ದಲಿತ ನಾಯಕ ಡೀಕಯ್ಯ ಸಂಶಯಾಸ್ಪದ ಸಾವಿನ ಪ್ರಕರಣ-ಬೆಳ್ತಂಗಡಿಯಲ್ಲಿ ಫೀಲ್ಡ್ ಗಿಳಿದ ಸಿಐಡಿ ತಂಡ-ತನಿಕೆ ಚುರುಕು

0

ಬೆಳ್ತಂಗಡಿ :ಕಳೆದ  ಜುಲೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿರಿಯ ದಲಿತ ನಾಯಕ, ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯ ಅವರ ಸಾವಿನ ಕುರಿತು ಸಿಐಡಿ ತನಿಖೆ ಆರಂಭಿಸಿದೆ.ಉಪ್ಪಿನಂಗಡಿಯಲ್ಲಿ ಬಿಎಸ್ ಎನ್ ಎಲ್ ನಿವೃತ್ತ ಉದ್ಯೋಗಿಯಾಗಿ ಕರ್ತವ್ಯನಿರ್ವಹಿಸಿ ನಿವೃತ್ತಿಯಾಗಿದ್ದ ಪಿ ಡೀಕಯ್ಯ ಜುಲೈ 6 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಕುಸಿದು ಬಿದ್ದು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ನಂತರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಜುಲೈ 8 ರಂದು ನಿಧನ ಹೊಂದಿದರು.

ನಂತರದಲ್ಲಿ ಡೀಕಯ್ಯರವರ ಸಾವಿನ ಬಗ್ಗೆ ಹಲವಾರು ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಡೀಕಯ್ಯರ ಕುಟುಂಬಸ್ಥರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಅಧಿಕಾರಿಗಳ ನೇತೃತ್ವದಲ್ಲಿ  ಮೃತದೇಹವನ್ನು ಹೊರತೆಗೆದು ವೈದ್ಯಾಧಿಕಾರಿಗಳ ತಂಡದ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಿದ್ದರು.

 ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ

ಡೀಕಯ್ಯ ಸಾವಿನ ಕುರಿತು ಹೆಚ್ಚಿನ ತನಿಖೆಗೆ ಆಗ್ರಹಿಸಿ ಡೀಕಯ್ಯರ ಕುಟುಂಬ ಕೇಸನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು ,ಈ ಹಿನ್ನಲೆಯಲ್ಲಿ ಸರ್ಕಾರ ಸಿಐಡಿ ತನಿಖೆಗೆ ಸೂಚನೆ ನೀಡಿತ್ತು. ಇದೀಗ ಸಿಐಡಿ ತನಿಖೆ ಆರಂಭಗೊಂಡಿದ್ದು, ಮೂವರು ಅಧಿಕಾರಿಗಳ ತಂಡ ಬೆಳ್ತಂಗಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಪೊಲೀಸ್ ಮಾಹಿತಿಯನ್ನು ಪಡೆದು, ಅಂದಿನ ಘಟನೆಯ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿದ ನಂತರ ಡೀಕಯ್ಯರವರ ಗರ್ಡಾಡಿ ಮನೆಗೂ ಭೇಟಿ ನೀಡುವ ಸಾಧ್ಯತೆಯಿದೆ  ಒಟ್ಟಿನಲ್ಲಿ ಡೀಕಯ್ಯರಸಾವಿನ ಪ್ರಕರಣದ ತನಿಖೆ ಚುರುಕುಗೊಂಡಂತಾಗಿದೆ.

LEAVE A REPLY

Please enter your comment!
Please enter your name here