ನ.10: ಪುತ್ತೂರು ರೋಟರಿ ಕ್ಲಬ್‌ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್‌ ಪುತ್ತೂರು ಇದರ ಆಶ್ರಯದಲ್ಲಿ, ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಡೆಂಟಲ್‌ ಕ್ಲಿನಿಕ್‌ ಆಯೋಜನೆಯಲ್ಲಿ, ಕೆವಿಜಿ ದಂತ ವೈದ್ಯಕೀಯ ಕಾಲೇಜು ಸುಳ್ಯ ಇದರ ಸಹಯೋಗದೊಂದಿಗೆ 3ನೇ ಉಚಿತ ದಂತ ಚಿಕಿತ್ಸಾ ಶಿಬಿರವು ನ.10ರಂದು ನಡೆಯಲಿದೆ.

ಬೆಳಿಗ್ಗೆ 9ರಿಂದ ಅಪರಾಹ್ನ 3.30ರವರೆಗೆ ನಗರದ ಮಹಾವೀರ ವೆಂಚರ್ಸ್‌ ಕಟ್ಟಡದಲ್ಲಿರುವ ಪುತ್ತೂರು ಪಾಲಿಕ್ಲಿನಿಕ್‌ ನಲ್ಲಿ ಈ ಶಿಬಿರ ನಡೆಯಲಿದೆ. ಶಿಬಿರದಲ್ಲಿ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದು, ಶಿಬಿರಾರ್ಥಿಗಳಿಗೆ ಉಚಿತ ದಂತ ವೈದ್ಯಕೀಯ ಸೇವೆ ನೀಡಲಿದ್ದಾರೆ. ಕಳೆದ ಅ.13ರಂದು ನಡೆದ 2ನೇ ಮಾಸಿಕ ಶಿಬಿರದಲ್ಲಿ ಸುಮಾರು 40ರಷ್ಟು ಮಂದಿ ಶಿಬಿರದ ಸೌಲಭ್ಯ ಪಡೆದಿದ್ದು, ಮುಂದಿನ ಕೆಲವು ತಿಂಗಳವರೆಗೆ ಈ ಶಿಬಿರ ಮುಂದುವರಿಯಲಿದ್ದು ಪ್ರತಿ ತಿಂಗಳ 2ನೇ ಸೋಮವಾರದಂದು ಶಿಬಿರ ನಡೆಯಲಿದೆ. ವಾರದ ಇತರ ದಿನಗಳಲ್ಲಿಯೂ ವಿಶೇಷ ದಂತ ಚಿಕಿತ್ಸಾ ಸೌಲಭ್ಯ ಇಲ್ಲಿ ಲಭ್ಯವಿದ್ದು, ಚಿಕಿತ್ಸೆ ಪಡೆಯಲು ಇಚ್ಚಿಸುವವರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ರೋಟರಿ ಕ್ಲಬ್‌ ಪುತ್ತೂರು ಇದರ ಅಧ್ಯಕ್ಷರೂ, ದಂತ ವೈದ್ಯರೂ ಆಗಿರುವ ಡಾ. ಶ್ರೀಪ್ರಕಾಶ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here