ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘಧ ಅಧ್ಯಕ್ಷ ಡಿ. ಕೆಂಪಣ್ಣ ಅವರನ್ನು ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ
ಕಮಿಷನ್ ಆರೋಪದಲ್ಲಿ ರಾಜ್ಯ ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನ ಅವರು ಹೂಡಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ರಾಜ್ಯ ಸರಕಾರದ ವಿರುದ್ಧ ೪೦ ಪರ್ಸಂಟ್ ಕಮಿಷನ್ ಆರೋಪ ಮಾಡಿರುವ ಕೆಂಪಣ್ಣ ಪ್ರದಾನಿ ಮೋದಿಗೂ ಪತ್ರ ಬರೆದಿದ್ದರು. ಇದು ಎಲ್ಲಾ ಪತ್ರಿಕೆ ಮತು ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಇದರಿಂದ ಮುನಿರತ್ನ ಅವರ ವರ್ಚಸ್ಸಿಗೆ ದಕ್ಕೆಯಾಗಿದೆ ಎಂದು ಅಭಿಪ್ರಾಯ ಪಟ್ಟ ಬೆಂಗಳೂರು ಮ್ಯಾಜಿಸ್ಟ್ರೇಸ್ ಕೋರ್ಟ್, ಕೆಂಪಣ್ಣ ಸೇರಿದಂತೆ ೧೯ ಮಂದಿಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಡಿ. ಕೆಂಪಣ್ಣ, ಕೃಷ್ಣಾರೆಡ್ಡಿ, ನಟರಾಜು, ಗುರುಸಿದ್ದಪ್ಪ ಅವರನ್ನು ವೈಯಾಲಿಕಾನಲ್ ಪೊಲೀಸರು ಬಂದಿಸಿದ್ದಾದರೂ, ರಾತ್ರಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.