ಜನಪ್ರಿಯ ಸೆಂಟ್ರಲ್ ಸ್ಕೂಲ್ ಗೆ ರಾಷ್ಟ್ರೀಯ ಮಟ್ಟದ “ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್” ಪ್ರಶಸ್ತಿ ಯ ಗರಿ

0

ವಿಟ್ಲ: ಕಂಬಳಬೆಟ್ಟುವಿನಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ಗೆ ರಾಷ್ಟ್ರೀಯ ಮಟ್ಟದ 2022-23 ನೇ ಸಾಲಿನ “ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್” ಪ್ರಶಸ್ತಿ ಲಭಿಸಿದೆ.


ಪ್ರಶಸ್ತಿಯನ್ನು ಇತ್ತೀಚೆಗೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದ 10ನೇ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ನೀಡಲಾಯಿತು.
ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಶಾಲೆಯ ನಿರ್ದೇಶಕರಾಗಿರುವ ನೌಶೀನ್ ಬದ್ರಿಯಾ ಹಾಗೂ ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ರವರು ಸಮ್ಮೇಳನದಲ್ಲಿ ಭಾಗಿಯಾಗಿ ಪ್ರಶಸ್ತಿಯನ್ನು ಪಡೆದು ಕೊಂಡರು.

ಸಮ್ಮೇಳನವನ್ನು ಪ್ರಖ್ಯಾತ ಬ್ರೈನ್ ಫೀಡ್ ಪತ್ರ್ರಿಕಾ ಸಂಸ್ಥೆ ಮತ್ತು ಇಟಿ ಟೆಕ್ ಎಕ್ಸ್ ಸಂಸ್ಥೆಯು ವತಿಯಿಂದ ಆಯೋಜಿಸಲಾಗಿತ್ತು.
ಮೂಲತಃ ಕಂಬಳಬೆಟ್ಟು ನಿವಾಸಿಯಾಗಿದ್ದು, ಹಾಸನದಲ್ಲಿ ಜನಪ್ರೀಯ ಆಸ್ಪತ್ರೆಯನ್ನು ಹೊಂದಿರುವಡಾ.ಅಬ್ದುಲ್ ಬಶೀರ್ ರವರ ಸಾರಥ್ಯದಲ್ಲಿ ವಿಟ್ಲದ ಕಂಬಳಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ಜನಪ್ರಿಯ ಸೆಂಟ್ರಲ್ ಶಾಲೆಯು ವಿಶ್ವ ದರ್ಜೆಯ ಮೂಲ ಸೌಕರ್ಯಗಳು, ಅಂತರಾಷ್ಟ್ರೀಯ ದರ್ಜೆಯ ಈಜುಕೊಳ, ಕ್ರೀಡಾ ಉಪಕರಣಗಳು ಹೀಗೆ ಹಲವಾರು ಸೌಕರ್ಯಗಳೊಂದಿಗೆ ಅತ್ತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಜನಪ್ರಿಯ ಶಾಲೆಯು ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಉತ್ತಮ ವೇದಿಕೆಯಾಗಿರುವುದನ್ನು ಗುರುತಿಸಿ ಬ್ರೈನ್ ಫೀಡ್ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿದೆ.

ಶಾಲಾ ಅಧ್ಯಕ್ಷರಾಗಿರುವ ನಸ್ರೀನ್ ಬಷೀರ್ ಹಾಗೂ ಸಲಹೆಗಾರರಾಗಿರುವ ವಿಶ್ವಸಂಸ್ಥೆಯ ಭಾರತದ ರಾಷ್ಟ್ರೀಯ ಕಾರ್ಯದರ್ಶಿ, ಖ್ಯಾತ ಶೈಕ್ಷಣಿಕ ತಜ್ಞ ಡಾ.ರವಿಕುಮಾರ್ ಎಲ್.ಪಿ ರವರ ನಿರ್ದೇಶನ ದೊಂದಿಗೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಜನಪ್ರಿಯ ಶಾಲೆಯಲ್ಲಿ ಮುಂದಿನ ವರ್ಷಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡಿರುವ ಹೊಸ ಕಟ್ಟಡವು ಸಿದ್ದಗೊಂಡಿದ್ದು, ಮುಂದಿನ ದಿನಗಳಲ್ಲಿ ಶಾಲೆಯನ್ನು ಮತ್ತಷ್ಟು ಅಭಿವೃಧ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ.

LEAVE A REPLY

Please enter your comment!
Please enter your name here