ಪುತ್ತೂರು: ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರ ಕುರಿತು ಉಪನ್ಯಾಸಕ ಹಾಗೂ ಅಂಕಣಕಾರ ಡಾ|ನರೇಂದ್ರ ರೈ ದೇರ್ಲ ಬರೆದ ’ಸುರಂಗದ ನೀರಿನಲ್ಲಿ ತೇಲಿಬಂತು ಪದ್ಮಶ್ರೀ’ ಎಂಬ ಲೇಖನವು ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಕ್ಕೆ ಸೇರ್ಪಡೆಗೊಂಡಿದೆ. ವರ್ಷದ ಹಿಂದೆ ಡಾ. ದೇರ್ಲ ಅವರು ’ತರಂಗ’ ವಾರಪತ್ರಿಕೆಗೆ ಬರೆದ ಈ ವಿಶೇಷ ಲೇಖನವನ್ನು ತುಮಕೂರು ವಿಶ್ವವಿದ್ಯಾನಿಲಯದ ಪದವಿ ಪಠ್ಯದ ಆಯ್ಕೆ ಸಮಿತಿಯು ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಪದವಿಯ ಎಲ್ಲಾ ವಿದ್ಯಾರ್ಥಿಗಳು ಓದುವ ಸ್ಪೂರ್ತಿಯ ಕಥನ ಮಾಲಿಕೆಯಲ್ಲಿ ಈ ಲೇಖನವನ್ನು ಒಂದಾಗಿ ಸೇರಿಸಿದೆ. ಸಾಲುಮರದ ತಿಮ್ಮಕ್ಕ, ಹಾಜಬ್ಬ, ಕಾಮೇಗೌಡ, ಸರಸ್ವತಿ ಮೊದಲಾದವರು ಸಾಧಿಸಿದ ಸಾಧನೆಯ ಸ್ಪೂರ್ತಿಯ ಕಥನ ಮಾಲಿಕೆಯಲ್ಲಿ ಮಹಾಲಿಂಗ ನಾಯಕರ ಲೇಖನವೂ ಒಂದಾಗಿದೆ. ಇದೇ ಲೇಖನವನ್ನು ಮಂಗಳೂರಿನ ಯೆನೇಪೊಯ ವಿಶ್ವವಿದ್ಯಾನಿಲಯವು ಪದವಿಯ ಪಠ್ಯಕ್ಕೆ ಆಯ್ಕೆ ಮಾಡಿದೆ.
Home ಚಿತ್ರ ವರದಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರ ಕುರಿತ ಡಾ|ನರೇಂದ್ರ ರೈ ದೇರ್ಲರವರ ಲೇಖನ ತುಮಕೂರು ವಿ.ವಿ...