ನೆಲ್ಲಿಕಟ್ಟೆ ಶ್ರೀರಾಮಕೃಷ್ಣ ಸೇವಾ ಸಮಾಜದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ 15ನೇ ಧಾರ್ಮಿಕ ಶಿಕ್ಷಣ ಕೇಂದ್ರಕ್ಕೆ ಚಾಲನೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಠ್ಯ ವಸ್ತು ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ತರಗತಿಯ 15ನೇ ಕೇಂದ್ರವು ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸೇವಾ ಸಮಾಜದಲ್ಲಿ ಡಿ.16ಕ್ಕೆ ಆರಂಭಗೊಂಡಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಡಾ.ಸುಧಾ ಎಸ್ ರಾವ್ ಅವರು ಧಾರ್ಮಿಕ ಶಿಕ್ಷಣ ತರಗತಿ ಕೇಂದ್ರವನ್ನು ಉದ್ಘಾಟಿಸಿ, ಮಕ್ಕಳಿಗೆ ನೀತಿಕಥೆ ಹೇಳುವ ಮೂಲಕ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿ ಹಾಗೂ ಕೇಂದ್ರದ ನಿರ್ವಾಹಕಿ ವತ್ಸಲ ರಾಜ್ಞಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೇವಾ ಮಂದಿರದ ಕಾರ್ಯದರ್ಶಿ ಗುಣಪಾಲ ಜೈನ್ ವಂದಿಸಿದರು. ಕಾರ್ಯಕ್ರಮವನ್ನು ಧಾರ್ಮಿಕ ಶಿಕ್ಷಣ ಯೋಜನೆಯ ಸಂಪನ್ಮೂಲೆ ಶಂಕರಿ ಶರ್ಮ ನಿರ್ವಹಿಸಿದರು. ಮಕ್ಕಳಿಗೆ ಓಂಕಾರ, ಬೆಳಗಿನ ಶ್ಲೋಕಗಳನ್ನು ಹೇಳಿಕೊಟ್ಟು ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ, ಸಂಯೋಜಕ ಎಂ ಸತೀಶ ಭಟ್ ಹಾಗೂ ಸೇವಾ ಮಂದಿರದ ಶಿಕ್ಷಕಿಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here