ವೀರಮಂಗಲ ಶಾಲೆಗೆ ದಾನಿಗಳಿಂದ 2, ಲಕ್ಷ ವೆಚ್ಚದ ವಿವಿಧ ಕೊಡುಗೆಗಳು

0

ಪುತ್ತೂರು: ತಾಲೂಕಿನ ಗ್ರಾಮೀಣ ಪ್ರದೇಶವಾದ ವೀರಮಂಗಲ ಶಾಲೆಗೆ ಮಾನ್ಯ ಶಾಸಕರು ಸ್ಮಾರ್ಟ್ ಕ್ಲಾಸನ್ನು ಒದಗಿಸಿದ್ದು 800 ಚದರ ಅಡಿ ತರಗತಿ ಕೋಣೆಗೆ ರೈಲ್ವೆ ನಿವೃತ್ತ ಇಂಜಿನಿಯರ್ ಗೋಪ‍ಕುಮಾರ್ ಆನಾಜೆರವರು 50 ಸಾವಿರ ವೆಚ್ಚದ ಟೈಲ್ಸ್ ಮತ್ತು ಇತರೆ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.

ವೀರಮಂಗಲ ಜುಮ್ಮಾ ಮಸೀದಿಯ ಪದಾಧಿಕಾರಿಗಳು ಸುಮಾರು 25000 ವೆಚ್ಚದ 400 ಚದರ ಅಡಿ ಇರುವ ನಲಿಕಲಿ ತರಗತಿಯ ನೆಲಕ್ಕೆ ಟೈಲ್ಸ್ ಅಳವಡಿಸಿದರು.

ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, 400 ಚದರ ಅಡಿ ಇರುವ ನಲಿಕಲಿ ತರಗತಿ ಕೋಣೆಗೆ ಸುಮಾರು 25000 ವೆಚ್ಚ ಮಾಡಿ ನೆಲಕ್ಕೆ ಟೈಲ್ಸ್ ಅಳವಡಿಸಿದರು.

ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಪುತ್ತೂರು ರೋಟರಿ ಕ್ಲಬ್ ನವರು ಸಾಮಗ್ರಿ ಪರಿಕರಗಳನ್ನು ಉಚಿತವಾಗಿ ಒದಗಿಸಿದರು.
ಹಿರಿಯ ವಿದ್ಯಾರ್ಥಿ ಸಂಘ ವೀರಮಂಗಲ ಇವರು ಶಾಲೆಗೆ ಬಯಲು ರಂಗಮಂದಿರದ ಕೊಡುಗೆ ನೀಡಿದರು ಎಂದು ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here