ಡಿ.10 ಪುತ್ತೂರಿನಲ್ಲಿ ಜೇಸಿಐ ವಲಯ-15 ನೂತನ ಪದಾಧಿಕಾರಿಗಳ ಪದಗ್ರಹಣ

0

ವಲಯ-15 ರ 32ನೇ ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ

ಪುತ್ತೂರು:ಜೇಸಿಐ ಭಾರತದ ಪ್ರತಿಷ್ಠಿತ ವಲಯ-15ರ 2023ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ.10ರಂದು ಸಂಜೆ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಹಾಲ್‌ನಲ್ಲಿ ನಡೆಯಲಿದೆ ಎಂದು ಜೇಸಿಐ ಪುತ್ತೂರು ಘಟಕದ ಅಧ್ಯಕ್ಷ ಶಶಿರಾಜ್ ರೈಯವರು ಹೇಳಿದರು.


ಸುದ್ದಿ ಮೀಡಿಯಾದಲ್ಲಿ ಡಿ.9 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇಸಿಐಯ ವಲಯ-15 ಭಟ್ಕಳದಿಂದ ಸಂಪಾಜೆ ತನಕ ವ್ಯಾಪ್ತಿಯನ್ನು ಹೊಂದಿದೆ. ಇದರ 32ನೇ ಅಧ್ಯಕ್ಷರಾಗಿ ಪುತ್ತೂರು ಘಟಕದ ಪೂರ್ವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಪದಪ್ರದಾನ ಸಮಾರಂಭವನ್ನು ಸುಳ್ಯ ತಾಲೂಕಿನ ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜೇಸಿಐಯ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರು, ಜೇಸಿಐ ಸೆನೆಟರ್ ಆಗಿರುವ ಸದಾನಂದ ನಾವಡ ಆಗಮಿಸಲಿದ್ದಾರೆ. ಅಲ್ಲದೆ ಜೇಸಿಐಯ ರಾಷ್ಟ್ರೀಯ ಮಟ್ಟದ ನಾಯಕರು, ವಲಯ ಹಾಗೂ ವಿವಿಧ ಘಟಕಗಳ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ನೂತನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಮಾತನಾಡಿ, 107 ವರ್ಷಗಳ ಹಿಂದೆ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದಿಂದ ಪ್ರಾರಂಭವಾದ ಜೇಸಿಐಯು ಹಲವು ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಮಹತ್ತರವಾದ ಬಲವಾಣೆಯೊಂದಿಗೆ ಯಶಸ್ವಿಯತ್ತ ಸಾಗುತ್ತಿದೆ. ಜೇಸಿಐ ಭಾರತದ ಪ್ರತಿಷ್ಠಿತ ವಲಯವಾಗಿರುವ ವಲಯ-15 1991ರಲ್ಲಿ ಪ್ರಾರಂಭವಾಗಿದೆ. ಈ ವಲಯವು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ೩ ಕಂದಾಯ ಜಿಲ್ಲೆಯನ್ನೊಲಗೊಂಡಿದೆ. ಇದರ 32ನೇ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದೇನೆ. ವಲಯ-೧೫ರಲ್ಲಿ ಸುಮಾರು ೭೦ ಹೆಚ್ಚು ಘಕಗಳು ಕ್ರಿಯಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ವಲಯ-೧೫ರಲ್ಲಿ ಪುತ್ತೂರು ಘಟಕದ ಎಂ.ಬಿ ವಿಶ್ವನಾಥ ರೈ, ಮುರಳೀ ಶ್ಯಾಂ ಹಾಗೂ ಕೃಷ್ಣ ಮೋಹನ್ ಪಿ.ಎಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇದೀಗ 7 ವರ್ಷಗಳ ನಂತರ ಬಳಿಕ ವಲಯಾಧ್ಯಕ್ಷ ಸ್ಥಾನ ಮತ್ತೆ ಪುತ್ತೂರಿಗೆ ಲಭಿಸಿದೆ. ಈಗಾಗಲೇ 50ವರ್ಷಗಳನ್ನು ಪೂರೈಸಿರುವ ವಲಯ-೧೫ರ ಅಧೀನದಲ್ಲಿರುವ ಜೇಸಿಐ ಪುತ್ತೂರು ಘಟಕದ ಆತಿಥ್ಯದಲ್ಲಿ 2023ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದು ಪುರುಷೋತ್ತಮ ಶೆಟ್ಟಿ ಹೇಳಿದರು.

ವ್ಯಕ್ತಿತ್ವ ವಿಕಸನವೇ ಮೂಲ ಉದ್ದೇಶದಿಂದ ಪ್ರಾರಂಭವಾದ ಜೇಸಿಯಲ್ಲಿ ಯುವ ಜನಾಂಗವನ್ನು ಆಕರ್ಷಿಸಲು ಹಾಗೂ ಅವರಲ್ಲಿ ವ್ಯಕ್ತಿತ್ವದ ಬದಲಾವಣೆಯ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರಯತಿಸಲಾಗುವುದು. ಇದಕ್ಕಾಗಿ 18-40ವರ್ಷದೊಳಗಿಗ ಯುವಕನ್ನು ಅತೀ ಹೆಚ್ಚು ಆಕರ್ಷಿಸಿ, ಸಂಸ್ಥೆಗೆ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು. ಶಾಲಾ ಕಾಲೇಜಿಗಳಲ್ಲಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ವಿಧಾನ, ಮಹಿಳಾ ಸುರಕ್ಷತೆಯ ಕುರಿತು ವಿವಿಧ ವಿಭಾಗಗಳಲ್ಲಿ ತರಬೆತಿ ನೀಡುವ ಮೂಲಕ ವಲಯದ ಯೋಜನೆಗಳನ್ನು ಶೇ.100ರಷ್ಟು ಅನುಷ್ಟಾನ ಮಾಡಲಾಗುವುದು ಎಂದು ಪುರುಷೋತ್ತಮ ಶೆಟ್ಟಿ ಹೇಳಿದರು.

LEAVE A REPLY

Please enter your comment!
Please enter your name here