








ಶಿವಮೊಗ್ಗ :ನಾಡಗೀತೆಯನ್ನು ಅಪಮಾನಿಸಿದ ರೋಹಿತ್ ಚಕ್ರತೀರ್ಥ ವಿರುದ್ದ ತೀರ್ಥಹಳ್ಳಿಯ ಕೊಪ್ಪ ವೃತ್ತದಲ್ಲಿನ ಕುವೆಂಪು ಪ್ರತಿಮೆ ಮುಂದೆ ಕುವೆಂಪು ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಕುವೆಂಪು ಅವರನ್ನು ಅವಮಾನಿಸುವ ಮೂಲಕ ವಿಕೃತಿ ಮೆರೆದಿದ್ದ ರೋಹಿತ್ ಚಕ್ರತೀರ್ಥ ಕಡೆಗೊಲ್ ವಿಚಾರ ಮಂಥನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ಬಗ್ಗೆ ಮಾತನಾಡಲು ಬಂದಿದ್ದು ಅವಕಾಶ ನೀಡಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದರು.














