ವ್ಯಾಜ್ಯವೊಂದರಲ್ಲಿ ತಾನು ಹೇಳಿದವರ ಪರ ತೀರ್ಪು ನೀಡಲಿಲ್ಲವೆಂದು ಭೂನ್ಯಾಯ ಮಂಡಳಿ ಸದಸ್ಯರ ನೇಮಕ ರದ್ದುಗೊಳಿಸಿದ ಶಾಸಕರು

0

ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಆಲಿ ಆರೋಪ

ಪುತ್ತೂರು: ಜಾಗದ ವ್ಯಾಜ್ಯವೊಂದಕ್ಕೆ ಸಂಬಂಧಿಸಿ ತಾನು ಹೇಳಿದವರ ಪರ ತೀರ್ಪು ನೀಡಿಲ್ಲ ಎಂಬ ಕಾರಣಕ್ಕೆ ಶಾಸಕ ಸಂಜೀವ ಮಠಂದೂರು ಅವರು, 2020 ರ ಫೆ.12 ಕ್ಕೆ ಆಗಿರುವ ಭೂ ನ್ಯಾಯ ಮಂಡಳಿಯ ಸದಸ್ಯರ ನೇಮಕದ ಆದೇಶವನ್ನು ರದ್ದುಪಡಿಸಿ ಹೊಸದಾಗಿ ಭೂ ನ್ಯಾಯ ಮಂಡಳಿ ರಚನೆ ಮಾಡಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿಯವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.


ಈ ಹಿಂದೆ ಭೂ ನ್ಯಾಯ ಮಂಡಳಿಯಲ್ಲಿ ಬಿಜೆಪಿಯ ಪ್ರಮುಖರಾದ ನ್ಯಾಯವಾದಿ ಕೃಪಾಶಂಕರ್, ಗುರುವ ಮರಿಕೆ, ಜಯಾನಂದ, ನಿವೃತ್ತ ಕಂದಾಯ ಅಧಿಕಾರಿ ಮೋನಪ್ಪ ಪುರುಷ ಸದಸ್ಯರಾಗಿದ್ದರು.

ಒಕ್ಕಲು ಮಸೂದೆಗೆ ಸಂಬಂಧಿಸಿ ಪೆರ್ನು ಗೌಡ ಅವರ ಸಹೋದರರು ಹಾಗೂ ಶಕುಂತಲಾ ರೈ ಎಂಬವರ ನಡುವೆ ವ್ಯಾಜ್ಯ ನಡೆಯುತ್ತಿತ್ತು.ಈ ಕುರಿತು ಭೂ ನ್ಯಾಯ ಮಂಡಳಿಯಲ್ಲಿ ಮೂರು ಬಾರಿ ಶಕುಂತಲಾ ರೈ ಅವರ ಪರವಾಗಿ ತೀರ್ಪು ಬಂದಿತ್ತು.ಈ ಕುರಿತು ಪೆರ್ನು ಗೌಡ ಅವರ ಪರವಾಗಿ ತೀರ್ಪು ನೀಡುವಂತೆ ಭೂ ನ್ಯಾಯ ಮಂಡಳಿ ಸದಸ್ಯರಿಗೆ ಮತ್ತು ಸಹಾಯಕ ಕಮಿಷನರ್‌ಗೆ ಶಾಸಕರು ಒತ್ತಡ ಹಾಕಿದ್ದರು.ಆದರೆ ನ.9 ರಂದು ಕೂಡಾ ತೀರ್ಪು ಶಕುಂತಲಾ ರೈ ಅವರ ಪರವಾಗಿ ಬಂದಿದ್ದರಿಂದ ಶಾಸಕರು ಭೂ ನ್ಯಾಯ ಮಂಡಳಿಯ ಹಿಂದಿನ ಸಮಿತಿಯನ್ನೇ ತೀರ್ಪು ಬಂದ 7 ದಿನಗಳೊಳಗೆ ರದ್ದು ಪಡಿಸಿ ಹೊಸ ಸಮಿತಿ ರಚನೆ ಮಾಡಿ ಆದೇಶ ಹೊರಡಿಸುವ ಮೂಲಕ ತಾನು ಹೇಳಿದ ಹಾಗೆ ಕೇಳಬೇಕು.ಇಲ್ಲವಾದರೆ ಅವರಿಗೆ ಪಾಠ ಕಳಿಸುವ ಸಂದೇಶ ನೀಡಿದ್ದಾರೆ ಎಂದು ಮಹಮ್ಮದ್ ಆಲಿ ಹೇಳಿದರು.ಈ ಘಟನೆ ಬಳಿಕ ಶಕುಂತಲಾ ರೈ ಅವರಿಗೆ ಹಲ್ಲೆ ನಡೆಸಲಾಗಿದೆ.ಈ ಎಲ್ಲಾ ಬೆಳವಣಿಗೆ ನೋಡಿದಾಗ ಶಾಸಕರು ಪುತ್ತೂರಿನಲ್ಲಿ ಗೂಂಡಾಗಿರಿಗೆ ಕುಮ್ಮಕ್ಕು ನೀಡುವಂತೆ ಕಾಣುತ್ತಿದೆ.ಬಿಹಾರ ಮತ್ತು ಯು.ಪಿ ಮಾದರಿ ಕಾರ್ಯಕ್ರಮವನ್ನು ಶಾಸಕರು ಇಲ್ಲಿಯೂ ಹಾಕಿಕೊಳ್ಳುತ್ತಿದ್ದಾರೆ ಎನ್ನುವ ಸಂಶಯ ಮೂಡಿದೆ ಎಂದು ಆಲಿ ಹೇಳಿದರು.

