲಿ ಮಾಡಲಾಗುತ್ತಿತ್ತು. ಯಾಕೆಂದರೆ ಇಲ್ಲಿ ಟಿಪ್ಪು ಆಕ್ರಮಣಕಾರ ಮತ್ತು ದೇಶವನ್ನು ನಾಶ ಮಾಡಿದವ. ಇವತ್ತಿನ ಕಾಲಕ್ಕೆ ಅವನ ಆeಯಂತೆ ಸಲಾಂ ಎಂಬ ಶಬ್ದ ಸರಿಯಲ್ಲ. ಹಾಗಾಗಿ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ನಿರ್ಣಯಿಸಿ ದೀವಟಿಗೆ ನಮಸ್ಕಾರ, ಆರತಿ ನಮಸ್ಕಾರ, ದೀಪ ನಮಸ್ಕಾರ ಎಂಬುದಾಗಿ ಬದಲಿಸಲಾಗಿದೆ-

ಕಶೆಕೋಡಿ ಸೂರ್ಯನಾರಾಯಣ ಭಟ್
ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್

LEAVE A REPLY

Please enter your comment!
Please enter your name here