ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಿಸಿರುವ ಗ್ರೀನ್ ರೈಡ್ 2.0 ಸೈಕಲ್ ಯಾತ್ರೆ ಡಿ.26ರಂದು ಮಂಗಳೂರು ತಲುಪಿದೆ. ಡಿ.19ರಂದು ಮುಂಬೈಯಿಂದ ಆರಂಭಗೊಂಡ ಈ ಸೈಕಲ್ ಜಾಥಾ 8 ದಿನಗಳ ಬಳಿಕ 10 ನಗರಗಳ ಮೂಲಕ 1400 ಕಿ.ಮೀ. ದೂರ ಕ್ರಮಿಸಿ ಮಂಗಳೂರಿಗೆ ಆಗಮಿಸಿದೆ. ಮಂಗಳೂರಿನಲ್ಲಿ ಯಾತ್ರೆಯನ್ನು ಸಮಾಪನಗೊಳಿಸಿದ ಬಳಿಕ ಮಾತನಾಡಿದ ಜಾಥಾದ ರೂವಾರಿ ಖ್ಯಾತ ಮೋಡೆಲ್ ಮಿಲಿಂದ್ ಸೋಮನ್ ಪರಿಸರ ರಕ್ಷಣೆ ನಾಗರಿಕರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಸಮಸ್ಯೆ ಮಿತಿಮೀರಿದ್ದು ಮಂಗಳೂರಿನ ನಾಗರೀಕರು ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪರಿಸರವನ್ನು ಸಹಜ ಸ್ಥಿತಿಗೆ ತರಬೇಕಾಗಿದೆ ಎಂದು ಹೇಳಿದರು.