ಸಬಳೂರು ಶಾಲಾ ಹಿರಿಯ ವಿದ್ಯಾರ್ಥಿಗಳ, ಪೋಷಕರ ಕ್ರೀಡಾಕೂಟ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳ ಹಾಗೂ ಪೋಷಕರ ಕ್ರೀಡಾಕೂಟ ಇತ್ತೀಚೆಗೆ ಜರುಗಿತು.


ಕ್ರೀಡಾಕೂಟವನ್ನು ಹಿರಿಯರಾದ ಲಿಂಗಪ್ಪ ಗೌಡ ಕಡೆಂಬ್ಯಾಲ್‌ರವರು ಉದ್ಘಾಟಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮರುವೇಲ್, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮನೋಹರ್ ಸಬಳೂರು, ಎಸ್‌ಡಿಎಂಸಿ ಉಪಾಧ್ಯಕ್ಷೆ ಯಕ್ಷತಾ, ಶಾಲಾ ಮುಖ್ಯಗುರು ವಾರಿಜಾ, ಗ್ರಾಮ ಪಂಚಾಯತಿ ಸದಸ್ಯರಾದ ಚಿದಾನಂದ ಪಾಣಿಯಾಲ್, ಯತೀಶ ಸೀಗೆತ್ತಡಿ, ಶಶಿಕಲಾ ಏಣಿತ್ತಡ್ಕ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಎರ್ಮಡ್ಕ ಸ್ವಾಗತಿಸಿದರು. ಚಿದಾನಂದ ಸಬಳೂರು ವಂದಿಸಿದರು. ಶಿಕ್ಷಕ ಶೇಖರ್ ನಿರೂಪಿಸಿದರು. ಬೆಳಗ್ಗೆಯಿಂದ ಸಾಯಂಕಾಲದ ತನಕ ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ಜರುಗಿತು. ಕ್ರೀಡಾಪಟುಗಳಿಗೆ ಮಜ್ಜಿಗೆ ವಿತರಣೆ ಹಾಗೂ ಭೋಜನ ವ್ಯವಸ್ಥೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವ್ಯವಸ್ಥೆಗೊಳಿಸಿದ್ದರು.

LEAVE A REPLY

Please enter your comment!
Please enter your name here