ರೆಂಜ: ಅಯ್ಯಪ್ಪ ಸ್ವಾಮಿ ಭಜನಾ ಸಂಘ ಬೆಳ್ಳಿಹಬ್ಬ ಸಂಪನ್ನ :ದಿವ್ಯಜ್ಯೋತಿ ಮೆರವಣಿಗೆ, ‘ಮಣಿಕಂಠ ಮಹಿಮೆ’ ನಾಟಕ

0

ಬೆಟ್ಟಂಪಾಡಿ: ಇಲ್ಲಿನ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮಗಳು ದ. 22 ರಂದು ಸಂಜೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ದಿವ್ಯಜ್ಯೋತಿ ಮೆರವಣಿಗೆ, ನಗರ ಭಜನಾ ಮಂಗಲೋತ್ಸವದೊಂದಿಗೆ ಸಂಪನ್ನಗೊಂಡಿತು.


ಸಂಜೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ದೇವಳದ ಅನುವಂಶಿಕ ಆಡಳಿತ ಮೊಕ್ತೇಸ ವಿನೋದ್ ಕುಮಾರ್ ಬಲ್ಲಾಳ್ ರವರ ಉಪಸ್ಥಿತಿಯಲ್ಲಿ ದಿವ್ಯಜ್ಯೋತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಮಣಿಕಂಠ ಚೆಂಡೆ ಮೇಳದವರಿಂದ ಸಿಂಗಾರಿ ಮೇಳ, ಶ್ರೀ ಶಾಂತಾದುರ್ಗಾ ಕುಣಿತ ಭಜನಾ ತಂಡ ಹಾಗೂ ಚಿಣ್ಣರ ಕುಣಿತ ಭಜನಾ ತಂಡ ಇರ್ದೆ ಬೈಲಾಡಿಯವರ ‘ಕುಣಿತ ಭಜನೆ’ ಯೊಂದಿಗೆ ಮೆರವಣಿಗೆ ಸಾಗಿತು. ಅಯ್ಯಪ್ಪ ವೃತ ಮಾಲಾಧಾರಿಗಳು ಮೆರವಣಿಗೆಯುದ್ದಕ್ಕೂ ಅಯ್ಯಪ್ಪ ನಾಮ ಸ್ಮರಣೆಯೊಂದಿಗೆ ಕುಣಿಯುತ್ತಾ ಹೆಜ್ಜೆ ಹಾಕಿದರು.


ಅಯ್ಯಪ್ಪ ಮಂದಿರದಲ್ಲಿ ಗುರುಸ್ವಾಮಿ ಕೃಷ್ಣಪ್ಪ ಗೌಡರ ನೇತೃತ್ವದಲ್ಲಿ ದೇವರಿಗೆ ಮಂಗಳಾರತಿ, ನಗರ ಭಜನೆಯ ಮಂಗಲೋತ್ಸವ ಮಾಡಲಾಯಿತು.


ಮಣಿಕಂಠನ ಮಹಿಮೆ
ನಂತರ ವಿಜಯಕುಮಾರ್ ಕೊಡಿಯಾಲ್‌ಬೈಲ್ ಸಾರಥ್ಯದ ಕಲಾಸಂಗಮ ಕಲಾವಿದರು‌ ಮಂಗಳೂರು ಪ್ರಸ್ತುತಪಡಿಸಿದ ‘ಮಣಿಕಂಠನ ಮಹಿಮೆ’ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.


ಅನ್ನಸಂತರ್ಪಣೆ
ಮಧ್ಯಾಹ್ನ ಮತ್ತು ರಾತ್ರಿ 2 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು. ಅನ್ನಸಂತರ್ಪಣೆ, ಅಯ್ಯಪ್ಪ ಸ್ವಾಮಿ ಪ್ರಸಾದ ವಿತರಣೆ, ಪೂರ್ಣಕುಂಭ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ, ಮೆರವಣಿಗೆಗಳಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು, ಅಯ್ಯಪ್ಪ ಭಕ್ತವೃಂದ, ಅಯ್ಯಪ್ಪ ವೃತಧಾರಿಗಳು, ಅಯ್ಯಪ್ಪ ಸೇವಾ ಟ್ರಸ್ಟಿಗಳು, ಭಜನಾ ಮಂದಿರದ ಪದಾಧಿಕಾರಿಗಳು, ಬೆಳ್ಳಿಹಬ್ಬ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶ್ರೀ ಶಬರಿ ಮಹಿಳಾ ಭಜನಾ ಮಂಡಳಿ ಸದಸ್ಯರು ಅಚ್ಚುಕಟ್ಟಾದ ವ್ಯವಸ್ಥೆಗಳ ಜೋಡಣೆಯಲ್ಲಿ ಸಹಕರಿಸಿದರು.

ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಭಜನಾ ಮಂಡಳಿಯವರು ಭಜನಾ ಸೇವೆ ನಡೆಸಿಕೊಟ್ಟರು.
ಧಾರ್ಮಿಕ, ಸಾಂಸ್ಕೃತಿಕ, ಸಮಯ ಮತ್ತು ವ್ಯವಸ್ಥೆಯ ದೃಷ್ಟಿಕೋನದಿಂದ‌ ಒಟ್ಟು ‌ಕಾರ್ಯಕ್ರಮ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಡೆದಿತ್ತು.

LEAVE A REPLY

Please enter your comment!
Please enter your name here