ಕಸಾಪ ಕಡಬ ತಾಲೂಕು ಘಟಕದ ವತಿಯಿಂದ ಮಕ್ಕಳ ಕಥೆ ಮತ್ತು ಕವನ ರಚನಾ ಕಮ್ಮಟ

0

ರಾಮಕುಂಜ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಡಬ ತಾಲೂಕು ಘಟಕ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪುತ್ತೂರು ಮತ್ತು ಸುಳ್ಯ ಇವರ ಸಹಯೋಗದೊಂದಿಗೆ ಕಡಬ ತಾಲೂಕು ವ್ಯಾಪ್ತಿಯ ಕ್ಲಸ್ಟರ್‌ವಾರು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕಥೆ ಮತ್ತು ಕವನ ರಚನಾ ಕಮ್ಮಟ ನಡೆಯಲಿದೆ ಎಂದು ಕಸಾಪ ಕಡಬ ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ರಾಮಕುಂಜ ತಿಳಿಸಿದ್ದಾರೆ.

ಆರಂಭದಲ್ಲಿ ಕ್ಲಸ್ಟರ್ ಹಂತದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಪ್ರಾಥಮಿಕ(೫-೭) ಮತ್ತು ಪ್ರೌಢಶಾಲಾ (೮-೯)ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸುವುದು. ಪ್ರತಿ ಶಾಲೆಗಳಿಂದ ಕಥೆಗೆ ಇಬ್ಬರು ಮತ್ತು ಕವನಕ್ಕೆ ಇಬ್ಬರು ಮಕ್ಕಳನ್ನು ಆಯ್ಕೆ ಮಾಡಿ ಕ್ಲಸ್ಟರ್ ಹಂತಕ್ಕೆ ಕಳಿಸುವುದು. ಕ್ಲಸ್ಟರ್ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಕಥೆಗೆ ಹಾಗೂ ಕವನಕ್ಕೆ ಸಂಬಂಧಿಸಿ ಪ್ರಥಮ, ದ್ವಿತೀಯ ಸ್ಥಾನ ಆಯ್ಕೆ ಮಾಡಿ ಪ್ರಶಸ್ತಿ ನೀಡುವುದು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದು. ಕ್ಲಸ್ಟರ್ ಹಂತದ ಕಾರ್ಯಕ್ರಮ ನಡೆಸುವಾಗ ಆ ವ್ಯಾಪ್ತಿಯ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸಿ.ಎ.ಬ್ಯಾಂಕ್, ಹಾಲಿನ ಸೊಸೈಟಿ, ಗ್ರಾ.ಪಂ.,ಶಾಲಾ ಎಸ್‌ಡಿಎಂಸಿ ಅಧ್ಯಕ್ಷರನ್ನು ಹಾಗೂ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರನ್ನು ಸೇರಿಸಿಕೊಳ್ಳುವುದು. ಕ್ಲಸ್ಟರ್ ಹಂತದ ಕಮ್ಮಟ್ಟಕ್ಕೆ ೧೦ ಕನ್ನಡ ಶಾಲು, ೧೮ ಪುಸ್ತಕಗಳು, ೮ ಪ್ರಶಸ್ತಿ ಪತ್ರಗಳನ್ನು ಮತ್ತು ಕಮ್ಮಟ ನಡೆಸಲು ೧೫೦೦ ರೂ.ಕಸಪಾ ವತಿಯಿಂದ ನೀಡಲಾಗುವುದು ಎಂದು ಸೇಸಪ್ಪ ರೈಯವರು ತಿಳಿಸಿದ್ದಾರೆ. ತಾಲೂಕು ಹಂತದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ತಾಲೂಕು ಹಂತದ ಕಾರ್ಯಾಗಾರವನ್ನು ೨೦೨೩ನೇ ಜನವರಿ ಎರಡನೇ ವಾರದಲ್ಲಿ ಕಡಬ ಮಾದರಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಸಲಾಗುವುದು. ರಾಮಕುಂಜ ಕ್ಲಸ್ಟರ್ ಮಟ್ಟದ ಕಥೆ ಮತ್ತು ಕವನಾ ರಚನಾ ಕಮ್ಮಟ ಜ.೪ರಂದು ರಾಮಕುಂಜ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here