ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ :ಸಾರಸ್ವತ ಕ್ರೀಡಾಕೂಟ ಉದ್ಘಾಟನೆ

0

“ಸೋಲು ಗೆಲುವುಗಳೆರಡನ್ನೂ ಸಮನಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ “-ಶ್ರೀಶ ನಾಯಕ್ ಪೆರ್ಣಂಕಿಲ

ಪುತ್ತೂರು : ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವದ ಸವಿನೆನಪಿಗಾಗಿ ಶತಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಎರಡು ದಿನಗಳ ಸಾರಸ್ವತ ಕ್ರೀಡಾಕೂಟ ವಿವೇಕಾನಂದ ವಿದ್ಯಾವರ್ಧಕ ಸಂಘ ದ ಕ್ರೀಡಾಂಗಣದಲ್ಲಿ ನಡೆಯಿತು.

ಮುಖ್ಯ ಅಭ್ಯಾಗತರಾದ ಆರ್ ಎಸ್ ಬಿ ಸಂಘ ಮಣಿಪಾಲದ ಅಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ ಕ್ರೀಡಾಕೂಟ ಉದ್ಘಾಟಿಸಿ ಸೋಲು ಗೆಲುವುಗಳೆರಡನ್ನೂ ಸಮನಾಗಿ ಸ್ವೀಕರಿಸಿ ,ಕ್ರೀಡಾಸ್ಪೂರ್ತಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದು ಶುಭ ಹಾರೈಸಿದರು.

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಸ್. ಆರ್ ಸತೀಶ್ಚಂದ್ರ ಅಧ್ಯಕ್ಷ ತೆ ವಹಿಸಿದ್ದರು.

ವೇದಿಕೆಯಲ್ಲಿ ಆರ್ .ಎಸ್ .ಬಿ ಸಂಘ ಬೆಂಗಳೂರಿನ‌ ಅಧ್ಯಕ್ಷ ನಾಗೇಂದ್ರ ಕಾಮತ್ ,’ಬಾಯೋ ‘ ಕೊಂಕಣಿ ಚಿತ್ರದ ನಿರ್ದೇಶಕ ರಮಾನಂದ ನಾಯಕ್ ಜೋಡುರಸ್ತೆ ,ಪುದುವಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದ ಅಧ್ಯಕ್ಷ ರಾಮಕೃಷ್ಣ ಬೋರ್ಕರ್ ಬೇಟೋಳಿ , ,ಮಾಜಿ ಜಿಲ್ಲಾ‌ಪಂಚಾಯತ್ ಸದಸ್ಯೆ  ಸರಸ್ವತಿ ಕಾಮತ್, ಗ್ರೇಸ್ ಅಕಾಡೆಮಿಯ ಮುಖ್ಯಸ್ಥರಾದ ಸುಬ್ರಮಣ್ಯ ಕುಲೇದು ..ಬಾಯೋ ಚಿತ್ರ ದ ನಿರ್ದೇಶಕ ರಮಾನಂದ ನಾಯಕ್ ಸೇರಿದಂತೆ “ಬಾಯೋ” ಕೊಂಕಣಿ ಚಿತ್ರತಂಡದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಸಮಾರೋಪ :
ಸಂಜೆ‌ ನಡೆದ ಸಮಾರೋಪ ಸಮಾರಂಭದಲ್ಲಿ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಎಂ ಪುಂಡಿಕಾಯಿ ಅಧ್ಯಕ್ಷತೆ ವಹಿಸಿದ್ದರು .ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ , ಎ ,ಸಂಘದ ಕಾರ್ಯದರ್ಶಿ ಮೂಲಚಂದ್ರ ಕಾಂಚನ ,ವೀನಸ್ ಎಂಟರ್ ಪ್ರೈಸಸ್ ದರ್ಬೆಯ ಮಾಲಕ ಪ್ರಭಾಕರ ನಾಯಕ್ ,ಭಾಲಾವಲೀಕಾರ್ ಯುವ ಸಂಘ ವಿರಾಜಪೇಟೆ ಇದರ ಅಧ್ಯಕ್ಷ ರಾದ ಮದುಸೂದನ್ ಬಜತ್ತನೆ ,ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೊಗೇರಿನ ಮೊಕ್ತೇಸರ ವಿಷ್ಣು ಪ್ರಭು ಕರಿಂಬಿಲ ಸೇರಿದಂತೆ ಸರಸ್ವತಿ ಮಹಿಳಾ ಮಂಡಳಿಯ ಸದಸ್ಯೆಯರು ಉಪಸ್ಥಿತರಿದ್ದರು

ಎರಡು ದಿನ ನಡೆದ ಕ್ರೀಡಾಕೂಟದಲ್ಲಿ ಪ್ರತೀ ವಿಭಾಗದಲ್ಲೂ ಸುಮಾರು 25ಕ್ಕೂ ಅಧಿಕ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು.
ಕ್ರಿಕೆಟ್ ಪಂದ್ಯಾಟದಲ್ಲಿ ಆರ್ .ಎಸ್.ಬಿ‌ ಮೊಗೇರು ವಿನ್ನರ್ಸ್ ,ಮಹಿಳಾ ಹಗ್ಗಜಗ್ಗಾಟದಲ್ಲಿ ಮೋಂತಿಮಾರು ತಂಡ ವಿನ್ನರ್ಸ್
ಪುರುಷರ ಹಗ್ಗಜಗ್ಗಾಟದಲ್ಲಿ ಸುಳ್ಯ ತಂಡ ವಿನ್ನರ್ಸ್ ಆಗಿ ಹೊರಹೊಮ್ಮಿದವು .

LEAVE A REPLY

Please enter your comment!
Please enter your name here