ಸಹಾಯಹಸ್ತ ಲೋಕ ಸೇವಾ ಟ್ರಸ್ಟ್‌ನಿಂದ ಚಿಕಿತ್ಸೆಗೆ ಸಹಾಯಧನ

0

ಪುತ್ತೂರು: ಸಹಾಯಹಸ್ತ ಲೋಕ ಸೇವಾ ಟ್ರಸ್ಟ್  ಕರ್ನಾಟಕ, ನೊಂದವರ ಪಾಲಿಗೆ ಆಸರೆ ಪುತ್ತೂರು ಇವರ ವತಿಯಿಂದ ಕುಂದಾಪುರ ತಾಲೂಕು ಕಟ್‌ಬೆಲ್ತುರು ಗ್ರಾಮದ ಗುರುಚರಣ್ ಶ್ಯಾಮಲಾ ದಂಪತಿ ಪುತ್ರ 4 ವರ್ಷ ಪ್ರಾಯದ ಪವನ್ ಕುಮಾರ್ ಎಂಬ ಬಾಲಕನ ಚಿಕಿತ್ಸೆಗಾಗಿ ಭವತಿ ಭೀಕ್ಷಾ೦ ದೇಹಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಬಾಲಕ ತಲೆಸೀಮಿಯ ಎಂಬ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ 40  ಲಕ್ಷ ರೂಪಾಯಿ ಅಗತ್ಯವಿದೆ. ಮಲ್ಪೆ ವಡಬಾಂಡೆಶ್ವರ ಪವಿತ್ರ ತೀರ್ಥದ ಸಂದರ್ಭದಲ್ಲಿ ಟ್ರಸ್ಟಿನ ವತಿಯಿಂದ ಭವತಿ ಭಿಕ್ಷಾಂದೇಹಿ ನಡೆಸಿ ದಾನಿಗಳಿಂದ ಸಂಗ್ರಹವಾದ ಮೊತ್ತ 40,100 ರೂ.ವನ್ನು ಮಗುವಿಗೆ ಮಲ್ಪೆ ಪೊಲೀಸ್ ಠಾಣಾ ವಠಾರದಲ್ಲಿ ವಿತರಿಸಲಾಯಿತು.

ಮಲ್ಪೆ ಠಾಣಾ ಪಿ.ಎಸ್.ಐ ಸುಷ್ಮಾ ಭಂಡಾರಿರವರ ಉಪಸ್ಥಿಯಲ್ಲಿ ಸಮಾಜ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ, ಈಶ್ವರ್ ಮಲ್ಪೆರವರ ಮೂಲಕ ಮಗುವಿಗೆ ಸಹಾಯಧನ ಹಸ್ತಾಂತರಿಸಲಾಯಿತು.

ಈಶ್ವರ್ ಮಲ್ಪೆಯವರು ಮಾತನಾಡಿ ಇನ್ನು ಮುಂದಕ್ಕೆ ಟ್ರಸ್ಟಿನ ವತಿಯಿಂದ ನಡೆಸುವ ಸೇವಾಹಸ್ತ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿ ಈ ಮಗು ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದರು. ಸುಷ್ಮಾ ಭಂಡಾರಿ ಮಾತನಾಡಿ ಟ್ರಸ್ಟಿನ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು.

ತುಳುನಾಡ ಪೊರ್ಲು ಸೇವಾ ಟ್ರಸ್ಟಿನ ಚಂದು ಕೋಟ್ಯಾನ್ ಕುಪ್ಪೆಪದವು, ಟ್ರಸ್ಟಿನ ಅಧ್ಯಕ್ಷ ಡಿ.ಎಸ್. ಒಡ್ಯ, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಸ್ಫೂರ್ತಿ ಹಾಗೂ ಸೇವಾಹಸ್ತಕ್ಕೆ ಸಹಕರಿಸಿದ ಬಿಲಾಲ್ ಮಲ್ಪೆ, ಸರಸ್ವತಿ, ವಿದ್ಯಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಮನೋಹರ್ ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here