ಸಹಾಯಕ ಕಮಿಷನರ್‌ಗೂ ವರ್ಗಾವಣೆ ಸಾಧ್ಯತೆ:
ಹಲವಾರು ವಿಚಾರದಲ್ಲಿ ಭೂ ನ್ಯಾಯ ಮಂಡಳಿ ಸಾಂವಿಧಾನಿಕ ಸಮಿತಿ.ಅದಕ್ಕೆ ಅದರದ್ದೆಆಧಿಕಾರ ಇದೆ.ಅದನ್ನು ಉಲ್ಲಂಸಿ ತೀರ್ಪು ಕೊಡುಬೇಕೆಂದು ಶಾಸಕರು ಒತ್ತಡ ಹೇರುವುದು ದೊಡ್ಡ ಅಪರಾಧ.ತೀರ್ಪು ಕೊಟ್ಟ ಭೂನ್ಯಾಯ ಮಂಡಳಿ ಅಧ್ಯಕ್ಷ ಸಹಾಯಕ ಕಮಿಷನರ್ ಅವರಿಗೂ ಒತ್ತಡ ಹಾಕಲಾಗಿತ್ತು.ಆದರೆ ಅವರು ಒತ್ತಡಕ್ಕೆ ಮಣಿಯದೆ ನ್ಯಾಯಯುತ ತೀರ್ಪು ನೀಡಿದ್ದಾರೆ.ಹಾಗಾಗಿ ಸಮಿತಿ ರದ್ದು ಪಡಿಸಿದಂತೆ ಮುಂದೆ ಸಹಾಯಕ ಕಮಿಷನರ್ ಅವರನ್ನು ಶಾಸಕರು ವರ್ಗಾವಣೆ ಮಾಡಿಸುವ ಸಾಧ್ಯತೆಯೂ ಇದೆ ಎಂದು ಮಹಮ್ಮದ್ ಆಲಿ ಹೇಳಿದರು.

ಒತ್ತಡ ಹಾಕಿದ್ದರು:
ಭೂ ನ್ಯಾಯ ಮಂಡಳಿಯ ಈ ಹಿಂದಿನ ಸದಸ್ಯರು ರಾಜೀನಾಮೆ ಕೊಡದಿದ್ದರೂ ಹೊಸದಾಗಿ ಸಮಿತಿ ರಚನೆ ಆಗಿದೆ.ಅದಕ್ಕೆ ಕಾರಣ ಶಾಸಕರು ಕೊಡಬೇಕು.ಈ ಕುರಿತು ಭೂ ನ್ಯಾಯ ಮಂಡಳಿಯ ಹಿಂದಿನ ಸದಸ್ಯರಾಗಿದ್ದ ಕೃಪಾಶಂಕರ್ ಅವರನ್ನು ನಾವು ಮಾತನಾಡಿಸಿದ್ದೆವೆ.ಶಾಸಕರು ಸತತವಾಗಿ ನನಗೆ ಒತ್ತಡ ಹಾಕಿದ್ದರು.ಆದರೆ ನಾನೊಬ್ಬ ವಕೀಲನಾಗಿ ಕಾನೂನಿನನ್ವಯ ತೀರ್ಪು ನೀಡಿದ್ದೆನೆ. ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲಸ ನಾನು ಮಾಡಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಹೆಚ್.ಮಹಮ್ಮದ್ ಆಲಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ದಾಮೋದರ್ ಭಂಡಾರ್ಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here