ಪುತ್ತೂರು: ಪುತ್ತೂರು ನಗರ ಸಭೆ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಮೂಗು ಮುಚ್ಚಿ ನಡೆಯಬೇಕಾದ ಸ್ಥಳವೊಂದಿದೆ ಎಂದರೆ ಯಾರು ನಂಬಲಿಕ್ಕಿಲ್ಲ. ಆದರೆ ಇದು ನಿಜ. ದರ್ಬೆ ಹಳೆಯ ಅಂಚೆ ಕಚೇರಿ ಬಳಿಯ ಪ್ರಮುಖ ತೋಡಿನಲ್ಲಿ ಕೊಳಚೆ ನೀರು ಶೇಖರಣೆಯಾಗಿದ್ದು, ಈ ಭಾಗದಲ್ಲಿ ಜನರು ನಡೆದು ಹೋಗುವಾಗ ಮೂಗು ಮುಚ್ಚಿ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಶೇಖರಣೆಯಾದ ಕಲುಷಿತ ನೀರು ಕೆಟ್ಟ ವಾಸನೆ ಯಿಂದ ಕೂಡಿದ್ದು, ಸೊಳ್ಳೆಗಳ ಉಗಮ ಸ್ಥಾನವಾಗಿದೆ.ತೋಡಿನ ಈ ಕಲುಷಿತ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ಕಾಯಿಲೆಗೆ ಜನ ತುತ್ತಾದಲ್ಲಿ ಅತಿಶಯವಿಲ್ಲ.
ಚೀನಾದಲ್ಲಿ ಕೋರೋನಾದಿಂದ ಪ್ರಾಣ ಕಳೆದು ಕೊಳ್ಳುವ ಜನರ ಬಗ್ಗೆ ತಲೆಕಡಿಸಿಕೊಂಡು ಮುಂಜಾಗ್ರತಾ ಕ್ರಮ ವಹಿಸಲು ಎಚ್ಚರಿಸುವ ನಮ್ಮ ಸ್ಥಳಿಯ ಸಂಸ್ಥೆ ಇತ್ತ ಕಡೆ ತುರ್ತಾಗಿ ಗಮನ ಹರಿಸಬೇಕಾದ ಅವಶ್ಯಕತೆಯಿದೆ.