ಭಾರತದಲ್ಲಿ ಕೊರೋನಾ ಉಲ್ಬಣವಾಗುವುದನ್ನು ನಿರೀಕ್ಷಿಸಬೇಡಿ- ಡಾ| ಕಂಗ್

0

 

ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಹೊಸ ರೂಪಾಂತರಿಗಳಾದ ಎಕ್ಸ್‌ಬಿಬಿ ಮತ್ತು ಬಿಎಫ್-7 ವಿಶ್ವವನ್ನು ತಲ್ಲಣಗೊಳಿಸಿದೆ. ಆದರೆ ಭಾರತದಲ್ಲಿ ಈ ತಳಿ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಖ್ಯಾತ ವೈರಲಾಜಿಸ್ಟ್ ಗಗನ್‌ದೀಪ್‌ಕಂಗ್ ತಿಳಿಸಿದ್ದಾರೆ. ಈಗಾಗಲೇ ಭಾರತದಲ್ಲಿ ಬಿಎಫ್-7 ಪ್ರಕರಣ ವರದಿಯಾಗಿದೆ.

ಆದರೆ ಇದರಿಂದ ಕೊರೋನಾ ಪ್ರಕರಣ ಜಾಸ್ತಿಯಾಗಿಲ್ಲ. ಹಾಗಾಗಿ ಸದ್ಯಕ್ಕೆ ಭಾರತದಲ್ಲಿ ಕೊರೋನಾ ಉಲ್ಬಣವಾಗತ್ತದೆ ಎಂದು ನಿರೀಕ್ಷಿಸಬೇಡಿ ಎಂದು ಕ್ರಿಶ್ಚಿಯನ್ ವ್ಯದ್ಯಕೀಯ ಕಾಲೇಜಿನ ವಿಜ್ಞಾನ ವಿಭಾಗದ ಪ್ರಾದ್ಯಾಪಕರಾಗಿರುವ ಡಾ|| ಕಂಗ್ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ ೨೦೧ ಕೊರೋನಾ ಸೋಂಕು ಪ್ರಕರಣ ದೃಡಪಟ್ಟಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here