ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2023ರ ಜನವರಿ 13ರಿಂದ 17ರವರೆಗೆ ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ನಡೆಯಲಿದ್ದು, ಇದರ ರೂಪುರೇಷೆಗಳನ್ನು ಚರ್ಚಿಸಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಆಗಿರುವ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಡಾಕೂಟಕ್ಕೆ ಮಾಡಬೇಕಾದ ಅಗತ್ಯತೆಗಳ ಬಗ್ಗೆ ಹಾಗೂ ಯಶಸ್ವಿಯಾಗಿ ಕ್ರೀಡಾಕೂಟ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಬೇಕಾದ ಸಮಿತಿಗಳನ್ನು ರಚಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಪಂದ್ಯಾಟದ ಸ್ಥೂಲ ಪರಿಚಯವನ್ನು ನೀಡಿದರಲ್ಲದೆ, ಈಗಾಗಲೇ ಕ್ರೀಡಾಂಗಣದ ತಯಾರಿ ಕಾರ್ಯ ಆರಂಭವಾಗಿದೆ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿ, ವಂದಿಸಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಮುಳಿಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಸಂತೋಷ್ ಕುಮಾರ್ ಪಂರ್ದಾಜೆ, ಸುನೀಲ್ ಕುಮಾರ್ ದಡ್ಡು, ಚಂದ್ರಹಾಸ ಶೆಟ್ಟಿ, ಮುಸ್ತಾಫ ಕೆಂಪಿ, ಧನಂಜಯ ನಟ್ಟಿಬೈಲ್, ಸುರೇಶ್ ಅತ್ರೆಮಜಲು, ಕೈಲಾರ್ ರಾಜಗೋಪಾಲ ಭಟ್, ಮುಕುಂದ ಬಜತ್ತೂರು, ಡಾ. ಗೋವಿಂದ ಪ್ರಸಾದ್ ಕಜೆ, ಪ್ರಶಾಂತ್ ಡಿಕೋಸ್ತ, ಮಹೇಂದ್ರಕುಮಾರ್, ಅಬ್ದುರ್ರಹ್ಮಾನ್ ಯುನಿಕ್, ಮಹಾಲಿಂಗೇಶ್ವರ ಭಟ್, ಸುದರ್ಶನ್, ಅಬ್ದುರ್ರಹ್ಮಾನ್ ಕೆ., ವಿದ್ಯಾಧರ ಜೈನ್ ಮತ್ತಿತರರು ಉಪಸ್ಥಿತರಿದ್ದರು.