ಕಾಣಿಯೂರು: ಕಡಬ ತಾಲೂಕು ಬೆಳಂದೂರು ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿಯ ಸಿಬ್ಬಂದಿಗಳು ಡಿ 19 ರಿಂದ ಅನಿರ್ದಿಷ್ಟಾವಧಿ ಹಕ್ಕೊತ್ತಾಯ ಆಂದೋಲನ ಹಮ್ಮಿಕೊಂಡಿದ್ದು ಸಾರ್ವಜನಿಕರಿಗೆ ಯಾವುದೇ ಸೇವೆಗಳು ಲಭ್ಯವಾಗದೆ ತೊಂದರೆಯಾಗುತ್ತಿದೆ.
ಸಿಬ್ಬಂದಿಗಳ ಬೇಡಿಕೆ ಈಡೇರಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ,ಪಂಚಾಯತ್ ಸದಸ್ಯ ಜಯಂತ ಅಬೀರ,ಪಂಚಾಯತ್ ಮಾಜಿ ಅಧ್ಯಕ್ಷ ನಝೀರ್ ದೇವಸ್ಯ, ಪಲ್ಲತ್ತಾರು ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ,ಕಾರ್ಯದರ್ಶಿ ನವಾಝ್ ಸಖಾಫಿ, ಪಲ್ಲತಾರು ಎಸ್ ಡಿ ಎಂ ಸಿ ಅಧ್ಯಕ್ಷ ಉಮರ್ ಶಾಪಿ,ಅಬೂಬಕ್ಕರ್ ಫಾಳಿಲಿ, ಹಸನಬ್ಬ ಬನಾರಿ,ಉಸ್ಮಾನ್ ನಡುಗುಡ್ಡೆ,ಶಾಫಿ ಬೆಳಂದೂರು,ನಾಸಿರ್ ಬಣಾರಿ ಅನ್ಸಿಫ್ ನಡಗುಡ್ಡೆ,ಸಫ್ವಾನ್ ಬೆಳಂದೂರು,ಕಲೀಲ್ ಬೆಳಂದೂರು,ಗ್ರಂಥಾಲಯ ಮೇಲ್ವಿಚಾರಕಿ ವಿಮಲಾ,ವಿಕಲಚೇತನ ಪುನರ್ವಸತಿ ಕಾರ್ಯಕರ್ತೆ ಪ್ರಶಾಂತಿ ಮೊದಲಾದವರು ಉಪಸ್ಥಿತರಿದ್ದರು.