ವೀರಮಂಗಲ ಶಾಲೆಯ ಮಕ್ಕಳ ಕ್ರೀಡಾಕೂಟ

0

ಪುತ್ತೂರು: ಕ್ರೀಡೆಯು ಮನಸ್ಸುಗಳನ್ನು ಒಂದು ಮಾಡುವ ಕೆಲಸವನ್ನು ಮಾಡುತ್ತದೆ ಹಾಗೂ ಚುರುಕನ್ನು ಉತ್ತೇಜಿಸಿ ಕಲಿಕೆಗೆ ಸಹಕರಿಸುತ್ತದೆ ಎಂದು ಪುತ್ತೂರು ನಗರ ಪೋಲಿಸ್ ಠಾಣೆಯ ಉಪನಿರೀಕ್ಷಕ  ಶ್ರೀಕಾಂತ ರಾಥೋಡ್ ತಿಳಿಸಿದರು.

ಅವರು ವೀರಮಂಗಲ ಶಾಲೆಯ ಮಕ್ಕಳ ಕ್ರೀಡಾಕೂಟದ ಮೆರಗಿನ ಪಥಸಂಚಲನದ ಗೌರವ ವಂದನೆಯನ್ನು ಸ್ವೀಕಾರ ಮಾಡಿ ಮಾತನಾಡಿದರು. ವೀರಮಂಗಲ ಶಾಲೆಯ ಮಕ್ಕಳ ಶಿಸ್ತು ಮತ್ತು ಕ್ರೀಡಾ ಸ್ಪೂರ್ತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಯುತರು ಕುಮಾರಧಾರ ನದಿಯ ತಟದಲ್ಲಿ ಈ ಊರಿದೆ,ಈ ಊರಿನಲ್ಲಿ ಯಾವುದೇ ಸಂಪತ್ತಿಗೆ ಕೊರತೆ ಇಲ್ಲ ಎಂದು ಈ ಶಾಲೆಯನ್ನು ನೋಡುವಾಗಲೆ ಅರಿವಿಗೆ ಬರುತ್ತದೆ, ಯಾವುದೇ ಊರುಗಳು ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ಊರವರ ಸಹಕಾರ ಬೇಕಾಗುತ್ತದೆ ಇದೊಂದು ಸರ್ಕಾರಿ ಶಾಲೆಯನ್ನು ಹೇಳಲು ಅಸಾಧ್ಯವಾಗುತ್ತಿದೆ, ಇಂತಹ ಉತ್ತಮ ಪರಿಸರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗ್ಯವಂತರು,ಮಾತ್ರವಲ್ಲದೆ ಉತ್ತಮ ಶಿಕ್ಷಕ ವೃಂದ ಅತ್ಯುತ್ತಮ ಆಡಳಿತ ವೃಂದಕ್ಜೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ. ಕಚೇರಿಯ ಶಿಕ್ಷಣ ಸಂಯೋಜಕಿ ಅಮೃತಕಲಾ ಇವರು ಮಾತನಾಡಿ ಮಕ್ಕಳ ಮನಸ್ಸನ್ನು ಧನಾತ್ಮಕವಾಗಿ ಕಟ್ಟುವ ಕಾರ್ಯದಲ್ಲಿ ನಾವು ತೊಡಗಬೇಕು. ಈ ದಿನದ ಮಕ್ಕಳ ಚಟುವಟಿಕೆಯನ್ನು ನೋಡಿದಾಗ ಮನತುಂಬಿ ಬಂತು. ಮಗುವಿನ ಸೃಜನಾತ್ಮಕ ಚಟುವಟಿಕೆಗೆ ಅಡಿಪಾಯ ಹಾಕುವ ಪ್ರಯತ್ನದಲ್ಲಿ ವೀರಮಂಗಲ ಶಾಲೆಯ ಕಾರ್ಯಕ್ಕೆ  ಇಲಾಖಾ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು.

ಎಸ್ ಜಿ ಎಮ್ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶ್ರೀ ಶ್ರೀನಿವಾಸ್ ಎಚ್ ಎಂ ಅವರು ಮಾತನಾಡಿವ ವೀರಮಂಗಲ ಶಾಲೆಯು ಕ್ರೀಡಾ ಚಟುವಟಿಕೆಯಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದೆ. ಶೈಕ್ಷಣಿಕವಾಗಿಯು ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಕಾರ್ಯದ ಹಿಂದೆ ಇಲ್ಲಿನ ಮಕ್ಕಳ ಶ್ರಮ, ಶಿಕ್ಷಕರ ಶ್ರಮ ಸ್ತುತ್ಯಾರ್ಹ, ಸುಂದರವಾದ ಸಭಾಂಗಣ, ಸುಂದರವಾದ ಪರಿಸರದಲ್ಲಿ ಓದುತ್ತಿರುವ ಮಕ್ಕಳು ಧನ್ಯರು ಎಂದರು .

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ನವೀನ್ ರೈ ಮಾತನಾಡಿ ಸಾಧಕರ ಬಹಳಷ್ಡು ಮಂದಿ ನಮ್ಮ ದೇಶದಲ್ಲಿದ್ದಾರೆ . ಅವರ ಹಿಂದೆ ಒಬ್ಬ ಗುರು ಇರುತ್ತಾನೆ ಅಂತಹ ಗುರುಗಳನ್ನು ಹೊಂದಿದೆ ಈ ವೀರಮಂಗಲ ಶಾಲೆಯನ್ನು ಊರಿನವರ ಶ್ರಮವನ್ನು ಗೌರವಿಸುತ್ತೇನೆ ಎಂದರು.

ವೇದಿಕೆಯಲ್ಲಿ ನಿವೃತ್ತ ಮುಖ್ಯ ಗುರು ಶ್ರೀ ಮೋನಪ್ಪ ಗೌಡ ವೀರಮಂಗಲ, ಪಂಚಾಯತ್ ಸದಸ್ಯರಾದ ಚಿತ್ರಾ, ಬೇಬಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ, ಶಿಕ್ಷಕರಾದ ಶೋಭಾ, ಶ್ರೀಲತಾ, ಗಾಯತ್ರಿ ಅಡುಗೆ ಸಿಬ್ಬಂಧಿಗಳು ಸಹಕರಿಸಿದರು. ಎಸ್ ಡಿ ಎಂ ಸಿ ಸದಸ್ಯರಾದ ರಜಾಕ್, ದಿನೇಶ್ ಶೆಟ್ಟಿ ಲಿಂಗಪ್ಪಗೌಡ, ಹಮೀದ್, ಸಮೀರ್, ಸುರೇಶ, ರತ್ನಾವತಿ, ಅತಿಥಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಆನಂದ ಗೌಡ ಗುತ್ತು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅನುಪಮಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು. ಮಕ್ಕಳ ಶಿಸ್ತಿನ ಪಥಸಂಚಲನ, ಕ್ರೀಡಾ ಜ್ಯೋತಿಯ ಸಂಚಾರ, ಎಲ್ಲರ ಮೆಚ್ಚುಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here