ಪುತ್ತೂರು: ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ದ.11 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಾಳೆವಾರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಹೆಣ್ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ಯುವಕರಿಗೆ, ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಲಿಂಬೆ ಚಮಚ ಓಟ, ಬಲೂನ್ ಹೊಡೆಯುವುದು, ಸ್ಟ್ರಾದ ಸಹಾಯದಿಂದ ಒಂದು ಗ್ಲಾಸಿನಿಂದ ಮತ್ತೊಂದು ಗ್ಲಾಸಿಗೆ ನೀರನ್ನು ಹಾಕುವುದು, ಡೊಂಕ ಓಟ, ಮ್ಯೂಸಿಕಲ್ ಚೇರ್, ಹ್ಯಾಟ್ ಹಾಗೂ ಬಾಲ್ ಪಾಸ್ ಮಾಡುವುದು, 50ಮೀ ಓಟ, ಸಿಂಗಲ್ ವಿಕೆಟ್ ತ್ರೋ, ಮದುವೆ ಜೋಡಿಗಳಿಗೆ ಬಲೂನ್ ಹೊಡೆಯುವ ಸ್ಪರ್ಧೆ ಮುಂತಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಚರ್ಚ್ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರು ಸ್ಪರ್ಧಾಕೂಟಕ್ಕೆ ಆಶೀರ್ವಚಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ, ವಿವಿಧ ವಾಳೆಯ ಗುರಿಕಾರರು, ಚರ್ಚ್ ಪಾಲನಾ ಸಮಿತಿ ಉಪಸ್ಥಿತರಿದ್ದರು.