ಆಲಂಕಾರು : ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಉದ್ಘಾಟನೆ

0

ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಆಲಂಕಾರು ಗ್ರಾ.ಪಂ ಸಭಾಂಗಣದಲ್ಲಿ ಜ.11 ರ ತನಕ ನಡೆಯುವ ಉಚಿತ ಫೂಟ್ ಪಲ್ಸ್ ಥೆರಪಿಯನ್ನು ಆಲಂಕಾರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿಯವರು ಉಧ್ಘಾಟಿಸಿ ಶುಭಹಾರೈಸಿದರು. ಆಲಂಕಾರು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.


ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ಮಾತನಾಡಿ ಗ್ರಾಮೀಣ ಭಾಗವಾದ ಆಲಂಕಾರಿಗೆ ಫೂಟ್ ಪಲ್ಸ್ ಥೆರಪಿ ಪ್ರಥಮ ಬಾರಿಗೆ ಆಯೋಜನೆ ಮಾಡಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ತಿಳಿಸಿದರು.

ಪುತ್ತೂರು ಸೆಂಟರ್ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಪ್ರಭಾಕರ ಸಾಲಿಯಾನ್ ಮಾತನಾಡಿ ಫೂಟ್ ಪಲ್ಸ್ ಥೆರಪಿ ಆರೋಗ್ಯದೆಡೆಗೆ ಒಂದು ಹೆಜ್ಜೆ ಎನ್ನುವ ನೆಲೆಗಟ್ಟಿನ ಮೇಲೆ ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿದೆ. ಫೂಟ್ ಪಲ್ಸ್ ಥೆರಪಿಯಿಂದ ರಕ್ತ ಪರಿಚಲನೆ ಮತ್ತು ನರಗಳ ಸಮಸ್ಯೆಗಳನ್ನು ಔಷಧಿ ರಹಿತವಾಗಿ, ಅಡ್ಡಪರಿಣಾಮವಿಲ್ಲದೆ ನಿವಾರಿಸಬಹುದು. ಈ ಥೆರಪಿಯಿಂದ 5 ಕಿ.ಮಿ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯುಸೆಳೆತ, ಊತ, ಪಾರ್ಕಿನ್ ಸನ್, ಸಯಾಟಕಾ, ಸರ್ವಿಕಲ್ ಸ್ಪಾಂಡಿಲೈಟಿಸ್, ನಿದ್ರಾಹೀನತೆ, ಥೈರಾಯಿಡ್, ಪಾಶ್ವ೯ವಾಯು, ಬೆನ್ನುನೋವು, ಬೊಜ್ಜುನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ರೂಪಶ್ರೀ ಪಟ್ಟೆ ಉಪಸ್ಥಿತರಿದ್ದರು. ಗ್ರಾ.ಪಂ ಕಾರ್ಯದರ್ಶಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಆಲಂಕಾರು ಮೂರ್ತೆದಾರ ಸಹಕಾರಿ ಸಂಘದ ನಿರ್ದೇಶಕ ಸೇಸಪ್ಪ ಪೂಜಾರಿ ವಂದಿಸಿದರು. ಗ್ರಾ.ಪಂ ಸದಸ್ಯರು, ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ನಿರ್ದೆಶಕರು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here