ಅನಧಿಕೃತ ಬ್ಯಾನರ್, ಕಟೌಟ್ ತೆರವು ಕಾರ್ಯಾಚರಣೆ

0

ಪುತ್ತೂರು:ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿ ಯಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಅನಧಿಕೃತ ಬ್ಯಾನರ್ ಮತ್ತು ಕಟೌಟ್‌ಗಳನ್ನು ನಗರಸಭೆಯಿಂದ ತೆರವು ಕಾರ್ಯಾಚರಣೆ ಜ.11ರಂದು ನಡೆಯಿತು.


ಅನಧಿಕೃತವಾಗಿ ಅಳವಡಿಸಿದ ಬ್ಯಾನರ್ ಮತ್ತು ಕಟೌಟ್‌ಗಳನ್ನು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಅಳವಡಿಸಲು ಅನುಮತಿ ಪಡೆಯಲು ಸಕಾಲ ಸೇವೆಯಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಬೇಕು.ಇಲ್ಲವಾದಲ್ಲಿ ಜ.11 ರಂದು ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ನಗರಸಭೆಯಿಂದ ತಿಳಿಸಲಾಗಿತ್ತು.ಅದೇ ರೀತಿ ಜ.11ರಂದು ಮಧ್ಯಾಹ್ನದ ಬಳಿಕ ನಗರಸಭೆಯಿಂದ ಅನಧಿಕೃತ ಬ್ಯಾನರ್ ಮತ್ತು ಕಟೌಟ್‌ಗಳ ತೆರವು ಕಾರ್ಯಾಚರಣೆ ನಡೆದಿದೆ.

LEAVE A REPLY

Please enter your comment!
Please enter your name here