ತಾಲೂಕು ಮಹಿಳಾ ಬಂಟರ ಸಂಘದಿಂದ ಜಯಂತಿ ಶೆಟ್ಟಿರವರಿಗೆ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂ, ಹಸ್ತಾಂತರ

0

ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ವತಿಯಿಂದ ದ.20 ರಂದು ಪುತ್ತೂರು ಬಂಟರ ಭವನದಲ್ಲಿ ಮಾಸಿಕ ಸಭೆ ಜರಗಿತು. 

ಈ ಸಂದರ್ಭದಲ್ಲಿ ಕುರಿಯ ಬಳ್ಳಮಜಲು ಜಯಂತಿ ಶೆಟ್ಟಿರವರಿಗೆ ಮನೆ ನಿರ್ಮಾಣಕ್ಕೆ ಸಂಘದ ವತಿಯಿಂದ ಒಂದು ಲಕ್ಷ ರೂ, ಹಣವನ್ನು ಹಸ್ತಾಂತರ ಮಾಡಲಾಯಿತು.

ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಮಾತಾಡಿ ಕುರಿಯ ಗ್ರಾಮದ ಬಳ್ಳಮಜಲು ಜಯಂತಿ ಶೆಟ್ಟಿರವರು ಮನೆ ಇಲ್ಲದೆ ಕಷ್ಟಪಡುತ್ತಿದ್ದು ಇವರಿಗೆ ಹೊಸ ಮನೆಯೊಂದನ್ನು ಕಟ್ಟಿಕೊಡಲು ನಾವು ಆಸರೆಯಾಗುತ್ತೇವೆ ಎಂದು ಭರವಸೆ ನೀಡಿ, ಪುತ್ತೂರು ಮಹಿಳಾ ಬಂಟರ ಸಂಘದ ಸತತ ಪ್ರಯತ್ನದಿಂದ ಒಂದು ಲಕ್ಷ ರೂ, ಸಂಗ್ರಹವಾಗಿದ್ದು ಅದನ್ನು ಫಲಾನುಭವಿ ಜಯಂತಿಯವರಿಗೆ ಹಸ್ತಾಂತರಿಸಲು ಕಾರಣಕರ್ತರಾದ ಅಧ್ಯಕ್ಷೆ ಸಬಿತಾ ಭಂಡಾರಿ ಹಾಗೂ ಮಹಿಳಾ ಬಂಟರ ಸಂಘದ ಸರ್ವ ಸದಸ್ಯರು ಹಾಗೂ ಬಂಟ ಭಾಂಧವರ ಸಹೃದಯಿ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ. ಇಂಥ ಉತ್ತಮ ಕಾರ್ಯ ಮುಂದೆಯೂ ಸಂಘದಿಂದ ನಡೆಯಲಿ ಎಂದು ಆಶಿಸಿದರು.

ಬಂಟರ ಸಂಘದ ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತುರವರು ಮಾತನಾಡಿ ಮಹಿಳಾ ಬಂಟರ ಸಂಘದ ವತಿಯಿಂದ ಈ ರೀತಿಯ ಸಹಾಯ ಜಯಂತಿ ಶೆಟ್ಟಿರವರ ಕುಟುಂಬಕ್ಕೆ ದೊರೆತಿರುವುದು ಶ್ಲಾಘನೀಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಸ್ವಾಗತಿಸಿ, ಎಲ್ಲರ ಸಹಕಾರಕ್ಕೆ ಕೃತಜ್ಞತೆ, ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಾಣಿ ಎಸ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾಬಲ ರೈ ವಳತಡ್ಕ ಹಾಗೂ ಮಹಿಳಾ ಬಂಟರ ಸಂಘದ ಪದಾಧಿಕಾರಿಗಳಾದ ಅಮಿತ ಎಸ್ ಶೆಟ್ಟಿ, ಸ್ವರ್ಣ ಜೆ ರೈ, ಗೀತಾ ಮೋಹನ್ ರೈ, ಶೀಲಾವತಿ ರೈ, ಕಿರಣ ರೈ, ಅನುಶ್ರೀ ಬಿ ಶೆಟ್ಟಿ, ಕುಸುಮ ಪಿ.ಶೆಟ್ಟಿ, ಸುಜಾತ ಎಸ್ ರೈ, ಗಾಯತ್ರಿ ಜಯರಾಂ, ನಳಿನಿ ಎ ಶೆಟ್ಟಿ, ಭವ್ಯ ಎ ರೈ , ರೂಪ ರೇಖಾ ಆಳ್ವ, ಅಶ್ವಿನಿ ಎಸ್ ರೈ, ಉಪಸ್ಥಿತರಿದ್ದರು.
ಬಂಟರ ಭವನದ ಸಿಬ್ಬಂದಿಗಳಾದ ರವಿಚಂದ್ರ ರೈ ಮತ್ತು ಭಾಸ್ಕರ್ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here