ಪುತ್ತುರು: ಡಿ.18 ರಂದು ನಡೆಸಲ್ಪಡುವ ಕಾಶಿ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಶ್ರೀಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜಂಗಮವಾಡಿ ಮಠ ವಾರಣಾಸಿ ಕಾಶಿ ಕನ್ನಡದ ಕಂಪು ಸರಣಿಯ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಂತಾ ಕುಂಟಿನಿ ಇವರ ಸಾಹಿತ್ಯ ಹಾಗೂ ಸಂಘಟನೆ ಕಾರ್ಯವನ್ನು ಗುರುತಿಸಿ “ಸಾಧನಶ್ರೀ” ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಸಮೃದ್ಧಿ ಫೌಂಡೇಶನ್ ಕೆಂಗೇರಿ ಕೊಮ್ಮಘಟ್ಟ ಬೆಂಗಳೂರು ಹಾಗೂ ಕಥಾ ಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಂಗಳೂರು ಹಾಗೂ ಮರುಳ ಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ಭದ್ರಾವತಿ ಕರ್ನಾಟಕ ಇವರ ಆಯೋಜನೆಯಲ್ಲಿ ಕಾರ್ಯಕ್ರಮ ನಡೆಯಲಿದೆ.