








ಪುತ್ತೂರು: ಆಳ್ವಾಸ್ ಜಾಂಬೂರಿ ಉತ್ಸವದಲ್ಲಿ ಪುತ್ತೂರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ನ ವಿದ್ಯಾರ್ಥಿಗಳಿಂದ ವಿದ್ವಾನ್ ಸುದರ್ಶನ್ ಭಟ್ ರವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಾರ್ಯಕ್ರಮ ನೃತ್ಯಾಂಕುರ ಡಿ.23ರಂದು ನಡೆಯಿತು. ವಿದ್ಯಾರ್ಥಿಗಳಾದ ವಿದುಷಿ ಡಿಂಪಲ್ ಅನಂತಾಡಿ, ಜೀವಿತ ಅನಂತಾಡಿ, ವೈಷ್ಣವಿ ನಾಯಕ್ ಕಲ್ಲೇಗ, ಅನುಶ್ರೀ ಸಾಮೆತ್ತಡ್ಕ ಹಾಗೂ ಅದಿತಿ ಎಂ ಎಸ್ ರವರು ಭಾಗವಹಿಸಿದ್ದರು.













