ಪುತ್ತೂರು: ಬಹುತೇಕ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ನೆ.ಮುಡ್ನೂರು ಗ್ರಾ.ಪಂ ಗ್ರಾಮ ಸಭೆಯನ್ನು ಮುಂದೂಡಲಾಗಿದೆ. ಡಿ.21 ರಂದು ಗ್ರಾಮ ಸಭೆ ಎಂದು ದಿನ ನಿಗದಿಪಡಿಸಲಾಗಿತ್ತು. ಅದರಂತೆ ಕೆಲವು ಇಲಾಖೆಯ ಅಧಿಕಾರಿಗಳು ಆಗಮಿಸಿದ್ದು ಅನೇಕ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಗ್ರಾಮ ಸಭೆ ನಡೆಸುವುದಕ್ಕೆ ತೊಡಕುಂಟಾಗಿತ್ತು.
ಗ್ರಾಮಸ್ಥರು ಮತ್ತು ಗ್ರಾ.ಪಂ ಆಡಳಿತ, ಅಧಿಕಾರಿಗಳು ಒಮ್ಮತದ ತೀರ್ಮಾನ ತೆಗೆದುಕೊಂಡು ಗ್ರಾಮ ಸಭೆಯನ್ನು ಮುಂದೂಡುವ ತೀರ್ಮಾನ ತೆಗೆದುಕೊಂಡರು. ಗ್ರಾಮ ಸಭೆಯನ್ನು ಮುಂದೂಡುತ್ತಿದ್ದು ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಹೇಳಿದರು. ಗ್ರಾ.ಪಂ ಉಪಾಧ್ಯಕ್ಷೆ ಫೌಝಿಯಾ, ಪಿಡಿಒ ಸಂದೇಶ್, ಕಾರ್ಯದರ್ಶಿ ಶಾರದಾ ಹಾಗೂ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳ ಗೈರು ಹಾಜರಿಗೆ ಆಕ್ಷೇಪ:
ಅಧಿಕಾರಿಗಳ ಗೈರು ಹಾಜರಿಯಿಂದ ಹಲವು ಬಾರಿ ಗ್ರಾಮ ಸಭೆ ಮುಂದೂಡುವ ಪ್ರಮೇಯ ಎದುರಾಗಿದ್ದು ಇದು ಗ್ರಾಮಸ್ಥರಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಪದೇ, ಪದೇ ಈ ರೀತಿ ಆಗುತ್ತಿರುವುದು ನಿಲ್ಲಬೇಕು, ಈ ರೀತಿ ಮುಂದಕ್ಕೆ ಒಮ್ಮೆಯೂ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ನೆ.ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಖಾದರ್ ಕರ್ನೂರು ಒತ್ತಾಯಿಸಿದರು.