ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಲ್ಲಿ ಅಂಗವಿಕಲರ ದಿನಾಚರಣೆ: ಸನ್ಮಾನ, ವಿಶೇಷ ಉಪನ್ಯಾಸ

0

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ವತಿಯಿಂದ ವಿಶ್ವ ಅಂಗವಿಕಲರ ದಿನದ ಅಂಗವಾಗಿ ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಡಿ. 07ರಂದು ರೋಟರಿ ಟ್ರಸ್ಟ್ ಹಾಲಿನಲ್ಲಿ ಜರಗಿತು.

ಬಳಕೆದಾರರ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ, ಎಂಡೋ ವಿರೋಧಿ ಹೋರಾಟಗಾರ ಸಂಜೀವ ಕಬಕ ಅವರನ್ನು ಸನ್ಮಾನಿಸಲಾಯಿತು. ಅಂಗವಿಕಲರ ಕುರಿತಾದ ಕಾನೂನುಗಳ ಬಗ್ಗೆ ಶಿಕ್ಷಕ ಶಿವಪ್ಪ ರಾಥೋಡ್ ಮಾತನಾಡಿದರು. ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ಸಭಾಪತಿ ಶ್ರೀಧರ್ ಕೆ., ಜತೆ ಕಾರ್ಯದರ್ಶಿ ಶ್ರೇಯಸ್ ಮೊದಲಾದವರು‌ ಉಪಸ್ಥಿತರಿದ್ದರು.
ದಿವ್ಯಾಂಗ ಚೇತನರ ವಿಭಾಗದ ಜಿಲ್ಲಾ ಸಂಯೋಜಕ ಪಿ ವಿ ಸುಬ್ರಮಣಿ ಅತಿಥಿಗಳನ್ನು ಪರಿಚಯಿಸಿದರು. ನವೀನ್ ರೈ ಬನ್ನೂರು ವಂದಿಸಿದರು. ಶಶಿಧರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here